ಶಿಗ್ಗಾವ್

ಡಾ.ಬಾಬಾಸಾಹೇಬ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಆಗ್ರಹ

ಡಾ.ಬಾಬಾಸಾಹೇಬ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಆಗ್ರಹ

ಶಿಗ್ಗಾವಿ 9: ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ ಪ್ರತಿಮೆಯನ್ನು ಪಟ್ಟಣದ ಕಚೇರಿ ಓಣಿಯಲ್ಲಿರುವ ಹಳೆಯ ತಹಶೀಲ್ದಾರ ಕಾರ್ಯಾಲಯದಲ್ಲಿ ನಿರ್ಮಾಣವಾಗುತ್ತಿರುವ ಆಡಳಿತ ಕಾರ್ಯಾಲಯ ಸಂಕೀರ್ಣಗಳ ಮಳಿಗೆಯ ಆವರಣದಲ್ಲಿ ಪ್ರತಿಷ್ಠಾಪಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಹನುಮಂತಪ್ಪ ಮಾದರ ಆಗ್ರಹಿಸಿದ್ದಾರೆ.

ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಮಲ್ಯಯ್ಯ ಹಿರೇಮಠ, ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾಧÀ್ಯಕ್ಷ ಮಂಜುನಾಥ ಬ್ಯಾಹಟ್ಟಿ ಸಮ್ಮುಖದಲ್ಲಿ ಮನವಿ ನೀಡಿ ಮಾತನಾಡಿ ಸಂವಿಧಾನ ರಚಿಸಿದ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ ಅವರದೇ ಆದ ವ್ಯಕ್ತಿತ್ವದ ಮೂಲಕ ಭಾರತ ದೇಶದ ಜನಸಾಮಾನ್ಯರ ಪಾಲಿಗೆ ದೇವತಾ ಮನುಷ್ಯರಾಗಿ ದಾರಿದೀಪರಾಗಿದ್ದಾರೆ. ಅಂತಹ ಧೀಮಂತ ಮಹಾಚೇತನ ಪ್ರತಿಮೆಯನ್ನು ಎಲ್ಲಿ ಬೇಕು ಅಲ್ಲಿ ನಿರ್ಮಿಸುವುದಕ್ಕಿಂತ ನೂತನ ಆಡಳಿತ ಕಾರ್ಯಾಲಯ ಸಂಕೀರ್ಣಗಳಲ್ಲಿ ಪ್ರತಿಷ್ಠಾಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯತ  ಮಾಜಿ ಅಧ್ಯಕ್ಷ ಡಾ. ಮಲ್ಲೇಶಪ್ಪ ಹರಿಜನ ಮಾತನಾಡಿ ತಾಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ಡಾ. ಬಿ.ಆರ್. ಅಂಬೇಡ್ಕರ ಪ್ರತಿಮೆಯನ್ನು ಹಳೆ ತಾಲೂಕ ದಂಡಾಧಿಕಾರಿ ಆವರಣದಲ್ಲಿ ಪ್ರತಿಷ್ಠಾಪಿಸಿಬೇಕು. ಮೂರ್ತಿ ಪ್ರತಿಷ್ಠಾಪನೆ ಆಗುವವರೆಗೂ ನಿಮ್ಮ ಜೊತೆಗೆ ಇರುತ್ತೇವೆ ಎಂದು ಒತ್ತಾಯಿಸಿದರು.

ಕಚೇರಿ ಓಣಿಯ ಸುತ್ತಮುತ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಾಕಷ್ಟು ಕುಟುಂಬಗಳು ಇದ್ದು ಜೊತೆಗೆ ಹಗಲು ರಾತ್ರಿ ಜನದಟ್ಟಣೆ ಇರುವ ಪ್ರದೇಶವಾಗಿದೆ ಆದ್ದರಿಂದ ಮೂರ್ತಿಯನ್ನು ಪ್ರತಿಷ್ಠಾಪಿಸಲು ಇದು ಯೋಗ್ಯವಾದ ಮತ್ತು ಸೂಕ್ತ ಸ್ಥಳವಾಗಿದ್ದು ಇಲ್ಲಿಯೇ ಪ್ರತಿಷ್ಠಾಪಿಸಿ ಎಂದು ಒತ್ತಾಯಿಸಿದರು.

ದಲಿತ ಮುಖಂಡರಾದ ಡಿ.ಎಸ್.ಮಾಳಗಿ, ಗುರುನಗೌಡ ಪಾಟೀಲ, ಮಲ್ಲಿಕಾರ್ಜುನಗೌಡ ಪಾಟೀಲ, ಕರೆಯಪ್ಪ ಕಟ್ಟಿಮನಿ, ನಾಗರಾಜ ಹಾವೇರಿ, ಅಶೋಕ ಕಾಳೆ, ಬಸವರಾಜ ಕಟ್ಟಿಮನಿ, ಸಂತೋಷ ದೊಡ್ಡಮನಿ, ಷಣ್ಮುಖಪ್ಪ ಮಾದರ, ನೀಲವ್ವ ಕಾಲವಾಡ ಸೇರಿದಂತೆ ಪುರಸಭೆ ಸದಸ್ಯರಾದ ಸುಭಾಸ ಚವ್ಹಾಣ, ದಯಾನಂದ ಅಕ್ಕಿ, ರಮೇಶ ವನಹಳ್ಳಿ, ಶಿವಣ್ಣ ಗಂಜೀಗಟ್ಟಿ, ಸುಧೀರ ಮಾಳವಾದೆ, ರಶೀದ ಗೋಟಗೋಡಿ ಉಪಸ್ಥಿತರಿದ್ದರು.

ಸುದ್ದಿ ಓದಿ