ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹ
ಕೊಟ್ಟೂರು 11: ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಪ್ರವಾಸಿ ಮಂದಿರದಲ್ಲಿ ಗುರುವಾರ ಬೆಳಗ್ಗೆ 12:30ಕ್ಕೆ ಪಂಚಮಸಾಲಿ ಸಮುದಾಯದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಇದೇ ತಿಂಗಳು 12 ಶನಿವಾರದಂದು ಹೊಸಪೇಟೆಯಲ್ಲಿ ನಡೆಯಲಿರುವ ಕಿತ್ತೂರಾಣಿ ಚೆನ್ನಮ್ಮನ 199ನೇ ವಿಜಯೋತ್ಸವ ಹಾಗೂ ಪಂಚಮಿಸಾಲಿ 2 ಎ ಮೀಸಲಾತಿ ಹಕ್ಕೋತ್ತಾಯ ಜನಜಾಗೃತಿ ಬೃಹತ್ ಸಮಾವೇಶ ಹಾಗೂ ಪಂಚಮಸಾಲಿ ಜಿಲ್ಲಾ ಸಮಾವೇಶ ನಡೆಯಲಿದೆ. ಈ ಸಮಾವೇಶದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯಜಗದ್ಗುರು ಶ್ರೀ ಶ್ರೀಶ್ರೀ ವಚನನಾಂದ ಮಹಾ ಸ್ವಾಮೀಜಿಗಳು ವಹಿಸಲಿದ್ದಾರೆ. ಈ ಸಮಾವೇಶವೂ ಸಹಕಾರಿ ಕ್ರೀಡಾಂಗಣ ನೆಹರು ಕಾಲೋನಿ ಹೊಸಪೇಟೆಯಲ್ಲಿ ನಡೆಯಲಿದೆ.
ಈ ಸಮಾವೇಶಕ್ಕೆ ಕೊಟ್ಟೂರು ತಾಲೂಕಿನ ಪಂಚಮಸಾಲಿ ಘಟಕದ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದಶರ್ಿಸುವ ಸರ್ವ ಸದಸ್ಯರು ಸಂಘಟನೆ ಮತ್ತು ಅಂದಿನ ಕಾರ್ಯಕ್ರಮದಲ್ಲಿ ಸಮುದಾಯದ ಜನರನ್ನು ಪಾಲ್ಗೊಳ್ಳುವಂತೆ ಹೇಳಿದರು. ಕೊಟ್ಟೂರು ವ್ಯಾಪ್ತಿಯಲ್ಲಿ ಕೊಟ್ಟೂರು, ಹಾರಕನಾಳು, ನಡುಮಾವಿನಹಳ್ಳಿ, ಮಂಗಾಪುರ, ನಿಂಬಳಗೇರಿ, ಕುರುಬನಹಳ್ಳಿ ,ತೂಲಹಳ್ಳಿ, ಕೆ . ಅಯ್ಯನಹಳ್ಳಿ, ಚಪ್ಪರದಹಳ್ಳಿ ,ಹರಳು, ಕೋಗಳಿ, ಅಲಬೂರು, ಸಂಗಮೇಶ್ವರ ,ಹೊನ್ನಳ್ಳಿ ,ಬಳಿಗನೂರು, ತಿಮ್ಮಲಾಪುರ ,ಗಜಾಪುರ ,ಕಂದುಗಲ್ಲು, ಇನ್ನು ಮುಂತಾದ ಕಡೆಯಿಚಿದ ತಾಲೂಕು ವೀರ ಶೈವ ಪಂಚಮಸಾಲಿ ಸಮುದಾಯದ ಮುಖಂಡರು ಬಂದು ಈ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ತಾಲೂಕು ಪಂಚಮಸಾಲಿ ಸಮುದಾಯದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕೊಟ್ಟೂರು ತಾ ಪಂಚಮಸಾಲಿ ಸಮುದಾಯದ ಅಧ್ಯಕ್ಷರಾದ ಚಾಪಿ ಚಂದ್ರಪ್ಪ, ಕಾರ್ಯದಶರ್ಿ ಎಚ್. ಅಶೋಕ್, ಪ. ಪಂ. ಮಾಜಿ ಅಧ್ಯಕ್ಷರಾದ ಹೊಸಮನಿ ಅನಿಲ್, ಕೂಡ್ಲಿಗಿತಾ. ಪಂಚಮಸಾಲಿ ಸಂಘದ ಅಧ್ಯಕ್ಷರಾದ ಯು. ರೇವಣ್ಣ, ತೂಲಹಳ್ಳಿ ಹೇಮಣ್ಣ , ಅಶೋಕ್ಎಸ್. ಎಸ್, ಕೊಟ್ಟೂರು ಯುವ ಘಟಕದ ಅಧ್ಯಕ್ಷರಾದ ಶಿವಕುಮಾರ್ ಗೌಡ್ರು, ಮುಖಂಡರಾದಡಾ. ರಾಕೇಶ್ , ಅರಮನೆರೇವಣ್ಣ, ಮೇಘರಾಜ್, ತಾ. ಪಂ ಮಾಜಿ ಅಧ್ಯಕ್ಷರುಗುರು ಮೂತರ್ಿ, ಹರಾಳು ಸತೀಶ್, ಮಂಜುನಾಥಗೌಡ್ರು, ನಿಂಬಳಗೇರಿ ಕಲ್ಲೇಶ್, ಅಕ್ಕಿ ಚಂದ್ರಪ್ಪ ವೀರೇಶ್ಗೌಡ್ರು, ಹೊಸಮನಿ ಮಹೇಶ್, ಅಮ್ಮನಕೇರಿ ಉಮೇಶ್ ಹಾಗೂ ಪಂಚಮಸಾಲಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.