ಸುಜಾತಾ ದೊಡ್ಡಮನಿಗೆ ಟಿಕೆಟ್ ನೀಡಿದರೆ ರಾಮಕೃಷ್ಣ ದೊಡ್ಡಮನಿ ಬೆಂಬಲಿಸಲು ಆಗ್ರಹ
ಲೋಕದರ್ಶನ ವರದಿ
ಮುಂಡರಗಿ 09: ಎಸ್.ಸಿ ಮೀಸಲು ಕ್ಷೇತ್ರವಾದ ಶಿರಹಟ್ಟಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈ-ಕಮಾಂಡ್ ಇನ್ನೂ ಅಧಿಕೃತ ಅಭ್ಯಥರ್ಿಯ ಘೋಷಣೆ ಮಾಡಿಲ್ಲ. ಒಂದು ವೇಳೆ ಮಾದಿಗ ಸಮಾಜದ ಮುಖಂಡರಾದ ಸುಜಾತಾ ದೊಡ್ಡಮನಿಯವರನ್ನು ಗುರುತಿಸಿ ಅವರಿಗೆ ಕಾಂಗ್ರೇಸ್ ಹೈ-ಕಮಾಂಡ ಟಿಕೆಟ್ ನೀಡಿದರೆ, ಶಿರಹಟ್ಟಿ ಮತಕ್ಷೇತ್ರದ ಕಾಂಗ್ರೆಸ್ನ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿಯವರು ಸುಜಾತಾ ದೊಡ್ಡಮನಿಯವರ ಪರವಾಗಿ ಬೆಂಬಲ ನೀಡಬೇಕು ಎಂದು ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಮಾದಿಗ ಸಮಾಜದಿಂದ ಸಭೆ ಕರೆದು ವಿನಂತಿಪೂರ್ವಕವಾಗಿ ಒತ್ತಾಯಿಸಲಾಯಿತು.
ಈ ವೇಳೆ ಮಾದಿಗ ಸಮಾಜದ ಮುಖಂಡ ಹಾಗೂ ಮುಂಡರಗಿ ತಾಲೂಕು ಡಿಎಸ್ಎಸ್ ಸಂಚಾಲಕ ಸೋಮಣ್ಣ ಹೈತಾಪೂರ ಮಾತನಾಡಿ, ಕಳೆದ 2013ರ ಚುನಾವಣೆ ಸಂದರ್ಭದಲ್ಲಿ ರಾಮಕೃಷ್ಣ ದೊಡ್ಡಮನಿಯವರಿಗೆ ಇದೇ ಕಾಂಗ್ರೇಸ್ ಪಕ್ಷದಿಂದ ಟಿಕೇಟ್ ನೀಡಲಾಗಿತ್ತು. ಅಂದು ನಮ್ಮ ಮಾದಿಗ ಸಮಾಜವು ಯಾವುದೇ ಖ್ಯಾತೆ ತೆಗೆಯದೇ ಇವರು ನಮ್ಮ ಎಸ್.ಸಿ ಸಮಾಜದವರು ಎಂದು ಅವರಿಗೆ ನಮ್ಮ ಮಹಿಳಾ ನಾಯಕಿಯಾದ ಸುಜಾತಾ ದೊಡ್ಡಮನಿಯವರು ನಮ್ಮೆಲ್ಲರ ಮನವೊಲಿಸಿ ರಾಮಕೃಷ್ಣ ದೊಡ್ಡಮನಿಗೆ ಮತವನ್ನು ನೀಡುವುದರ ಮೂಲಕ ಅವರನ್ನು ಕಾಂಗ್ರೇಸ್ ಪಕ್ಷದಿಂದ ಗೆಲ್ಲಿಸಿಕೊಟ್ಟಿದ್ದನ್ನು ಅವರು ಮರೆಯಬಾರದು.
ಅಲ್ಲದೇ ಅವರು ಮುಖ್ಯಮಂತ್ರಿ ಸಂಸದೀಯ ಕಾರ್ಯದಶರ್ಿಯಾಗಿ ಅಧಿಕಾರವನ್ನು ಅನುಭವಿಸಿದ್ದು ಇದೇ ಕಾಂಗ್ರೇಸ್ ಪಕ್ಷದಿಂದ, ಆದರೆ ಈಗ ತಮಗೆ ಟಿಕೇಟ್ ಕೈ ತಪ್ಪುತ್ತದೆ ಎಂಬ ಉದ್ವೇಗದಿಂದ ಇನ್ನೂ ಟಿಕೇಟ್ ಅಧಿಕೃತವಾಗಿ ಘೋಷಣೆಯಾಗದೇ ಮುಂಚಿತವಾಗಿ ಅಭಿಮಾನಿಗಳಿಂದ ಪಕ್ಷಕ್ಕೆ ಮುಜುಗುರ ತರುವಂತ ಚಟುವಟಿಕೆ ಮಾಡುವುದು ಸರಿಯಲ್ಲ. ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿಗಳು ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳಾದರೆ ಯಾರಿಗೇ ಟಿಕೇಟ್ ಕೊಡಬೇಕೆಂಬ ಗೊಂದಲವುಂಟಾಗುತ್ತದೆ. ಹೀಗಾಗಿ ಟಿಕೇಟ್ ಹಂಚಬೇಕಾದರೆ ಎಲ್ಲಾ ರೀತಿಯ ಆಂತರಿಕ ಸಮೀಕ್ಷೆಯನ್ನು ಆಧರಿಸಿ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಟಿಕೇಟ್ ಘೋಷಣೆ ಮಾಡುತ್ತದೆ. ಹೀಗಾಗಿ ಕಾಂಗ್ರೇಸ್ ಪಕ್ಷದ ತತ್ವ ಸಿದ್ದಾಂತದಂತೆ ಟಿಕೇಟ್ ನೀಡಿದಂತ ವ್ಯಕ್ತಿಗೆ ಮಾದಿಗ ಸಮಾಜದ ಕಾರ್ಯಕರ್ತರು ಕಾಂಗ್ರೇಸ್ ಪಕ್ಷಕ್ಕೆ ಮತವನ್ನು ನೀಡುವುದರ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವಂತ ಕೆಲಸವಾಗಬೇಕೆಂದು ಹೇಳಿದರು.
ಈ ವೇಳೆ ಬ್ಲಾಕ್ ಕಾಂಗ್ರೇಸ್ ಎಸ್.ಸಿ ಘಟಕದ ತಾಲೂಕಾ ಅಧ್ಯಕ್ಷ ಮರಿಯಪ್ಪ ಸಿದ್ದಣ್ಣವರ ಮಾತನಾಡಿದ, ಕಳೆದ ಎರಡೂ ಅವಧಿಯಲ್ಲಿ ಕಾಂಗ್ರೇಸ್ ಹೈ ಕಮಾಂಡ್ ರಾಮಕೃಷ್ಣ ದೊಡ್ಡಮನಿಯವರಿಗೆ ಟಿಕೆಟ್ ನೀಡಲಾಗಿತ್ತು. ಅದರಲ್ಲಿ ನಮ್ಮ ಮಾದಿಗ ಸಮಾಜದವರು ಎಲ್ಲರೂ ಅಧಿಕ ಮತವನ್ನು ನೀಡಿದ್ದೇವೆ. ಅದರಲ್ಲಿ ಒಂದು ಸಲ ಗೆದ್ದರು ಒಂದು ಸೋತರು. ಆದರೆ ಈ ಭಾರಿ ನಮ್ಮ ಮಾದಿಗ ಸಮಾಜದಿಂದ ಸುಜಾತ ದೊಡ್ಡಮನಿಯವರಿಗೆ ಟಿಕೇಟ್ ನೀಡುವುದನ್ನು ಏಕೆ ಸಹಿಸಿಕೊಳ್ಳುಲು ಸಾಧ್ಯವಾಗುತ್ತಿಲ್ಲ?. ಹೀಗಾಗಿ ನಾವೆಲ್ಲರೂ ಒಂದಾಗೋಣ ಸುಜಾತ ದೊಡ್ಡಮನಿಯವರಿಗೆ ಟಿಕೇಟ್ ಅಧಿಕೃತ ಘೋಷಣೆಯಾದರೆ ಮಾಜಿ ಶಾಸಕರನ್ನು ಇನ್ನೊಮ್ಮೆ ಅವರ ಮನೆಗೆ ಹೋಗಿ ಅವರನ್ನು ವಿನಂತಿಸಿಕೊಂಡು ಸುಜಾತ ದೊಡ್ಡಮನಿಯವರಿಗೆ ಬೆಂಬಲಿಸುವಂತೆ ಅವರನ್ನು ಮನವೊಲಿಸಲು ಪ್ರಯತ್ನಿಸೋಣ. ಒಟ್ಟಾರೆಯಾಗಿ ಕಾಂಗ್ರೇಸ್ ಪಕ್ಷದ ಸಿದ್ದಾಂತಕ್ಕೆ ತಲೆಬಾಗಿ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.
ಮಾದಿಗ ಸಮಾಜದ ಮುಖಂಡರಾದ ಕೆ.ಎನ್.ದೊಡ್ಡಮನಿ, ಸೋಮಪ್ಪ ತಾಮ್ರಗುಂಡಿ, ಎಂ.ಎಂ.ಗುಂಡಿಕೇರಿ, ಹಾಗೂ ಅಲ್ಫಸಂಖ್ಯಾತ ಘಟಕದ ಕಾಂಗ್ರೇಸ್ ಮುಖಂಡರಾದ ಎಂ.ಯು.ಮಕಾಂದಾರ, ವೈಧ್ಯ ಘಟಕದ ಅಧ್ಯಕ್ಷ ಡಾ.ಐ.ಎಸ್.ಸವರ್ೆ ಮಾತನಾಡಿದರು.
ಈ ವೇಳೆ ಕಾಂಗ್ರೇಸ್ ಮುಖಂಡರಾದ ಯಲ್ಲಪ್ಪ ಹೊಂಬಳಗಟ್ಟಿ, ಮಹಮ್ಮದರಫಿ ವಡ್ಡಟ್ಟಿ, ದುರಗಪ್ಪ ಮೋರನಾಳ, ಮಾದಿಗ ಸಮಾಜದ ಮುಖಂಡರಾದ ಗೋವಿಂದಪ್ಪ ದೊಡ್ಡಮನಿ, ನಿಂಗಪ್ಪ ಹಾಲಿನವರ, ನಿಂಗಪ್ಪ ದೊಡ್ಡಮನಿ, ಲಕ್ಷ್ಮಣ್ಣ ತಗಡಿನಮನಿ, ದುರಗಪ್ಪ ದೊಡ್ಡಮನಿ, ಮಹಾದೇವಪ್ಪ ತಾಮ್ರಗುಂಡಿ, ಪರಶುರಾಮ ಮ್ಯಾಗೇರಿ, ಬಸವರಾಜ ಪೂಜಾರ, ವಿಜಯ ವದರ್ಿ, ಮುದಕಪ್ಪ ಯಕ್ಲಾಸಪುರ, ಎಚ್.ಎಚ್.ಹರಿಜನ, ನಿಂಗರಾಜ ಮೇವುಂಡಿ, ಶಿವು ಪೂಜಾರ, ಲಕ್ಷ್ಮಣ್ಣ ಮುಂಡವಾಡ ಗೌರಮ್ಮ ಹಿರೇಮನಿ ಹಾಗೂ ಇತರರು ಇದ್ದರು