ಬಳ್ಳಾರಿ

ಬೃಹತ್ ಬ್ಯಾನರ್‌ಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯವಾಗಿರಿಸುವಂತೆ ಒತ್ತಾಯಿಸಿ

ಬೃಹತ್ ಬ್ಯಾನರ್‌ಗಳಲ್ಲಿ  ಶೇ.60ರಷ್ಟು ಕನ್ನಡ ಕಡ್ಡಾಯವಾಗಿರಿಸುವಂತೆ ಒತ್ತಾಯಿಸಿ

ಬೃಹತ್ ಬ್ಯಾನರ್‌ಗಳಲ್ಲಿ  ಶೇ.60ರಷ್ಟು ಕನ್ನಡ ಕಡ್ಡಾಯವಾಗಿರಿಸುವಂತೆ ಒತ್ತಾಯಿಸಿ

ಬಳ್ಳಾರಿ  18: ಬಳ್ಳಾರಿ ನಗರದ ವ್ಯಾಪಾರ ವಹಿವಾಟುಗಳು, ಸಂಸ್ಥೆಗಳು ಮತ್ತು ಬೃಹತ್ ಬ್ಯಾನರ್‌ಗಳಲ್ಲಿ  ಶೇ.60ರಷ್ಟು ಕನ್ನಡ ಕಡ್ಡಾಯವಾಗಿರಿಸುವಂತೆ ಒತ್ತಾಯಿಸಿ ಕರ್ನಾಟಕ ಜನಸೈನ್ಯ ಸಂಘಟನೆ ವತಿಯಿಂದ ಪಾಲಿಕೆ ಆಯುಕ್ತರಾದ ಖಲೀಲ್ ಸಾಬ್ ಅವರಿಗೆ ಮನವಿ ಸಲ್ಲಿಸಲಾಯಿತು. 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಜನ ಸೈನ್ಯ ರಾಜ್ಯಾಧ್ಯಕ್ಷ ಕೆ.ಎರಿ​‍್ರಸ್ವಾಮಿ ಅವರು, ಬಳ್ಳಾರಿ ನಗರದಲ್ಲಿ ಎಲ್ಲಾ ವ್ಯಾಪಾರ ವಹಿವಾಟು ಮತ್ತು ಸಂಘ ಸಂಸ್ಥೆಗಳ ನಾಮಫಲಕಗಳ ಜೊತೆಗೆ ಅವರ ಬೃಹತ್ ಬ್ಯಾನರ್‌ಗಳಲ್ಲಿ ಮತ್ತು ಇತರೆ ಜಾಹಿರಾತುಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯವಾಗಿರಬೇಕು ಎಂಬ ಕರ್ನಾಟಕ ಸರ್ಕಾರ ಆದೇಶವಿದ್ದರೂ, ಇದನ್ನು ಕಡೆಗಣಿಸಿರುವುದು ವಿಪರ್ಯಾಸವೇ ಸರಿ. ಈ ವಿಷಯ ಕುರಿತು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕರ್ನಾಟಕ ಜನಸೈನ್ಯದ ವತಿಯಿಂದ ಸಾಕಷ್ಟು ಬಾರಿ ಹೋರಾಟಗಳ ಮುಖಾಂತರ ಮನವಿ ಮಾಡಿದರೂ ಕೂಡಾ ಯಾವುದೇ ರೀತಿಯ ಪ್ರಯೋಜನ ಕಂಡು ಬಂದಿರುವುದಿಲ್ಲ. ಅಷ್ಟಲ್ಲದೇ ನಾವುಗಳು ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ಭೇಟಿ ಮಾಡಿ ವಿಷಯ ತಿಳಿಸಿದರೂ ಗಮನ ಹರಿಸಿರುವುದಿಲ್ಲ. ಹಾಗೆಯೇ ವರ್ಷಕ್ಕೊಮ್ಮೆ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾಧಿಕಾರಿಗಳು ಪೂರ್ವಭಾವಿ ಸಭೆ ಕರೆದಾಗ ಈ ವಿಷಯ ಕುರಿತು ಪ್ರಸ್ತಾವಿಸಿದಾಗ ಮಾನ್ಯ ಜಿಲ್ಲಾಧಿಕಾರಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡದರೂ ಕೂಡಾ ಅಧಿಕಾರಿಗಳಾಗಲಿ, ಸಂಸ್ಥೆಯವರಾಗಲಿ ಎಚ್ಚೆತ್ತುಕೊಳ್ಳದೇ ಕುರುಡು ಜಾಣತನ ಪ್ರದರ್ಶನ ಮಾಡುತ್ತಿರುವದು ಹಲವು ಅನುಮಾನಗಳು ಸೃಷ್ಟಿಯಾಗುತ್ತಿದೆ ಎಂದರು. 

ಈ ಸಂಬಂಧ ಇಂದು ಪಾಲಿಕೆ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿ, ಮನವಿ ಪತ್ರ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಬಳ್ಳಾರಿ ನಗರದ ಎಲ್ಲಾ ನಾಮಫಲಕಗಳಲ್ಲಿ ಕರ್ನಾಟಕ ಸರ್ಕಾರದ ಆದೇಶದಂತೆ ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿಬೇಕು, ಇಲ್ಲದಿದ್ದಲ್ಲಿ ಕರ್ನಾಟಕ ಜನಸೈನ್ಯದ ವತಿಯಿಂದ ನಾಮಫಲಕಗಳಿಗೆ ಕಪ್ಪು ಮಸಿ ಬಳಸುವುದಾಗಿ ಎಚ್ಚರಿಕೆ ನೀಡಿದರು.ಮನವಿ ಸ್ವೀಕರಿಸಿ ಮಾತನಾಡಿದ ಪಾಲಿಕೆ ಆಯುಕ್ತ ಖಲೀಲ್ ಸಾಬ್ ಅವರು, ಒಂದು ತಿಂಗಳೊಳಗೆ ನಗರದಲ್ಲಿನ ಇತರೆ ಭಾಷೆಗಳ ಬ್ಯಾನರ್‌ಗಳಲ್ಲಿ ಕನ್ನಡ ಕಡ್ಡಾಯಗೊಳಿಸುವಂತೆ ಹಾಗೂ ಕನ್ನಡ ಭಾಷೆ ಇಲ್ಲದೆ ಇತರೆ ಬ್ಯಾನರ್‌ಗಳು, ಪೋಸ್ಟರ್‌ಗಳನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದರು.  

ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಹುಂಡೇಕರ್ ಪ್ರದೀಪ್, ಚಿಟ್ಟಿ, ಸುನೀಲ್, ಯುವರಾಜ್, ರಾಮು, ಉಮೇಶ್, ಸಿದ್ದಿಕ್, ಗೌಸಿಯಾಬೇಗಂ, ಹನುಮಂತು, ಆಯಿಷಾ ಸಿದ್ದಿಕ್, ಇಮ್ರಾನ್ ಖಾನ್, ನಸೀಮಾ, ಸುಹೇಲ್, ಗುಲಾಂನಬೀ, ಭಾಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ