ಬಳ್ಳಾರಿ

ದೇಸಿ ಮಾತು-6 ಸಂವಾದ ಕಾರ್ಯಕ್ರಮ

ದೇಸಿ ಮಾತು-6 ಸಂವಾದ ಕಾರ್ಯಕ್ರಮ

ಬಳ್ಳಾರಿ 18:  ದಿ.17ರಂದು ಜಾನಪದ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಮಂಟಪ ಸಭಾಂಗಣದ ಡಾ. ರಾಜಕುಮಾರ್ ಸೆಮಿನಾರ್ ಹಾಲ್‍ನಲ್ಲಿ ದೇಸಿ ಮಾತು-6 ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು, “ಮ್ಯಾಸಬೇಡರ ಗಣೆ ಪರಂಪರೆ” ವಿಷಯದ ಕುರಿತು ಪಿಎಚ್.ಡಿ. ಸಂಶೋಧನಾರ್ಥಿ ಪ್ರಹ್ಲಾದ.ಡಿ.ಎಂ ಅವರು ಪ್ರಬಂಧ ಮಂಡನೆ ಮಾಡಿದರು.

ಮ್ಯಾಸಬೇಡರಲ್ಲಿ ಅಲಕ್ಷಿತವಾಗಿ ಉಳಿದಿರುವ ಸಂಪ್ರಾದಯಗಳಲ್ಲಿ ಗಣೆ ಪರಂಪರೆಯನ್ನು ಗುರುತಿಸುವ ಮೂಲಕ ಗಣೆಯ ಕಾವ್ಯಗಳ ವಿಷಯ ಕುರಿತು ಮಾತನಾಡಿದರು. ಗಣೆಯ ಹಿನ್ನಲೆಯನ್ನು ನೋಡುತ್ತ ಹೋದರೆ ಒಂದು ರೀತಿಯಲ್ಲಿ ಕೊಳಲಿನ ವಿಸ್ತೃತ ರೂಪವೆಂಬಂತೆ ತಿಳಿದುಬರುತ್ತದೆ. 

ಅಧ್ಯಕ್ಷತೆ ವಹಿಸಿದ್ದ ಸಂಶೋಧನಾರ್ಥಿ ನಾಗೇಶ್ ಪೂಜಾರ್ ಅವರು, ಸಂಶೋಧನಾರ್ಥಿ ಪ್ರಹ್ಲಾದ ಡಿ.ಎಂ ಮಂಡಿಸಿದ ‘ಮ್ಯಾಸಬೇಡರ ಗಣೆ ಪರಂಪರೆ’ ಪ್ರಬಂಧದಲ್ಲಿನ ಅನೇಕ ಅಂಶಗಳನ್ನು ನೀಡಿದರು. ಮ್ಯಾಸಬೇಡರು ಆಂಧ್ರ ಮೂಲದ ಶ್ರೀಶೈಲ ಬೆಟ್ಟಗಳಿಂದ ಕರ್ನಾಟಕಕ್ಕೆ ವಲಸೆ ಬಂದಿರುವಂತಹ ಬುಡಕಟ್ಟು ಸಮುದಾಯ. ಮ್ಯಾಸ ಎಂಬುವುದೇ ಮೇಯಿಸುವವರೇ ಮ್ಯಾಸ ಎಂದು ಮ್ಯಾಸಬೇಡರ ಪರಂಪರೆಯನ್ನು ಹಾಗೂ ಗಣೆಯೂ ಕಾವ್ಯಗಳಲ್ಲಿ ಸಾಂಸ್ಕೃತಿಕ ಸಂಘರ್ಷಗಳನ್ನು ಕುರಿತು ಚರ್ಚಿಸಲಾಯಿತು.

ಸಂವಾದದಲ್ಲಿ ವಿಭಾಗದ ಎಲ್ಲಾ ಪ್ರಾಧ್ಯಾಪಕರು ಹಾಗೂ ಸಂಶೋಧನಾರ್ಥಿಗಳು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡರು. ಸಂಶೋಧನಾರ್ಥಿಗಳಾದ ವಿದ್ಯಾ ಪಾಟನಕರ ನಿರೂಪಿಸಿದರು. ರಾಮಚಂದ್ರ ಲಕ್ಕಳ್ಳಿ ಪ್ರಾರ್ಥಿಸಿದರು.  ರೇಖಾ ವಿ. ಸ್ವಾಗತಿಸಿದರು. ವೆಂಕಟೇಶ್ ಜಿ.ಎಂ ವಂದನೆ ಅರ್ಪಿಸಿದರು. ಆನಂದ ಹೆಚ್. ಮತ್ತು ಐ. ವಿರೇಶ್ ಅವರು ಕಾರ್ಯಕ್ರಮದ ವರದಿ ಮಾಡಿದರು.

ಸುದ್ದಿ ಓದಿ