ಬಳ್ಳಾರಿ

ಯಾಪಿಲ್ಲು ಕಾದಂಬರಿಯಲ್ಲಿ ಭಾಷಿಕ ಯಾಜಮಾನ್ಯದ ಒಳನೋಟಗಳ ಚರ್ಚಿ: ಪ್ರೀತಿ.ಎಸ್.ಕೆ.

ಯಾಪಿಲ್ಲು ಕಾದಂಬರಿಯಲ್ಲಿ ಭಾಷಿಕ ಯಾಜಮಾನ್ಯದ ಒಳನೋಟಗಳ ಚರ್ಚಿ: ಪ್ರೀತಿ.ಎಸ್.ಕೆ.

ಬಳ್ಳಾರಿ ಫೆ. 19 : ಕನ್ನಡದ ಹೆಸರಾಂತ ಸಾಹಿತಿಗಳಲ್ಲಿ ಒಬ್ಬರಾದ ಕುಂ. ವೀರಭದ್ರಪ್ಪನವರು ‘ಯಾಪಿಲ್ಲು’ ಕಾದಂಬರಿಯಲ್ಲಿ ಭಾಷಿಕ ಯಾಜಮಾನ್ಯದ ಕುರಿತು ಅನೇಕ ಒಳನೋಟಗಳನ್ನು ಚರ್ಚಿಸಿದ್ದಾರೆ ಎಂದು ಪಿಎಚ್.ಡಿ. ಸಂಶೋಧನಾರ್ಥಿ ಪ್ರೀತಿ.ಎಸ್.ಕೆ. ಅವರು ಹೇಳಿದರು. 

ಗುರುವಾರ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಮಂಟಪ ಸಭಾಂಗಣದ ಡಾ.ರಾಜಕುಮಾರ್ ಸೆಮಿನಾರ್ ಹಾಲ್‍ನಲ್ಲಿ ಆಯೋಜಿಸಿದ ದೇಸಿ ಮಾತು-2 ಸಂವಾದ ಕಾರ್ಯಕ್ರಮದಲ್ಲಿ “ಯಾಪಿಲ್ಲು ಕಾದಂಬರಿಯಲ್ಲಿ ಭಾಷಿಕ ಯಜಮಾನಿಕೆ” ವಿಷಯದ ಕುರಿತು ಅವರು ಮಾತನಾಡಿ, ಈ ಪ್ರಬಂಧವು ಪ್ರಸ್ತುತದ ಭಾಷಾರಾಜಕಾರಣಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ವರ್ತಮಾನಕ್ಕೆ ತೆರೆದುಕೊಳ್ಳುತ್ತದೆ ಎಂದು ಪ್ರೀತಿ ಎಸ್.ಕೆ. ಅವರು ತಮ್ಮ ಪ್ರಬಂಧದ ಮೂಲಕ ಹಲವು ವಿಷಯಗಳನ್ನು ಮಂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಂಶೋಧನಾರ್ಥಿ ಅಭಿಲಾಷ ಹೆಚ್ ಕೆ ಮಾತನಾಡಿ, ಸಂಶೋಧನಾರ್ಥಿ ಪ್ರೀತಿಎಸ್.ಕೆ. ಅವರು ಮಂಡಿಸಿದ ‘ಯಾಪಿಲ್ಲು ಕಾದಂಬರಿಯಲ್ಲಿ ಭಾಷಿಕ ಯಾಜಮಾನಿಕೆ’ ಎಂಬ ಪ್ರಬಂಧ ಅನೇಕ ಅಂಶಗಳು ಪ್ರಸ್ತುತದಲ್ಲೂ ಭಾಷೆಯ ಕುರಿತಾದ ಯಜಮಾನ್ಯವು ಪ್ರಜಾಪ್ರಭುತ್ವದ ಸಂದರ್ಭದಲ್ಲೂ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಂಶೋಧನಾರ್ಥಿ ಬಿಳೇನಿ ಸಿದ್ದು ಬಿರಾದಾರ ನಿರೂಪಿಸಿದರು. ಸಂಶೋಧನಾರ್ಥಿ ಸತೀಶ ಶಿವಪ್ಪಯ್ಯನಮಠರವರು ಪ್ರಾರ್ಥಿಸಿದರು. ಲಚಮಪ್ಪ ಸ್ವಾಗತಿಸಿದರು. ನಾಗೇಶ್ ಪೂಜಾರಿ ವಂದಿಸಿದರು. ಸಂವಾದದಲ್ಲಿ ವಿಭಾಗದ ಎಲ್ಲಾ ಪ್ರಾಧ್ಯಾಪಕರು ಹಾಗೂ ಸಂಶೋಧನಾರ್ಥಿಗಳು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡರು.

ಸುದ್ದಿ ಓದಿ