ಕೊಲ್ಹಾರ 10 : ಮಳೆಯಿಲ್ಲದೆ ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿರುವ ರೈತರಿಗೆ ಏನೇನು ತಿಳಿಯದಂತಾಗಿದ್ದು ಮುಂಗಾರು ಮಳೆಗಳು ಕೈ ಕೊಡುವ ಲಕ್ಷಣ ಗೋಚರವಾಗುತ್ತಿದ್ದು ಆದ್ದರಿಂದ ವಿಜಯಪೂರ ಜಿಲ್ಹೆಯನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಸರಕಾರ ಘೋಷಣೆ ಮಾಡಬೇಕೆಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿದರು. ಪಟ್ಟಣದಲ್ಲಿ ನಡೆದ ಬಸವನ ಬಾಗೇವಾಡಿ ಮಂಡಲ ಬಿಜೆಪಿ ಎಸ್ ಸಿ ಹಾಗೂ ಎಸ್ ಟಿ ಕಾರ್ಯಕರ್ತರ ಸಭೆಯ ನಂತರ ತಹಶೀಲ್ದಾರ ಕಛೇರಿಗೆ ತೆರಳಿ ವಿಜಯಪೂರ ಜಿಲ್ಹೆಯನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಸರಕಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಸರ್ಕಾರಕ್ಕೆ ತಹಶೀಲ್ದಾರ ಎಸ್ ಎಸ್ ಮ್ಯಾಗೇರಿ ಮುಖಾಂತರ ಮನವಿಯನ್ನು ಸಲ್ಲಿಸಿದರು. ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಗೋವಿನಜೋಳ ಹೆಸರು ಅಲಸಂದಿ ಮುಕಣಿ ಮತ್ತು ವರ್ಷದ ಬೆಳೆಯಾದ ಕಬ್ಬು ಕೂಡಾ ಸಂಪೂರ್ಣ ಹಾಳಾಗಿ ಹೋಗುವ ಹಂತಕ್ಕೆ ಇದರಿಂದ ರೈತರಿಗೆ ಅನುಕೂಲವಾಗುವಾಗಲು ರಾಷ್ಟೀಯ ಮತ್ತು ಸಹಕಾರಿ ವಾಣೀಜ್ಯ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು ಸಂಪೂರ್ಣ ಮನ್ನಾಮಾಡಲು ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಹಾಗೂ ಕಂದಾಯ ಸಚಿವ ಜಿ ಪರಮೇಶ್ವರ ಕ್ರಮಕೈಗೋಳ್ಳಬೇಕು ಎಂದು ಒತ್ತಾಯಿಸಿದರು. ಇದೇ ಜುಲೈ 14 ರಂದು ಆಲಮಟ್ಟಿ ಎಡದಂಡೆ ಬಲದಂಡೆ ಮತ್ತು ಮುಳವಾಡ ಏತ ನೀರಾವರಿ ಕಾಲುವೆಗಳ ಮೂಲಕ ಕ್ರಷ್ಣಾ ನದಿ ನಿರನ್ನು ಹರಿಯಲು ಬೀಡಬೇಕು ಇಲ್ಲದಿದ್ದರೆ ರೈತರ ಜೋತೆ ಸೇರಿ ನಾವುಗಳೇ ಪಂಪಹೌಸನಲ್ಲಿರುವ ಮೋಟಾರ ಚಾಲು ಮಾಡಿ ಕಾಲುವೆಗೆ ನೀರು ಬೀಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಠ್ಠಲ ಆಸಂಗಿ,ಅಖೀಲಗೌಡ ಪಾಟೀಲ,ಗುರು ಚಲವಾದಿ, ಶಿವಪುತ್ರ ಮೇತ್ರಿ ಮಲ್ಲಿಕಾರ್ಜುನ ದೇವರಮನಿ,ಬಾಲು ಗುಗ್ಯಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.