ಹುನಗುಂದ

ಬೇಡ ಜಂಗಮರಿಗೆ ಎಸ್.ಸಿ ಮೀಸಲಾತಿಗೆ ಹಿಂದೇಟು

ಬೇಡ ಜಂಗಮರಿಗೆ ಎಸ್.ಸಿ ಮೀಸಲಾತಿಗೆ ಹಿಂದೇಟು

ಸಿದ್ದಕೊಳ್ಳದ ಧರ್ಮಾಧಿಕಾರಿ ಡಾ.ಶಿವಕುಮಾರ ಮಹಾಸ್ವಾಮಿಗಳು ಬೇಸರ

ಹುನಗುಂದ 3: ಬೇಡ ಜಂಗಮರಿಗೆ ಎಸ್.ಸಿ ಮೀಸಲಾತಿ ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸರ್ಕಾರ ಮಾತ್ರ ಎಸ್.ಸಿ.ಪ್ರಮಾಣ ಪತ್ರ ಕೊಡಲು ಹಿಂದೇಟು ಹಾಕುತ್ತಿದೆ. ಇದು ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎನ್ನುವಂತಾಗಿದೆ ಎಂದು ಸಿದ್ದಕೊಳ್ಳದ ಧರ್ಮಾಧಿಕಾರಿ ಡಾ.ಶಿವಕುಮಾರ ಮಹಾಸ್ವಾಮಿಗಳು ಬೇಸರ ವ್ಯಕ್ತಪಡಿಸಿದರು.                                                                           

ನಗರದ ಗಚ್ಚಿನಮಠದಲ್ಲಿ ವೀರಮಾಹೇಶ್ವರ (ಜಂಗಮ)ಸಮಾಜ ಮತ್ತು ಗಚ್ಚಿನಮಠದ ಸಕಲ ಸದ್ಭಕ್ತ ಮಂಡಳಿಯ ಸಹಯೋಗದಲ್ಲಿ ನಡೆದ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ ಹಾಗೂ ಅಯ್ಯಾಚಾರ, ಸಾಮೂಹಿಕ ಲಿಂಗ ದೀಕ್ಷೆ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿದ ಅವರು ಮೀಸಲಾತಿ ಕೊಡುವುದಾದರೆ ಎಲ್ಲಾ ಧರ್ಮ, ಜಾತಿಗಳಿಗೆ ಮೀಸಲಾತಿಯನ್ನು ನೀಡಲಿ ಇಲ್ಲ ಆರ್ಥಿಕವಾಗಿ ಹಿಂದುಳಿದ ಮೀಸಲಾತಿಯನ್ನು ಜಾರಿಗೊಳಿಸಿ, ಎಲ್ಲಾ ಜಾತಿಗಳಲ್ಲಿ ಬಡವರಿದ್ದಾರೆ ಅವರೆಲ್ಲರಿಗೂ ಮೀಸಲಾತಿ ಕೊಡಿ ಇಲ್ಲದಿದ್ದರೇ ಮೀಸಲಾತಿಯನ್ನೇ ತೆಗೆದು ಹಾಕಿ. ನಾವು ಸಹ ಪಂಚಮಸಾಲಿ ಸಮಾಜದ 2ಎ ಮೀಸಲಾತಿಗೆ ಹಾಗೂ ಕುರಬರ ಎಸ್.ಟಿ ಮೀಸಲಾತಿಗೆ ನಮ್ಮ ಬೆಂಬಲವಿದೆ ಎಂದರು.                          ಕಮತಗಿಯ ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳು ಮಾತನಾಡಿ ಜಂಗಮರ ಜೋಳಿಗೆ ಭಿಕ್ಷೆಯ ಸಾಧನವಲ್ಲ. ಅದೊಂದು ಕಾಯಕ ನಿಷ್ಠೆಯ ಪ್ರತೀಕ. ಜಂಗಮ ಸಮಾಜ ಎಲ್ಲ ಧರ್ಮದವರಿಂದ ಗೌರವಕ್ಕೆ ಪಾತ್ರವಾದ ಸಮಾಜ ಹಾಗೆ ನಾವು ಸಹ ನಮ್ಮ ಸಮಾಜದ ಜೊತೆಗೆ ಇತರೇ ಸಮಾಜವನ್ನು ಗೌರವದಿಂದ ಕಂಡಾಗ ಮಾತ್ರ ನಮ್ಮ ಸಮಾಜದ ಗೌರವ ಉತ್ತುಂಗಕ್ಕೆ ಏರಲು ಸಾಧ್ಯ ಎಂದರು.   ಎಸ್.ಆರ್.ಎನ್.ಇ ಪೌಂಡೇಶನದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ನವಲಿಹಿರೇಮಠ ಮಾತನಾಡಿ ರೇಣುಕಾಚಾರ್ಯರು ಜಂಗಮ ಸಮುದಾಯಕ್ಕೆ ಮಾತ್ರ ಸೀಮಿತರಲ್ಲ. ಎಲ್ಲಾ ಸಮುದಾಯಗಳಿಗೆ ಬೇಕಾಗಿರುವ ಮಹಾನ ದೇವತಾಪುರಷ. ರಾಜ್ಯದಲ್ಲಿ 3600 ಮಠಗಳಿವೆ ಶೇ 90 ರಷ್ಟು ಮಠಗಳಲ್ಲಿ ಜಂಗಮ ಸಮುದಾಯದ ಮಠಾಧಿಪತಿಗಳಿದ್ದಾರೆ. ಅಷ್ಟೆ ಅಲ್ಲ ರಾಜ್ಯದ 30 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಅತೀ ಹೆಚ್ಚು ಜಂಗಮ ಸಮುದಾಯದ ಜನರಿದ್ದು ಇಡೀ ರಾಜ್ಯದಲ್ಲಿ 35 ಲಕ್ಷ ಜನ ಜಂಗಮ ಸಮುದಾಯದ ಜನರಿದ್ದಾರೆ. ಅದರಲ್ಲಿ ಶೇ 80 ರಷ್ಟು ಜನ ಕಡು ಬಡವರಿದ್ದಾರೆ. ಇಂದು ಜಾತಿ ರಾಜಕೀಯವನ್ನು ಸುತ್ತಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ ಎಂದರು. ಗಚ್ಚಿನಮಠದ ಅಮರೇಶ್ವರ ದೇವರು ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. ಹಡಗಲಿ ನಿಡಗುಂದಿಯ ರುದ್ರಮುನಿ ಶಿವಾಚಾರ್ಯರು ಸಾನಿಧ್ಯ ವಹಸಿಕೊಂಡು ಮಾತನಾಡಿದರು. ಡಾ. ಶಿವಗಂಗಾ ರಂಜಣಗಿ ಉಪನ್ಯಾಸ ನೀಡಿದರು.                   

ಬೆಳಗ್ಗೆ 11 ಗಂಟೆಗೆ ಪಟ್ಟಣದ ಗಚ್ಚಿನಮಠದಿಂದ ಪ್ರಾರಂಭವಾದ ರೇಣುಕಾಚಾರ್ಯ ಭಾವಚಿತ್ರದ ಮೆರವಣೆಗೆ ಹಾಗೂ ಕುಂಭ ಮೇಳವು ಲಿಂಗದಕಟ್ಟಿ, ಸಂಗಮೇಶ್ವರ ದೇವಸ್ಥಾನದ ಮಾರ್ಗವಾಗಿ ಪ್ರಮುಖ ಬೀದಿಯಲ್ಲಿ ಸಂಚರಿಸಿ ಮರಳಿ ಗಚ್ಚಿನಮಠವನ್ನು ತಲುಪಿತು. ಈ ವೇಳೆ 19 ಜನರಿಗೆ ಅಯ್ಯಚಾರ ಮತ್ತು ಲಿಂಗದೀಕ್ಷೆ ಕಾರ್ಯಕ್ರಮ ನಡೆಯಿತು.                            ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು, ದಾಸಬಾಳದ ವೀರೇಶ್ವರ ಸ್ವಾಮಿಗಳು, ವೇ.ಮೂ.ವೀರಭದ್ರಯ್ಯ ಸರಗಣಾಚಾರಿ, ಪುರಸಭೆ ಸದಸ್ಯೆ ಗಿರಿಜಮ್ಮ ಮಠ, ಮಹಾಂತಯ್ಯ ಗಚ್ಚಿನಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಹಾಂತೇಶ ಮಠ ಸ್ವಾಗತಿಸಿ ನಿರೂಪಿಸಿದರು, ವೀರೇಶ ದಮ್ಮೂರಮಠ ವಂದಿಸಿದರು. 

                                                      ರೇಣುಕಾಚಾರ್ಯರು ಜಂಗಮ ಸಮುದಾಯಕ್ಕೆ ಮಾತ್ರ ಸೀಮಿತರಲ್ಲ. ಎಲ್ಲಾ ಸಮುದಾಯಗಳಿಗೆ ಬೇಕಾಗಿರುವ ಮಹಾನ ದೇವತಾಪುರಷ. ರಾಜ್ಯದಲ್ಲಿ 3600 ಮಠಗಳಿವೆ ಶೇ. 90ರಷ್ಟು ಮಠಗಳಲ್ಲಿ ಜಂಗಮ ಸಮುದಾಯದ ಮಠಾಧಿಪತಿಗಳಿದ್ದಾರೆ. ಅಷ್ಟೆ ಅಲ್ಲ ರಾಜ್ಯದ 30 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಅತೀ ಹೆಚ್ಚು ಜಂಗಮ ಸಮುದಾಯದ ಜನರಿದ್ದು ಇಡೀ ರಾಜ್ಯದಲ್ಲಿ 35 ಲಕ್ಷ ಜನ ಜಂಗಮ ಸಮುದಾಯದ ಜನರಿದ್ದಾರೆ. ಅದರಲ್ಲಿ ಶೇ 80 ರಷ್ಟು ಜನ ಕಡು ಬಡವರಿದ್ದಾರೆ. ಇಂದು ಜಾತಿ ರಾಜಕೀಯವನ್ನು ಸುತ್ತಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ.  

ಎಸ್.ಆರ್. ನವಲಿಹಿರೇಮಠ..

ಎಸ್‍ಆರ್‍ಎನ್‍ಇ ಫೌಂಡೇಶನ್ ಅಧ್ಯಕ್ಷ 


ಸುದ್ದಿ ಓದಿ