ಜಾಲವಾಡಗಿ ಏತ ನೀರಾವರಿ ಯೋಜನೆ ಪ್ರಾರಂಭಕ್ಕೆ ಆಗ್ರಹ: ಬೃಹತ್ ಹೋರಾಟದ ಎಚ್ಚರಿಕೆ
ಮುಂಡರಗಿ 07: ಜಾಲವಾಡಗಿ ಏತ ನೀರಾವರಿ ಯೋಜನೆಯನ್ನು ಶೀಘ್ರದಲ್ಲಿ ಪ್ರಾರಂಭಿಸಬೇಕು. ಈ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಗೆ ಅನುದಾನ ಮಂಜೂರು ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವಿಠ್ಠಲ ಗಣಾಚಾರಿ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಂಗಟಾಲೂರು ಹುಲಿಗುಡ್ಡ ಏತನೀರಾವರಿ ಯೋಜನೆಯಡಿಯಲ್ಲಿ ಬರುವ ಮುಂಡರಗಿ ಬ್ಲಾಕ್ ನಂ.8ರಲ್ಲಿ ಬರುವ 31ಗ್ರಾಮಗಳಿಗೆ ಪೈಪ್ಲೈನ್ ಮುಖಾಂತರ ನೀರು ಹರಿಸುವ ಯೋಜನೆಯನ್ನು ಪ್ರಾರಂಭಿಸಬೇಕು. ಹಿಂದಿನ ಸರ್ಕಾರ ಸಭೆ ಕರೆದು ಮುಂಡರಗಿ ಬ್ಲಾಕ್ನಲ್ಲಿ ಹನೀನೀರಾವರಿ ಕೈಬಿಟ್ಟು ಪೈಪ್ಲೈನ್ ಮೂಲಕ ನೀರು ಹರಿಸುವ ಬಗ್ಗೆ ತೀರ್ಮಾಣಿಸಲಾಗಿತ್ತು. ತಕ್ಷಣ ಪ್ರಾರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು.
ರಾಜ್ಯ ಸರ್ಕಾರವೇ ಈ ವರ್ಷ ಸಂಪೂರ್ಣ ಬರಗಾಲ ಆವರಿಸಿದೆ ಎಂದು ಘೋಷಣೆ ಮಾಡಿದ್ದು ಆದ್ದರಿಂದ ಎಲ್ಲ ಬ್ಯಾಂಕ್ನವರು ರೈತರಿಗೆ ಸಾಲ ವಸೂಲಾತಿಗೆ ಕೋರ್ಟ್ ಮುಖಾಂತರ ನೋಟಿಸ್ ಕಳಿಸುತ್ತಿದ್ದಾರೆ. ಸರ್ಕಾರ ನೋಟಿಸ್ ನೀಡದಂತೆ ಎಲ್ಲ ಬ್ಯಾಂಕಿನವರಿಗೆ ಆದೇಶ ಹೊರಡಿಸಬೇಕು ಎಂದು ತಿಳಿಸಿದರು.
ಹಾಗೇ ಈ ವರ್ಷ ಮಳೆ ಬೆಳೆ ಇಲ್ಲದೆ ರೈತರು ಸಂಪರ್ಣವಾಗಿ ತೊಂದರೆಯನ್ನು ಅನುಭವಿಸುತ್ತಿದ್ದು ಆದ್ದರಿಂದ ರಾಜ್ಯ ಸರ್ಕಾರವು ರೈತರಿಗೆ ಪರಿಹಾರ ನೀಡಬೇಕು, ರೈತರ ದನ ಕರಗಳ ರಕ್ಷಣೆಗಾಗಿ ಶೀಗ್ರವೇ ತಾಲೂಕಿನಲ್ಲಿ ಗೋಶಾಲೆಯನ್ನು ಪ್ರಾರಂಭಿಸಬೇಕು, ಹಾಗೂ ಬೆಳೆ ವಿಮೇಯನ್ನು ಜಮಾ ಮಾಡಬೇಕು, ಇಲ್ಲದೇ ಹೊದಲ್ಲಿ ಮುಂದಿನ ದಿನಮಾನದಲ್ಲಿ ಶಿಂಗಟಾಲೂರು ಹುಲಿಗುಡ್ಡ ಏತನೀರಾವರಿ ಯೋಜನೆಯ ಅನುಷ್ಠಾನವಾಗುವರಿಗೂ ರೈತರ ಸಹಯೋಗದಲ್ಲಿ ನಿರಂತರ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವಿಠ್ಠಲ ಗಣಾಚಾರಿ ತಿಳಿಸಿದರು.
ಈ ವೇಳೆ ಸೋಮಪ್ಪ ಕೊಡ್ಲಿ, ಸಿದ್ದೇಶಪ್ಪ ತಳವಾರ, ಹನುಮಂತಪ್ಪ ತಳವಾರ, ಈಶಪ್ಪ ಮಲ್ಲಶೆಟ್ಟಿ, ನಾಗರಾಜ ಹೆಸರೂರು, ಎ.ಎಂ.ಮುಲ್ಲಾ, ವಿರೂಪಾಕ್ಷ ಬಡಿಗೇರಿ ಮುಂತ್ತಾದವರು ಉಪಸ್ಥಿತರಿದ್ದರು.