ತಾಳಿಕೋಟಿ

ಅಸ್ಕಿ ಗ್ರಾಮ ಪಂಚಾಯತ ವ್ಯವಸ್ಥೆ ಸರಿಪಡಿಸಲು ಆಗ್ರಹ

ಅಸ್ಕಿ ಗ್ರಾಮ ಪಂಚಾಯತ ವ್ಯವಸ್ಥೆ ಸರಿಪಡಿಸಲು ಆಗ್ರಹ

ತಾಳಿಕೋಟಿ: ತಾಲೂಕಿನ ಅಸ್ಕಿ ಗ್ರಾಮ ಪಂಚಾಯತನಲ್ಲಿ ಕೆಲವು ದಿನಗಳಿಂದ ಸಮಸ್ಯೆಗಳು ಉದ್ಭವಿಸಿದ್ದು, ಆಡಳಿತ ವ್ಯವಸ್ಥೆ ಹದಗೆಡುತ್ತಿದೆ. ಅದನ್ನು ಆದಷ್ಟು ಬೇಗ ಸರಿಪಡಿಸಬೇಕು ಎಂದು ಗ್ರಾಮ ಪಂಚಾಯತ ಉಪಾಧ್ಯಕ್ಷ ಅಯ್ಯಪ್ಪ ಮುಗಳಿ ಹೇಳಿದರು.

ಸೋಮವಾರ ಗ್ರಾಮ ಪಂಚಾಯತ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮ ಪಂಚಾಯತ ಅಧ್ಯಕ್ಷರು ಯಾವುದೇ ಯೋಜನೆ ಅನುಷ್ಠಾನ ತರುವಲ್ಲಿ ಸರ್ವಸದಸ್ಯರ ಸಭೆ ಕರೆದು ಅನುಮತಿ ಪಡೆದುಕೊಳ್ಳಬೇಕು. ಆದರೆ ಇಲ್ಲಿ ಅವರು ಏಕಪಕ್ಷೀಯ ನಿಧರ್ಾರಗಳನ್ನು ತೆಗೆದುಕೊಳ್ಳುತ್ತಿದ್ದು ಸದಸ್ಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ಎರಡೂವರೆ ವರ್ಷಗಳ ಅವಧಿಯಲ್ಲಿ ಕೇವಲ ಒಂದು ಗ್ರಾಮಸಭೆ ಮಾತ್ರ ಕರೆಯಲಾಗಿದೆ, ಯಾವುದೇ ಪ್ರಮುಖ ನಿಧರ್ಾರ ತೆಗೆದುಕೊಳ್ಳುವಾಗ ಎಲ್ಲ ಸದಸ್ಯರ ಸವರ್ಾನುಮತ ಕಡ್ಡಾಯವಾಗಿ ಪಡೆದುಕೊಳ್ಳಬೇಕು ಈ ನಿಯಮ ಗಾಳಿಗೆ ತೂರಲಾಗುತ್ತಿದೆ ಎಂದರು.

ಆಶ್ರಯ ಮನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅವರು ಅರ್ಹ ಫಲಾನುಭವಿಗಳ ಹೆಸರು ಕೊಟ್ಟರೂ ಅವುಗಳನ್ನು ಪರಿಗಣಿಸಿಲ್ಲ. ಫಲಾನುಭವಿಗಳ ಆಯ್ಕೆ ಗ್ರಾಮಸಭೆಯ ಮೂಲಕವೂ ನಡೆದಿಲ್ಲ ಎಂದ ಅವರು ನಾವು ನಾಮಕೆ ವಾಸ್ತೆ ಸದಸ್ಯರಾಗಿದ್ದೇವೆ, ನಾವು ಕೆಲಸ ಮಾಡುತ್ತಿಲ್ಲವೆಂದು ವಾಡರ್್ನ ಜನರು ನಮ್ಮನ್ನು ತರಾಟೆಗೆ ತೆಗೆದುಕೊಳ್ಳುವ ಸ್ಥಿತಿ ನಿಮರ್ಾಣವಾಗಿದೆ. ಸದಸ್ಯರಾದ ನಮಗೆ ಬೆಲೆಯೆ ಇಲ್ಲವೆ? 15ನೇ ಹಣಕಾಸಿನ ಯೋಜನೆಯ ಅನುದಾನದ ಸದ್ಬಳಕೆಯೂ ಸರಿಯಾಗಿ ಆಗಿಲ್ಲ ಎಂದು ದೂರಿದ ಅವರು ನಮ್ಮ ಅಳಲನ್ನು ನಾವು ಯಾರ ಮುಂದೆ ತೋರಿಕೊಳ್ಳಬೇಕು. ಮೇಲಾಧಿಕಾರಿಗಳು ನಮ್ಮ ಮನವಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಇದು ಹೀಗೆಯೇ ಮುಂದುವರೆದಲ್ಲಿ ನಾವು ಇನ್ನಷ್ಟು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಕ್ರಮ ವಹಿಸಲು ಮುಂದಾಗಬೇಕು ಎಂದರು.

ಈ ಸಮಯದಲ್ಲಿ ಗ್ರಾಪಂ ಸದಸ್ಯರಾದ ಕಿರಣಕುಮಾರ ಬಿರಾದಾರ, ಸಿದ್ದಪ್ಪ ಹಿರೇಕುರುಬರ, ಶ್ರೀಮತಿ ರಾಜೇಶ್ವರಿ ಮಾದರ, ಬಸವರಾಜ ಹೊಸಮನಿ, ರಾಯಪ್ಪಗೌಡ ಪಾಟೀಲ (ನೀರಲಗಿ), ಲಕ್ಷ್ಮಣ ಸಾಸನೂರ, ಶ್ರೀಮತಿ ಯಂಕಮ್ಮ ಕಂಬಾರ, ಮಡಿವಾಳಮ್ಮ ಕೂಡಲಗಿ, ಗ್ರಾಮದ ಗಣ್ಯರಾದ ವಿಜಯರಡ್ಡಿ ಟಕ್ಕಳಕಿ, ರುದ್ರಗೌಡ ಬಿರಾದಾರ, ತಿಪ್ಪಣ್ಣ ಮಾದರ, ಸೋಮನಗೌಡ ಬಿರಾದಾರ, ಚಂದ್ರಶೇಖರ ದೊಡಮನಿ, ಮಲ್ಲಿಕಾಜರ್ುನ ಪೂಜಾರಿ, ರಾಯನಗೌಡ ಬಿರಾದಾರ, ಮಹಾದೇವ ಮಾದರ, ಸಿದ್ದು ಕೂಡಲಗಿ, ರಾಜುಗೌಡ ಜಲಪೂರ, ಅಶೋಕ ತಳವಾರ, ಬಸನಗೌಡ ಹುಬ್ಬಳ್ಳಿ, ಗುರುಬಸಪ್ಪ ಹಳೇಮನಿ, ಮಹಿಬೂಬ ಚಟ್ನಳ್ಳಿ, ಮಹ್ಮದ ಇಂಚಗೇರಿ ಇದ್ದರು 

ಸುದ್ದಿ ಓದಿ