ದೇಸಿ ಸಂಸ್ಕೃತಿಯನ್ನು ಅಪ್ಪಿಕೊಳ್ಳದ ತಂತ್ರಜ್ಞಾನವು ಜನಪರವಾಗಿರಲಾರದು
ಹಂಪಿ 10: ಜಾನಪದ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಮಂಟಪ ಸಭಾಂಗಣದ ಡಾ. ರಾಜಕುಮಾರ್ ಸೆಮಿನಾರ್ ಹಾಲ್ನಲ್ಲಿ ದೇಸಿ ಮಾತು-5 ಸಂವಾದ ಮಾ. 10ರಂದು ಕಾರ್ಯಕ್ರಮ ಏರ್ಪಡಿಸಿದ್ದು, ಅಂಕೀಯ (ಡಿಜಿಟಲ್) ಯುಗದಲ್ಲಿ ಜನಪದ ಆಟಗಳ ಸ್ಥಿತ್ಯಂತರ ವಿಷಯದ ಕುರಿತು ಪಿಎಚ್.ಡಿ. ಸಂಶೋಧನಾರ್ಥಿ ಆನಂದಕುಮಾರ ಹೆಚ್.ಎಸ್. ಅವರು ಪ್ರಬಂಧ ಮಂಡನೆ ಮಾಡಿದರು.
ಆನಂದಕುಮಾರ ಹೆಚ್.ಎಸ್. ಅವರು ಮಾತನಾಡಿ ವ್ಯಕ್ತಿಯೊಬ್ಬರ ಸಾಮಾಜಿಕ, ಮಾನಸಿಕ, ಶಾರೀರಿಕ ಮತ್ತು ಬೌದ್ಧಿಕ ವಿಕಾಸದಲ್ಲಿ ಆಟಗಳು ತುಂಬಾ ಉಪಯುಕ್ತವಾದವು. ತಂತ್ರಜ್ಞಾನಗಳ ಅನಿವಾರ್ಯ ಬಳಕೆಯಿಂದಾಗಿ ದೇಸಿ ಸಂಸ್ಕೃತಿಯ ಸಮುದಾಯಗಳು ಇಂದು ತಾಂತ್ರೀಕೃತ ಜನಪದ ಸಮುದಾಯಗಳಾಗಿ ರೂಪುಗೊಳ್ಳುತ್ತಿದೆ. ಹೀಗೆ ಜನಪದರ ಬದುಕಿನ ಪ್ರತಿಯೊಂದು ಕ್ಷೇತ್ರಗಳು ಅನೇಕ ಬದಲಾವಣೆಗಳನ್ನು ಹೊಂದುತ್ತಿವೆ.
ಕಂಪ್ಯೂಟರ್, ಮೊಬೈಲ್ ಹಾಗೂ ಅಂತರ್ಜಾಲಗಳ ಮುಂತಾದ ಡಿಜಿಟಲ್ ತಂತ್ರಜ್ಞಾನದ ಸಾಧನಗಳ ಜೋಡಣೆಯಿಂದಾಗಿ ಹೊಸ ತಲೆಮಾರಿನ ಜಾನಪದ ಸೃಷ್ಟಿಯಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಹಾಗೂ ಮೊಬೈಲ್ಗಳಲ್ಲಿ ಆಡುವ ಆಟಗಳಾಗಿ ಬಳಕೆಗೊಳ್ಳುತ್ತಿದೆ. ಜನಪದ ಕಥೆಗಳನ್ನು ಆಧರಿಸಿ ಅನೇಕ ತಂತ್ರಾಂಶ ಆಟಗಳ ಅಪ್ಲಿಕೇಷನ್ಗಳನ್ನು ರಚಿಸಲಾಗಿದೆ. ಲುಡೋ ತಂತ್ರಜ್ಞಾನ ಮತ್ತು ಅನಿಮೇಷನ್ ತಂತ್ರಜ್ಞಾನಗಳ ಮೂಲಕ ಚಲಿಸುವ ಚಿತ್ರಗಳನ್ನು ಸೃಷ್ಟಿಸುತ್ತಾರೆ. ಲುಡೋ ತಂತ್ರಜ್ಞಾನವನ್ನು ಬಳಸಿ ಅನಿಮೇಷನ್ಗೊಂಡಿರುವ ಆ ಚಿತ್ರಗಳನ್ನು ಕಂಪ್ಯೂಟರ್ ಅಥವಾ ಮೊಬೈಲ್ಗಳಲ್ಲಿ ಗೇಮ್ಗಳಾಗಿ ಆಟ ಆಡುವಂತೆ ರೂಪುಗೊಳಿಸಲಾಗುತ್ತಿದೆ. ಆಟ ಆಡುವವರ ಮತ್ತು ಕಂಪ್ಯೂಟರ್ ನಡುವೆ ಕ್ರಿಯೆಗೆ ತಕ್ಕಂತೆ ಪ್ರತಿಕ್ರಿಯೆಗಳು ನಡೆಯುತ್ತವೆ. ಆ ರೀತಿಯಲ್ಲಿ ಕಂಪ್ಯೂಟರ್ ಗೇಮ್ ಮತ್ತು ಮೊಬೈಲ್ ಗೇಮ್ಗಳನ್ನು ಕ್ರಮವಿಧಿಗೊಳಿಸಿ ತಂತ್ರಾಂಶಗಳನ್ನು ರೂಪಿಸುತ್ತಾರೆ. ಚಮತ್ಕಾರದ ಕಥೆಗಳು, ಪತ್ತೆದಾರಿ ಕಥೆಗಳು, ಒಗಟಿನ ಕಥೆಗಳು, ಪುರಾಣಗಳು ಡಿಜಿಟಲ್ ಗೇಮ್ ಅಪ್ಲಿಕೇಷನ್ಗಳಾಗಿ ರಚನೆಗೊಂಡಿವೆ.
ಸಂವಾದದಲ್ಲಿ ವಿಭಾಗದ ಎಲ್ಲಾ ಪ್ರಾಧ್ಯಾಪಕರು ಹಾಗೂ ಸಂಶೋಧನಾರ್ಥಿಗಳು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡರು.
ಸಂಶೋಧನಾರ್ಥಿ ರಾಮಚಂದ್ರ ಲಕ್ಕಳ್ಳಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಶೋಧನಾರ್ಥಿ ಮಧು ಬಿ.ಡಿ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಂಶೋಧನಾರ್ಥಿ ನೀಲಪ್ಪ ಅವರು ಪ್ರಾರ್ಥನೆಯ ಮೂಲಕ ಚಾಲನೆ ನೀಡಿದರು. ವೇದಿಕೆಯ ಉಪಸ್ಥಿತರನ್ನು ಸಂಶೋಧನಾರ್ಥಿ ಶ್ರೇಯಸ್.ವಿ.ಎಸ್. ಸ್ವಾಗತಿಸಿದರು. ಸಂಶೋಧನಾರ್ಥಿ ಬಸವರಾಜಪ್ಪ ಪೂಜಾರ ಅವರು ಕಾರ್ಯಕ್ರಮಕ್ಕೆ ಭಾಗವಹಿಸಿದ ಎಲ್ಲರಿಗೂ ವಂದನೆ ಅರ್ಪಿಸಿದರು. ಸಂಶೋಧನಾರ್ಥಿ ಸಂದೀಪ್ ಕೆ.ಎಸ್. ಅವರು ಕಾರ್ಯಕ್ರಮದ ವರದಿ ಮಾಡಿದರು.