ಮಹಲಿಂಗಪುರ

ಮೈಸೂರು ದಸರಾ ಮೆರವಣಿಗೆಯಲ್ಲಿ ಕರಡಿ ಮಜಲು ಕಲೆಗೆ ಅವಕಾಶ ನೀಡುವಂತೆ ಆಗ್ರಹ

ಮೈಸೂರು ದಸರಾ ಮೆರವಣಿಗೆಯಲ್ಲಿ ಕರಡಿ ಮಜಲು ಕಲೆಗೆ ಅವಕಾಶ ನೀಡುವಂತೆ ಆಗ್ರಹ

ಲೋಕದರ್ಶನ ವರದಿ 

ಮಹಾಲಿಂಗಪುರ 5: ಮೈಸೂರು ದಸರಾ ಮೆರವಣಿಗೆಯಲ್ಲಿ ತಾಸೆ ವಾದನ ಕಲಾ ಪ್ರಕಾರದ ಬದಲಾಗಿ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಜಾನಪದ ಕಲೆಯಾದ ಕರಡಿ ಮಜಲು ಕಲಾ ಪ್ರಕಾರವನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿ ಮಹಾಲಿಂಗಪುರ ಕಲಾವಿದರ ಬಳಗದ ವತಿಯಿಂದ ಬಾಗಲಕೋಟೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸಚಿವ ವಿಜಯಾನಂದ ಕಾಶಪ್ಪನವರ್ ಅವರಿಗೆ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಮೂಲಕ ಅರ್ಜಿ ಸಲ್ಲಿಸಲಾಯಿತು.  

ಬಾಗಲಕೋಟೆ ಜಿಲ್ಲೆಯ ಕರಡಿ ಮಜಲು ಕಲೆಗೆ ಸುಮಾರು 600 ವರ್ಷಗಳ ಇತಿಹಾಸವಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಕಲಾವಿದರು ಪ್ರದರ್ಶನ ನೀಡಿದ್ದಾರೆ.  

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿ ಜಿಲ್ಲೆಯಿಂದ ಆಯಾ ಜಿಲ್ಲೆಯ ಸಾಂಪ್ರದಾಯಿಕ ಕಲಾ ಪರಂಪರೆಯನ್ನು ಆಯ್ಕೆ ಮಾಡಬೇಕು ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ ಧಾರವಾಡದ ಜಗ್ಗಿ ಹಲಗಿ, ಬೆಳಗಾವಿಯ ದಟ್ಟಿ ಕುಣಿತ, ಕೊಪ್ಪಳದ ಹಗಲು ವೇಷ ಹಾಗೂ ವಿಜಯಪುರದ ಸತ್ತಿಗೆ ಕುಣಿತಕ್ಕೆ ಅವಕಾಶ ನೀಡಲಾಗಿದೆ.  

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಾಯಂ ಸಹಾಯಕ ನಿರ್ದೇಶಕರಿಲ್ಲದಿರುವುದರಿಂದ ಹಲವು ವರ್ಷಗಳಿಂದ ಸಮಸ್ಯೆಯಾಗಿದ್ದು, ಕೂಡಲೇ ಸಹಾಯಕ ನಿರ್ದೇಶಕರನ್ನು ನೇಮಿಸಬೇಕು. ಬಾಗಲಕೋಟೆ ಜಿಲ್ಲೆಯ ಕಲಾ ಪರಂಪರೆಗೆ ಧಕ್ಕೆ ಉಂಟಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ ಕಲಾವಿದರು, ಈ ಕುರಿತು ಪುರಸಭೆ ವ್ಯವಸ್ಥಾಪಕ ಎಸ್‌.ಎನ್‌. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.  

ಕಲಾವಿದರಾದ ಗಂಗಪ್ಪ ಕರಡಿ, ಅಶೋಕ ಕರಡಿ, ಪ್ರಕಾಶ ಬೆಳಗಲಿ, ರಾಜಶೇಖರ ಬೆಳಗಲಿ, ಪಂಡಿತಪ್ಪ ಕರಡಿ, ಚನ್ನಮಲ್ಲಪ್ಪ ಕರಡಿ, ಹೋಳಬಸು ಹಡಪದ, ಶಿವಾಜಿ ಪಾತೋತ್ರ, ಅಭಿನವ ಕರಡಿ, ಶ್ರೀಶೈಲ ಹುಣಶ್ಯಾಳ, ಚಂದ್ರಶೇಖರ ಕರಡಿ, ಮಹಾಂತೇಶ ಬಡಿಗೇರ, ಈರ​‍್ಪ ಕಾಗಿ, ಮಹಾಲಿಂಗ ಬಳಗಾರ, ಈರ​‍್ಪ ಕರಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ