ಬೈಲಹೊಂಗಲ

ಶಿಕ್ಷಣ ಇಲಾಖೆ ಕೂಡಲೇ ಕ್ಷೌರಿಕರಿಗೆ ಕ್ಷಮಾಪಣೆ ಕೇಳಲು ಆಗ್ರಹ

ಶಿಕ್ಷಣ ಇಲಾಖೆ ಕೂಡಲೇ ಕ್ಷೌರಿಕರಿಗೆ ಕ್ಷಮಾಪಣೆ ಕೇಳಲು ಆಗ್ರಹ

ಬೈಲಹೊಂಗಲ-  ಶಿಕ್ಷಣ ಇಲಾಖೆಯು ಭಾನುವಾರ ನಡೆಸಿದ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ)  ಸಕರ್ಾರ ನಿಷೇಧ ಮಾಡಿರುವ ಪದವನ್ನು ಬಳಸಿ ಸ್ವಾಭಿಮಾನದಿಂದ ಕ್ಷೌರಿಕ ಕಾಯಕವನ್ನು ಮಾಡುತ್ತಿರುವ ನಮಗೆ ಅವಮಾನ ಮಾಡಿರುವ ಶಿಕ್ಷಣ ಇಲಾಖೆ ಕೂಡಲೇ ಕ್ಷಮಾಪಣೆ ಕೇಳಬೇಕು ಎಂದು ಒತ್ತಾಯಿಸಿ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಸ್ಥೆಯ ಸದಸ್ಯರು ಮಂಗಳವಾರ ಉಪವಿಭಾಗಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. 

ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಸಂತೋಷ ಹಡಪದ ಮಾತನಾಡಿ, ರಾಜ್ಯ ಸರಕಾರ ದಿ. 28 ರಂದು ಕ್ಷೌರಿಕ ವೃತ್ತಿಗೆ ಬೈಗುಳ ವಾಗಿರುವ ಪದವನ್ನು ನಿಷೇಧ ಮಾಡಿ ಆದೇಶ ಮಾಡಿದೆ. ಆದರೆ ಶಿಕ್ಷಣ ಇಲಾಖೆ ನಿಷೇಧಿತ ಪದ ಬಳಸಿ ತಪ್ಪು ಮಾಡಿ ನಮ್ಮ ಸ್ವಾಭಿಮಾನ ವನ್ನು ಕೆಣಕಿ ನಮ್ಮ ವೃತ್ತಿಗೆ ಅವಮಾನಿಸಿದೆ.   ನಮ್ಮ ಸ್ವಾಭಿಮಾನ ಕ್ಕೆ ನಮ್ಮ ವೃತ್ತಿಗೆ ಅವಮಾನಿಸಿರುವ ಕಾರಣರಾದ ಶಿಕ್ಷಣ ಇಲಾಖೆ ಕೂಡಲೇ ಕ್ಷಮಾಪಣೆ ಕೇಳಬೇಕು. ಸಂಬಂಧಿಸಿದ ಅಧಿಕಾರಿಯನ್ನು ಕೂಡಲೇ ವಜಾಗೊಳಿಸಬೇಕು. ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟನೆ ಮಾಡಲು ಸಮಸ್ತ ಹಡಪದ (ಕ್ಷೌರಿಕ ) ಸಮಾಜ ಸಿದ್ಧವಾಗಿರುತ್ತದೆ ಎಂದರು. 

ಸಮಾಜದ ತಾಲೂಕು ಉಪಾಧ್ಯಕ್ಷ ವಿನಾಯಕ ಹಂಪನ್ನವರ, ಅನಿಲ ಭಾಂವಿಹಾಳ, ಲೋಕೇಶ ಹಡಪದ, ಪ್ರಕಾಶ ಮುತವಾಡ ಹಾಗೂ ಸಮಾಜ ಭಾಂದವರು  ಇದ್ದರು.

 

 

ಸುದ್ದಿ ಓದಿ