ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹ
ಮುಂಡರಗಿ 13: ಕೇಂದ್ರ ಸರ್ಕಾರ ಇತ್ತಿಚೆಗೆ ರಾಜ್ಯ ಸರ್ಕಾರಕ್ಕೆ ಬರ ಪರಿಹಾರಕ್ಕೆಂದು ಬಿಡುಗಡೆ ಮಾಡಿದ 3454 ಸಾವಿರ ಕೋಟಿ ಹಣವನ್ನು ರಾಜ್ಯ ಸರ್ಕಾರ ರೈತರ ಖಾತೆಗೆ ಸರಿಯಾಗಿ ಹಂಚಿಕೆ ಮಾಡಿರುವುದಿಲ್ಲ. ಹಾಗೂ ಕೇಂದ್ರದಂತೆ ರಾಜ್ಯ ಸರ್ಕಾರವೂ ಸಹ ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡಬೇಕೆಂದು ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಶಿವಾನಂದ ಇಟಗಿ ಆಗ್ರಹಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಡರಗಿ ತಾಲೂಕು ನಿರಂತರ ಬರಗಾಲದಿಂದ ರೈತರು ತುಂಬಾ ಸಂಕಷ್ಟವನ್ನು ಎದುರಿಸುತ್ತಾ ಬಂದಿದ್ದಾರೆ. ಆದರೆ ಸರ್ಕಾರ ಮಾತ್ರ ರೈತರ ಬೇಡಿಕೆಗಳಿಗೆ ಸಿಗಬೇಕಾದ ಸೌಲಭ್ಯಗಳ ಪ್ರಮಾಣ ಸಮರ್ಕವಾಗಿ ಸಿಗುತ್ತಿಲ್ಲ. ಇದರಿಂದ ಬಡ ರೈತ ಬಡವನಾಗಿಯೇ ಉಳಿಯುತ್ತಿದ್ದಾನೆ. ಇತ್ತಿಚೆಗೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಬರ ಪರಿಹಾರಕ್ಕೆಂದು ಬಿಡುಗಡೆ ಮಾಡಿದ 3454 ಸಾವಿರ ಕೋಟಿ ಹಣವನ್ನು ರಾಜ್ಯ ಸರ್ಕಾರ ರೈತರ ಖಾತೆಗೆ ಸರಿಯಾಗಿ ಹಂಚಿಕೆ ಮಾಡದೇ ಕೇವಲ ಶೇ.40ಅ ರೈತರಿಗೆ ಮಾತ್ರ ಪರಿಹಾರ ಹಣ ಹಂಚಿಕೆಯಾಗಿದೆ. ಇನ್ನು 60ಅ ರೈತರಿಗೆ ಪರಿಹಾರ ಹಣ ಬಂದಿರುವುದಿಲ್ಲ. ಇದರಿಂದ ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಕೊಟ್ಟಿರುವಂತೆ 50ಅ ಹಣವನ್ನು ರಾಜ್ಯ ಸರ್ಕಾರವೂ ಕೂಡಾ ಪರಿಹಾರಕ್ಕಾಗಿ ಹಣ ನೀಡಬೇಕು ವಿನಂತಿಸಿದರು.
ಅಲ್ಲದೇ ಇದಕ್ಕೂ ಮೊದಲು ಸರ್ಕಾರ ಆದೇಶಿಸಿದ ಹನಿ ನೀರಾವರಿ ಪದ್ದತಿಯಿಂದ ರೈತರ ಜಮೀನುಗಳಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಇದರಿಂದ ರೈತರ ಬೆಳೆಗೆ ನೀರು ಸಿಗ್ಪದೇ ಹೆಚ್ಚು ಬೆಳೆ ಹಾನೀಗೀಡಾಗುತ್ತಿದೆ. ಆದ್ದರಿಂದ ಹನಿ ನೀರಾವರಿ ಪದ್ದತಿಯನ್ನು ರದ್ದುಪಡಿಸಿ ಕಾಲುವೆ ಹಾಗೂ ಪೈಪ್ ಲೈನ್ ಮೂಲಕ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು. ಹಾಗೂ ಕಳೆದ ವರ್ಷ ಸರಿಯಾಗಿ ಮಳೆಯಾಗದೇ ಬರಗಾಲ ಬಿದ್ದಿರುವ ಕಾರಣ ಈ ಬರಗಾಲವನ್ನು ನೀಗಿಸಲು ಪ್ರತಿ ಗ್ರಾಮಕ್ಕೆ 100 ಎಕರೆ ಜಮೀನುಗಳಿಗೆ ಬಳಕೆಯಾಗುವಂತೆ ನೀರು ಸಂಗ್ರಹಕ್ಕಾಗಿ ಒಂದೊಂದು ಕೆರೆಯನ್ನು ನಿರ್ಮಾಣ ಮಾಡಬೇಕು. ಇದರಿಂದ ರೈತರ ಅಂತರ್ಜಲ ಹೆಚ್ಚಾಗುವುದಕ್ಕೆ ಅನುಕೂಲವಾಗುತ್ತದೆ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಹಿರಿಯ ರೈತ ಮುಖಂಡ ರಾಮಣ್ಣ ಇಲ್ಲೂರ ಮಾತನಾಡಿ, ಈ ವರ್ಷದ ಮುಂಗಾರು ಹಂಗಾಮು ಪ್ರಾರಂಭವಗುತ್ತಿದ್ದಂತೆ ರೈತರು ತಮ್ಮ ಜಮೀನನ್ನು ಬಿತ್ತನೆ ಮಾಡುವುದನ್ನು ಪ್ರಾರಂಭಸುತ್ತಾರೆ. ಹೀಗಾಗಿ ರೈತರಿಗಾಗಿ ಬೇಕಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಸೌಲಭ್ಯವನ್ನು ಸಮರ್ಕವಾಗಿ ಒದಗಿಸಬೇಕು. ಅಲ್ಲದೇ ಈ ವರ್ಷ ಅತಿಯಾದ ಬರಗಾಲ ಬಿದ್ದಿರುವ ಕಾರಣ ರೈತರಿಗೆ ಬ್ಯಾಂಕ್ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಆದರೆ ಬ್ಯಾಂಕ್ ಸಿಬ್ಬಂದಿಗಳು ರೈತರ ಮನೆಮನೆಗೆ ಹೋಗಿ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಇದರಿಂದ ರೈತನು ಚಿಂತೆಗೆ ಈಡಾಗುತ್ತಾನೆ. ಹೀಗಾಗಿ ಬ್ಯಾಂಕಿನವರು ಬರಗಾಲ ದೂರವಾಗುವವರೆಗೂ ಸಹಕರಿಸಲು ಸೂಚನೆ ನೀಡಬೇಕೆಂದು ಸರ್ಕಾರಕ್ಕೆ ವಿನಂತಿಸಿದರು.
ಈ ಕುರಿತು ಮೇ.14 ರಂದು ತಹಶಿಲ್ದಾರರಿಗೆ ಮನವಿ ನೀಡಲಾಗುವುದು. ಈ ಮನವಿಗೆ ಸ್ಪಂದಿಸದೇ ಹೋದರೆ ಮುಂದಿನ ದಿನಮಾನದಲ್ಲಿ ತಾಲೂಕಿನ ರೈತರೊಂದಿಗೆ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಶಿವನಗೌಡ ಗೌಡ್ರ, ಶರಣಪ್ಪ ಕಂಬಳಿ, ಶಂಕರಗೌಡ ಪಾಟೀಲ್, ದ್ಯಾಮಣ್ಣ ವಾಲಿಕಾರ, ಎಚ್.ಬಿ.ಕುರಿ, ಭೀಮೇಶ ಬಂಡಿವಡ್ಡರ, ಸುರೇಶ ಹಡಪದ, ದೇವಪ್ಪ ಮ್ಯಾಗೇರಿ, ಅಶೋಕ ಬನ್ನಿಕೊಪ್ಪ, ರಾಘವೇಂದ್ರ ಕುರಿ, ಹುಚ್ಚಪ್ಪ ಹಂದ್ರಾಳ, ಪುತ್ರ್ಪ ಅಳವಂಡಿ, ಮೃತ್ಯುಂಜಯ ಸಜ್ಜನ ಇತರರು ಇದ್ದರು.