ಮೂಡಲಗಿ

ಮೂಡಲಗಿಯಲ್ಲಿ ಆಧಾರ್ ನೋಂದಣಿ ಕೇಂದ್ರ ತೆರೆಯಲು ಆಗ್ರಹ

ಮೂಡಲಗಿಯಲ್ಲಿ ಆಧಾರ್ ನೋಂದಣಿ ಕೇಂದ್ರ ತೆರೆಯಲು ಆಗ್ರಹ

ಮೂಡಲಗಿ 04: ಮೂಡಲಗಿ ತಾಲೂಕು ಕೇಂದ್ರವಾಗಿದ್ದರೂ ಆಧಾರ್ ನೋಂದಣಿ ಕೇಂದ್ರ ತೆರೆಯದಿರುವುದು ಪಟ್ಟಣದ ಹಾಗೂ ಗ್ರಾಮೀಣ ಜನರು ಆಧಾರ್ ನೋಂದಣಿ, ಇತರ ಸರ್ಕಾರಿ ಸೌಲಭ್ಯಗಳಿಗಾಗಿ ದೂರದ ಅರಬಾವಿಗೆ ಅಲೆಯುವಂತಾಗಿದೆ ಎಂದು ಕರ್ನಾಟಕ ನವನಿರ್ಮಾಣ ಸೇನೆ ಮೂಡಲಗಿ ತಾಲೂಕಾಧ್ಯಕ್ಷ ಸಚಿನ್ ಲೆಂಕೆನ್ನವರ ದೂರಿದ್ದಾರೆ.

ಶನಿವಾರ ಆಧಾರ್ ಸೇವಾ ಕೇಂದ್ರ ಪ್ರಾರಂಭಿಸಲು ಆಗ್ರಹಿಸಿ ತಹಸೀಲ್ದಾರ್‍ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಜನಸಾಮಾನ್ಯರಿಗೆ  ತುರ್ತು ಸೌಲಭ್ಯಗಳನ್ನು ಒದಗಿಸುವುದು ತಾಲೂಕಾಡಳಿತದ ಕರ್ತವ್ಯವಾಗಿದ್ದು, ಜನಸಾಮಾನ್ಯರ ಪರದಾಟ ತಪ್ಪಸಿ ಶೀಘ್ರದಲ್ಲಿ ಮೂಡಲಗಿ ತಾಲೂಕಾಡಳಿತದ ಆವರಣದಲ್ಲಿ ಆಧಾರ್ ಸೇವಾ ಕೇಂದ್ರ ಫ್ರಾರಂಭಿಸಿ ಜನಸಾಮಾನ್ಯರಿಗೆ ಅನೂಕುಲ ಮಾಡಿಕೋಡಬೇಕೆಂದು ಆಗ್ರಹಿಸಿದರು.

ತಾಲೂಕು ಉಪಾಧ್ಯಕ್ಷ ಮಹಾಂತೇಶ ಮುಗಳಖೋಡ, ಗ್ರಾಮೀಣ ಭಾಗದ ಕೃಷಿ ಆಧಾರಿತ ಕುಟುಂಬಗಳು ಅರಭಾವಿಗೆ ಅಲೆÀದಾಡುವುದರಲ್ಲೇ ಕಾಲಹರಣವಾಗುತ್ತಿದೆ. ಆಧಾರ್ ನೋಂದಣಿ ಕೇಂದ್ರದಲ್ಲಿ ಮಧ್ಯವರ್ತಿಗಳ ಹಾವಳಿಯು ಹೆಚ್ಚಿದ್ದು, ಅರಭಾವಿಯ ಕೇಂದ್ರದಲ್ಲೂ ಸಮರ್ಪಕ ಸೇವೆ ಸಿಗುತ್ತಿಲ್ಲ ಎಂದು ದೂರಿದರು.

ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ಮಹಾಂತೇಶ ಮುಗಳಖೋಡ, ಭರತರಾಜ ಪಾಟೀಲ, ಮಲಗೌಡ ಪಾಟೀಲ, ಯುನುಸ್ ನಾಗರಾಳ, ರಾಜೇಸಾಬ ಹುಬ್ಬಳ್ಳಿ, ಶ್ರೀದರ ಹೊಸಕೋಟಿ ಕಾರ್ಯಕರ್ತರು ಉಪಸ್ಥಿತರಿದ್ದರು. 

ಸುದ್ದಿ ಓದಿ