ಬಳ್ಳಾರಿ

ನುಡಿ ಕಟ್ಟಡದಲ್ಲಿ ದೇಸಿ ಮಾತು: ಸಂವಾದ

ನುಡಿ ಕಟ್ಟಡದಲ್ಲಿ ದೇಸಿ ಮಾತು: ಸಂವಾದ


ಲೋಕದರ್ಶನ ವರದಿ 

ಬಳ್ಳಾರಿ 26: ಜಾನಪದ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ನುಡಿ ಕಟ್ಟಡದಲ್ಲಿ ದೇಸಿ ಮಾತು-13 ಸಂವಾದ ಕಾರ್ಯಕ್ರಮ ಏರಿ​‍್ಡಸಿದ್ದು, “ಬೌದ್ಧ ಧಮ್ಮದ ರಾಜನೀತಿ” ವಿಷಯದ ಕುರಿತು ಪಿಎಚ್‌.ಡಿ. ಸಂಶೋಧನಾರ್ಥಿ ಅಭಿಲಾಷ ಹೆಚ್‌.ಕೆ ಅವರು ಪ್ರಬಂಧ ಮಂಡನೆ ಮಾಡಿದರು. 


ಭಾರತದ ಪರಂಪರೆಯ ಎಲ್ಲಾ ದರ್ಶನಗಳಲ್ಲಿ ಹಾಗೂ ಧಾರ್ಮಿಕ ಗ್ರಂಥಗಳಲ್ಲಿ ರಾಜನೀತಿಯ ಪ್ರಸ್ತಾಪವಿದೆ. ಬೌದ್ಧ ಧಮ್ಮದ ‘ಸಮಾಜೋ-ರಾಜಕೀಯ’ ಸಿದ್ಧಾಂತದ ಪ್ರಮುಖ ನಿಲುವುಗಳನ್ನು ರಾಜನೀತಿ ವಿವರಿಸುತ್ತದೆ. ಪ್ರಜಾಪ್ರಭುತ್ವದ ಆಶಯಗಳು, ಮಾನವ ಹಕ್ಕುಗಳು ಹಾಗೂ ಬಹುತ್ವದ ಕುರಿತು ಒಬ್ಬ ರಾಜ/ರಾಜಕಾರಣಿ/ಆಡಳಿತಗಾರನಿಗೆ ನೀಡಿರುವ ಸರಳವಾದ ನೀತಿಗಳ ಕುರಿತು ಮಾತನಾಡುತಾ,್ತ ತಾನು ಬಾಳಿ ಸಮಸ್ತಲೋಕವನ್ನು ಬಾಳಿಸಬಲ್ಲ ಒಂದು ಜೀವನ ಕ್ರಮ ಸರ್ವಕಾಲಿಕ ಹಾಗು ಸಾರ್ವತ್ರಿಕವಾದದ್ದು. ಈ ಬಗೆಯ ಸ್ವತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಪರಿಕಲ್ಪನೆಯನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ರವರು ಅವರೇ ಹೇಳಿದಂತೆ ಬುದ್ದನಿಂದ ಪಡೆದಿದ್ದರು. ಇದು ಧರ್ಮ, ಮೋಹ ಮತ್ತು ಭಯಗಳನ್ನು ಮೀರಿದ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಒತ್ತಾಸೆ ನೀಡಿರುವ ಸಂಗತಿಯಾಗಿದೆ.  

ನೈತಿಕ ಮೌಲ್ಯದ ಸ್ವರೂಪದಲ್ಲಿ ಬುದ್ಧಧಮ್ಮ ರಾಜನೀತಿಯನ್ನು ವ್ಯಕ್ತಪಡಿಸಿದರೆ, ಡಾ.ಬಿ.ಆರ್ ಅಂಬೇಡ್ಕರ್‌ರವರು ಅದನ್ನು ಕಾನೂನು ಮೂಲಕ ಶಾಸನಬದ್ದ ಪರಿಭಾಷೆಯಲ್ಲಿ ನಿರೂಪಿಸಿದ್ದಾರೆ. ನಿಸರ್ಗದತ್ತಕವಾದ ಹಕ್ಕುಗಳನ್ನು ಒಳಗೊಂಡ ಭಾರತದ ಸಂವಿಧಾನದ ಮೂಲಕ ಬೌದ್ಧಧಮ್ಮ ಭಾರತದಾದ್ಯಂತ ಸದಾ ಜೀವಂತವಾಗಿದೆ.  

ವಿಷಯ ಮಂಡನೆಕಾರರನ್ನು ಅಭಿನಂದಿಸುವ ಮೂಲಕ ಸಂವಾದದ ಅಧ್ಯಕ್ಷ ಎನ್‌.ಶಿಲಿನಾ ಕೋಟೆ ಅವರು ಮಾತು ಆರಂಭಿಸಿದರು. ‘ಸಂವಿಧಾನದ ಮಹತ್ತರ ಆಶಯಗಳನ್ನು ಎರಡೂವರೆ ವರ್ಷಗಳ ಹಿಂದೆಯೇ ಬುದ್ಧರು ಹೇಳಿದ್ದಾರೆ. ಡಾ.ಬಿ.ಆರ್ ಅಂಬೇಡ್ಕರ್‌ರವರಿಗೆ ಗೌತಮ ಬುದ್ಧರು ಪ್ರಭಾವಿಸಿಲ್ಲದಿದ್ದರೆ ಬಹುಶ: ಇಂತಹದ್ದೊಂದು ಪ್ರಜಾಸತ್ತಾತ್ಮಕ ಸಂವಿಧಾನ ಭಾರತಕ್ಕೆ ಧಕ್ಕುತ್ತಿರಲಿಲ್ಲವೆನೋ? ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. 

ಸಂವಾದದ ಚರ್ಚೆಯಲ್ಲಿ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಸಂಶೋಧನಾರ್ಥಿಗಳು ಭಾಗವಹಿಸಿದ್ದರು. ಸಂಶೋಧನಾರ್ಥಿ ಲಚಮಪ್ಪ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಂಶೋಧನಾರ್ಥಿ ಪರ್ವಿನ್‌ಬೇಗಂ ಪ್ರಾರ್ಥನೆಯ ಮೂಲಕ ಚಾಲನೆ ನೀಡಿದರು. ವೇದಿಕೆಯ ಉಪಸ್ಥಿತರನ್ನು ಸಂಶೋಧನಾರ್ಥಿ ನಾಗೇಶ್ ಪೂಜಾರ್ ಸ್ವಾಗತಿಸಿದರು. ಸಂಶೋಧನಾರ್ಥಿ ದೊಡ್ಡಮನಿ ಹುಲುಗಪ್ಪ ಅವರು ವಂದನಾರೆ​‍್ಣ ಮಾಡಿದರು. ಸಂಶೋಧನಾರ್ಥಿ ಪಂಪಾಪತಿ ವಿ. ಹಾಗೂ ಹನುಮಂತ ಡಿ. ಅವರು ಕಾರ್ಯಕ್ರಮದ ವರದಿಯನ್ನು ಮಾಡಿದರು. 


ಸುದ್ದಿ ಓದಿ