ಮುದ್ದೆಬಿಹಾಲ್

ಪ್ರಭು ಕಡಿಗೆ ಪರಿಷತ್ ಸ್ಥಾನ ನೀಡಲು ಆಗ್ರಹ

ಪ್ರಭು ಕಡಿಗೆ ಪರಿಷತ್ ಸ್ಥಾನ ನೀಡಲು ಆಗ್ರಹ

ಮುದ್ದೇಬಿಹಾಳ 29: ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಮುದ್ದೇಬಿಹಾಳ ಮತಕ್ಷೇತ್ರದ ಪಕ್ಷದ ಹಿರಿಯ ಮುಖಂಡ ಪ್ರಭು ಕಡಿ ಇವರನ್ನು ಪರಿಗಣಿಸಿ ಅವಕಾಶ ನೀಡಬೇಕೆಂದು ಮುದ್ದೇಬಿಹಾಳ ಬಿಜೆಪಿ ಮುಖಂಡ ರವೀಂದ್ರ ಬಿರಾದಾರ ಪಕ್ಷದ ಮುಖಂಡರನ್ನು ಆಗ್ರಹಿಸಿದ್ದಾರೆ. 

ಪಕ್ಷದ ಸಂಘಟನೆಗೆ ಹೆಚ್ಚೇನು ಸೇವೆ ಸಲ್ಲಿಸದ ಮತ್ತು ಆರ್ಥಿಕವಾಗಿ ಸಬಲರು, ಬಲಿಷ್ಠ ಮತ್ತು ದೊಡ್ಡ ಸಮುದಾಯಗಳಿಗೆ ಸೇರಿದವರಿಗೆ ಮಾತ್ರ ಪಕ್ಷವು ಎಲ್ಲದಕ್ಕೂ ಪರಿಗಣಿಸುತ್ತಾ ಹೋದರೆ, ಜಾತಿ ಲೆಕ್ಕಾಚಾರದಲ್ಲಿ ಕಡಿಮೆ ಜನಸಂಖ್ಯೆ ಹೊಂದಿದವರನ್ನು ಆರ್ಥಿಕತೆ ಹೊಂದಿಲ್ಲದಿದ್ದರೂ ಪಕ್ಷಕ್ಕಾಗಿ ಹಗಲಿರುಳೂ ಶ್ರಮಿಸಿದವರನ್ನು ಪಕ್ಷವು ನಿರ್ಲಕ್ಷಿಸಬಾರದು.  

ಬಿಜೆಪಿ ಮೂಲ ಜನಸಂಘ ಎಂದು ಕರೆಯಲ್ಪಡುತ್ತಿದ್ದ 70ರ ದಶಕದಲ್ಲಿ ಪಕ್ಷದ ಕಾರ್ಯಕರ್ತರಾಗಿದ್ದಾಗ 1972ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಲಕಣ್ಣ ನಾಗಠಾಣ ಇವರಿಗೆ ಹತ್ತು ಸಾವಿರ ಮತಗಳನ್ನು ಗಳಿಸಿಕೊಟ್ಟು ಕರ್ನಾಟಕದಲ್ಲಿ ಜನಸಂಘದ ಎರಡನೇ  ಅಭ್ಯರ್ಥಿಯಾಗಿದ್ದರಲ್ಲಿ ಇವರೂ ಕೂಡಾ ಪ್ರಮುಖ ಪಾತ್ರವಹಿಸಿದ್ದರು.  

ನಂತರದ ದಿನಗಳಲ್ಲಿ ಪಕ್ಷವನ್ನು ಹೆಚ್ಚಿನ ಮಟ್ಟದಲ್ಲಿ ಸಂಘಟಿಸಲು ಆರ್‌.ಎಸ್‌.ಎಸ್‌.ನಲ್ಲಿದ್ದ ಪ್ರಭು ಕಡಿಯವರನ್ನು ಬಿಜೆಪಿಗೆ ಕರೆತಂದು ಸಂಘಟನಾ ಹೊಣೆಯನ್ನು ವಹಿಸಲಾಯಿತು. ನಂತರ ನಡೆದ ಸಂಸತ್ ಚುನಾವಣೆಗಳಲ್ಲಿ ಕ್ಷೇತ್ರದಲ್ಲಿ ಬಿಜೆಪಿಗೆ ಮತಗಳ ಪ್ರಮಾಣ ಹೆಚ್ಚುತ್ತಲೇ ಹೋಯಿತು.  

2001ರಲ್ಲಿ ರಾಜ್ಯಾದ್ಯಂತ ನಡೆದ ಜನ ಸಂಘರ್ಷ ಯಾತ್ರೆಯನ್ನು ಸಂಘಟಿಸಿ ರಾಜ್ಯದಲ್ಲಿ ಮಾದರಿ ಯಾತ್ರೆಯಾಗಿತ್ತು. ಈ ಯಾತ್ರೆಯಲ್ಲಿ ಸ್ವತಃ ಜಗದೀಶ ಶೆಟ್ಟರವರು ಮತ್ತು ಡಿ.ಎಚ್‌. ಶಂಕರಮೂರ್ತಿಯವರು ಭಾಗವಹಿಸಿ ಪ್ರಭು ಕಡಿಯವರ ಸಂಘಟನಾ ಶಕ್ತಿಯನ್ನು ಕುರಿತು ಬಾಯ್ತುಂಬ ಹೊಗಳಿದ್ದಾರೆ. ಬಸನಗೌಡ ಪಾಟೀಲ (ಯತ್ನಾಳ)ರವರು ಸಂಸತ್ ಸದಸ್ಯರಾಗಿದ್ದಾಗ ತಾಳಿಕೋಟಿಯಿಂದ ಹಡಗಿನಾಳಕ್ಕೆ ಡೋಣಿ ನದಿಯನ್ನು ಎತ್ತಿನ ಬಂಡಿಯಲ್ಲಿ ಕರೆದೊಯ್ದು ಜನರ ಸಮಸ್ಯೆಯನ್ನು ಮನವರಿಕೆ ಮಾಡಿಕೊಂಡಿದ್ದರ ಫಲವಾಗಿ ಇಂದು ತಾಳಿಕೋಟಿಗೆ ಡೋಣಿ ಸೇತುವೆ ನಿರ್ಮಾಣವಾಗಿದೆ.  

ಮಂಡಲ ಮತ್ತು ರಾಜ್ಯ ಮಟ್ಟದಲ್ಲಿ ಪಕ್ಷದ ಬೆಳವಣಿಗೆಗೆ ಹಗಲಿರುಳೂ ದುಡಿದಿರುವ ಪ್ರಭು ಕಡಿಯವರ ಕಾರ್ಯವನ್ನು ಅತೀ ಹತ್ತಿರದಿಂದ ನೋಡಿರುವ ಎಸ್,ಆರ್‌. ಬೊಮ್ಮಾಯಿ, ಪ್ರಹ್ಲಾದ ಜೋಷಿ, ಸಿ.ಟಿ ರವಿ ಮುಂತಾದ ನಾಯಕರು ಪ್ರಭು ಕಡಿಯವರಿಗೆ ವಿಧನ ಪರಿಷತ್ತಿಗೆ ಕರೆದೊಯ್ಯಬೇಕು ಎಂದು ಆಗ್ರಹಿಸಿದ್ದಾರೆ.  

ಸಂಜು ಬಾಗೇವಾಡಿ, ಪುನೀತ ಹಿಪ್ಪರಗಿ, ಶ್ರೀಶೈಲ ದೊಡಮನಿ, ಸಂತೋಷ ಬಾದರಬಂಡಿ,  ಮುಂತಾದವರು ಇದ್ದರು. 


ಸುದ್ದಿ ಓದಿ