ಮುಂದಗೋಡ

ದೇಶಪಾಂಡೆ ಹುಟ್ಟುಹಬ್ಬ: ಹಣ್ಣುಹಂಪಲ ವಿತರಣೆ

ದೇಶಪಾಂಡೆ ಹುಟ್ಟುಹಬ್ಬ: ಹಣ್ಣುಹಂಪಲ ವಿತರಣೆ

ಮುಂಡಗೋಡ:ಮಾಜಿ ಸಚಿವ ಆರ್‌.ವಿ.ದೇಶಪಾಂಡೆಯವರ ಹುಟ್ಟುಹಬ್ಬದ ನಿಮಿತ್ತ ಇಲ್ಲಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕು ಆಸ್ಪತ್ರೆ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು.  

ಆರ್‌.ವಿ.ದೇಶಪಾಂಡೆ ಅವರ 76ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಕೇಕ್ ಕತ್ತರಿಸಿ ನಂತರ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ ಮಾಡಿದರು. 

ಈ ವೇಳೆ ಮಾಜಿ ಶಾಸಕ ವಿ.ಎಸ್‌.ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನೇಶ್ವರ ಗುಡಿಯಾಳ, ಕೃಷ್ಣ ಹಿರೇಹಳ್ಳಿ, ಮಹಮ್ಮದ್‌ಗೌಸ್ ಮಕಾಂದಾರ, ರಾಜು ಭೋವಿ, ರಜಾಖಾನ್ ಪಠಾಣ, ಮಲ್ಲಿಕಾರ್ಜುನ ಗೌಳಿ, ನಾರಾಯಣ ಗುರ​‍್ಪನವರ, ವಸಂತ ರಾಣಿಗೇರ ಹಾಗೂ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ