ಬಳ್ಳಾರಿ

ಕಾಡುಗೊಲ್ಲರ ಗಣೆ, ಧಾರ್ಮಿಕ ವೃತ್ತಿ ಪರಂಪರೆ: ಸಣ್ಣ ಪಾಲಯ್ಯ

ಕಾಡುಗೊಲ್ಲರ ಗಣೆ, ಧಾರ್ಮಿಕ ವೃತ್ತಿ ಪರಂಪರೆ: ಸಣ್ಣ ಪಾಲಯ್ಯ

ಬಳ್ಳಾರಿ 24: ಕಾಡುಗೊಲ್ಲರ ಗಣೆ: ಧಾರ್ಮಿಕ ವೃತ್ತಿಪರಂಪರೆ ವಿಷಯದ ಕುರಿತಂತೆ ಸಣ್ಣಪಾಲಯ್ಯ.ಬಿ ಇವರು ವಿಚಾರ ಮಂಡನೆಯನ್ನು ಮಾಡುತ್ತಾ, ಪ್ರಸ್ತುತ ವಿಚಾರ ಸಂಕಿರಣದಲ್ಲಿ ಕಾಡುಗೊಲ್ಲರು ಹೇಗೆ ಗಣೆಯನ್ನು ಬಳಸುತ್ತಾರೆ, ಗಣೆ ಎನ್ನುವುದು ಹೇಗಿರುತ್ತದೆ. ಗಣೆ ಮಾಡುವಾಗ ಯಾವ ಯಾವ ನಿಯಮಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ, ಗಣೆಯನ್ನು ಯಾವ ಯಾವ ಸಂದರ್ಭದಲ್ಲಿ ಬಳಕೆ ಮಾಡುತ್ತಾರೆ ಎನ್ನುವ ಕುರಿತು ಸವಿವರವಾಗಿ ಹೇಳುತ್ತಾಹೋದರು. ಗಣೆ- ಧಾರ್ಮಿಕ ಪರಂಪರೆಯ ಒಂದು ಭಾಗವಾಗಿ ಬಳಕೆಯಾಗುತ್ತಿದ್ದು ಇದು ಪ್ರತಿಯೊಂದು ಕಾಲಘಟ್ಟದಲ್ಲಿ ತನ್ನದೇ ಆದ ಮಹತ್ವವನ್ನು ಪಡೆಯುತ್ತಾ ಹೋಗುತ್ತದೆ. ಗಣೆಯಲ್ಲಿ ಸುಮಾರು ಐದು ವಿಧಾನಗಳಿದ್ದು ಅವುಗಳೆಂದರೆ ಕಥನ ಗಣೆ, ಹೇಳಿಕೆ ಗಣೆ, ಹೊತ್ತಾಡೋಗಣೆ, ದೊಡ್ಡಗಣೆ, ಸಣ್ಣ ಗಣೆ ಇವುಗಳ ಬಳಕೆ ಕುರಿತು ಪ್ರಸ್ತುತ ವಿಚಾರ ಸಂಕಿರಣದಲ್ಲಿ ತಿಳಿಸಿದರು. 

ಜಾನಪದ ಅಧ್ಯಯನ ವಿಭಾಗದಲ್ಲಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದಿರುವ ದೇಸೀ ಮಾತು ಸರಣಿಯ 7ನೇ ವಿಚಾರ ಸಂಕಿರಣ ಕಾರ್ಯಕ್ರಮದ ನಿರೂಪಣೆಯನ್ನು ಬೆಟ್ಟಪ್ಪ.ಕೆ ಇವರು ಉತ್ತಮವಾಗಿ ನಡೆಸಿಕೊಟ್ಟರು, ಸ್ವಾಗತಭಾಷಣ ಕುಮಾರಿ ಶೃತಿ.ಕೆ ಇವರು ನೆರವೇರಿಸಿಕೊಟ್ಟರು. ಕಾರ್ಯಕ್ರಮಕ್ಕೆ ಆಗಮಿಸಿದವರೆಲ್ಲರನ್ನೂ ಯಮನೂರಪ್ಪ ಇವರು ಸ್ವಾಗತಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಹಲ್ಲಾದ ಇವರು ವಹಿಸಿಕೊಂಡಿದ್ದರು, ವಿಷಯ ಮಂಡನೆಯನ್ನು ಸಣ್ಣ ಪಾಲಯ್ಯ ಮಾಡಿದರು. ವಂದನಾರ್ಪಣೆಯನ್ನು ನಾಗರಾಜ ಎಂ ಇವರು ನೆರವೇರಿಸಿಕೊಟ್ಟರು.

ಶ್ರಾವಣ ಮಾಸದಲ್ಲಿ ಹಾಗೂ ಮಳೆ ಬರುವ ಸಂದರ್ಭದಲ್ಲಿಯೂ ಗಣೆ ಬಳಕೆ ಇರುವುದೆಂದೂ ಹಾಗೂ ಗಣೆಯನ್ನು ಹೇಳಿಕೆ ಹೇಳಲು ಬಳಸುತ್ತಾರೆಂದು ಹೇಳುತ್ತಾ ಗಣೆ ಜುಂಜಪ್ಪನ ಕಥೆಯಲ್ಲಿಯೂ ಗಣೆ ಬಳಕೆಯಾಗಿರುವುದನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರುಗಳು ಹಾಗೂ ಸಂಶೋಧಕರು ಪಾಲ್ಗೊಂಡಿದ್ದರು.

ಸುದ್ದಿ ಓದಿ