ಶಿಗ್ಗಾವ್

ಜಾಹೀರಾತುದಾರರಿಗೆ ಕನ್ನಡ ಬಳಸುವಂತೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹ

ಜಾಹೀರಾತುದಾರರಿಗೆ ಕನ್ನಡ ಬಳಸುವಂತೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹ

ಶಿಗ್ಗಾವಿ 8: ಪಟ್ಟಣದ  ಪುರಸಭೆ ವ್ಯಾಪ್ತಿಗೆ ಬರುವ ವಾಣಿಜ್ಯ ಮಳಿಗೆಗಳಿಗೆ ಅಳವಡಿಸಿರುವ ಜಾಹೀರಾತುಗಳಲ್ಲಿ ಶೇ. 60ರಷ್ಟು ಕನ್ನಡ ಭಾಷೆಯನ್ನು ಬಳಸದೆ ಇರುವ ಮಳಿಗಳಿಗೆ ಮತ್ತು ಜಾಹೀರಾತುದಾರರಿಗೆ ಕನ್ನಡವನ್ನು ಬಳಸುವಂತೆ ಸೂಕ್ತ ನಿರ್ದೇಶನವನ್ನು ನೀಡಬೇಕು ಎಂದು ಮನವಿಯನ್ನು ಪುರಸಭೆ ಮುಖ್ಯಾಧಿಕಾರಿ ಎಮ್‌.ಕೆ.ಮುಗಳಿ ಅವರಿಗೆ ನೀಡಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ಸಂತೋಷಗೌಡ ಪಾಟೀಲ ಆಗ್ರಹಿಸಿದ್ದಾರೆ. 

ಪಟ್ಟಣದ ಪುರಸಭೆ ಆವರಣದಲ್ಲಿ ಮನವಿ ನೀಡಿ ಮಾತನಾಡಿದ ಅವರು ಕರ್ನಾಟಕದಲ್ಲಿ ಕನ್ನಡ ನಾಮಪಲಕಗಳು ಇರಬೇಕು ಅನ್ನುವದು ಕನಿಷ್ಠ ಸಾಮಾನ್ಯ ವಿಚಾರ. ಆದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡದ ದುರಂಕಾರಿಗಳಿಗೆ ಮೊದಲು ನಮ್ಮ ದಿಕ್ಕಾರ. ನಗರದ  ಎಲ್ಲಾ ನಾಮಪಲಕಗಳು ಕನ್ನಡಿಕರಣವಾಗಬೇಕು ಎಂಬುವದು ನಮ್ಮ ಉದ್ದೆಶವೇ ಹೊರತು ಬೇರೆನು ಅಲ್ಲಾ. ಅಲ್ಲದೆ ಸದರಿ ಅಂಗಡಿ ಮುಂಗಟ್ಟುಗಳ ಮಾಲಿಕರಿಗೆ ಹಾಗು ಜಾಹಿರಾತುದಾರರಿಗೆ ಸದರಿ ನಾಮಪಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆದೇಶ ಮಾಡಬೇಕು  ಅಲ್ಲದೆ ಕನ್ನಡ ಬಾಷೇ ಬಳಸುವ ಸಂಬಂದ ಪುರಸಭೆೆಯ ಮುಖ್ಯಾಧಿಕಾರಿಗಳು  ಅಂಗಡಿ ಮುಂಗಟ್ಟುಗಳ ಮಾಲಿಕರುಗಳಿಗೆ ಸೂಕ್ತ ನಿಗದಿತ  ಸಮಯವನ್ನು ಗೊತ್ತು ಪಡಿಸಿ ಅದರ ಒಳಗಾಗಿ ಕನ್ನಡ ಬಾಷೇ ನಾಮಪಕಲ ಅಳವಡಿಸಲು ಆದೇಶ ಮಾಡಬೇಕು. ಸದರಿ ಪುರಸಭೆಯ ಆದೇಶವನ್ನು  ಪೆಬ್ರುವರಿ 28ರ ಒಳಗಾಗಿ ಪಾಲಿಸದ ಅಂಗಡಿ ಮುಂಗಟ್ಟುಗಳ ಪರವಾನಿಗೆ ರದ್ದುಪಡಿಸಬೇಕು. ಜೊತೆಗೆ ಅವರ ಮೇಲೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವ ನೋಟೀಸನ್ನು ಜಾರಿಗೊಳಿಸಬೇಕು ಎಂದರು. ಮೆಹಬೂಬ ಮಸೂತಿ, ಸುನಿಲ ಬಳ್ಳಾರಿ, ವಿಜಯ ಇಳಗೇರ, ಗಣೇಶ ಬಜಂತ್ರಿ. ಮನೋಜ ಹಂಚಗಿ, ಮಂಜುನಾಥ ಗೌಡರ, ನವೀನ ಕುಡಲ, ಅಜಿತ ಕಟ್ಟಿಮನಿ ಸೇರಿದಂತೆ ಕರವೇ ಪದಾದಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ