ಡಾ. ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಆಗ್ರಹ
ಶಿಗ್ಗಾವಿ 12: ಕಳೆದ 20 ದಿನದಿಂದ ಡಾ, ಬಿ.ಆರ್. ಅಂಬೇಡ್ಕರ ಮೂರ್ತಿ ಸ್ಥಾಪಿಸಬೇಕೆಂದು ನಡೆಸುತ್ತಿರುವ ಸತ್ಯಾಗ್ರಹ ನಮಗೆ ನ್ಯಾಯಯುತವಾದ ಬೇಡಿಕೆ ಈಡೇರದೆ ಇರುವ ಕಾರಣ ಮುಂದುವರೆಸುವುದಾಗಿ ಸಂಘಟಕರಾದ ನ್ಯಾಯವಾದಿ ಹನುಮಂತ ಬಂಡಿವಡ್ಡರ ಮತ್ತು ಬಾಬಕ್ಕಾ ಬಳ್ಳಾರಿ ಎಚ್ಚರಿಸಿದ್ದಾರೆ.
20 ವರ್ಷಗಳಿಂದ ನಾನು ವೈಯಕ್ತಿಕವಾಗಿ ಹೋರಾಡುತ್ತಿದ್ದೇನೆ, ಹೊರತು ದಲಿತ ಸಮಾಜದ ಯಾವೊಬ್ಬ ಮುಖಂಡ ಬಂದಿಲ್ಲ.ನಾವು ಪಟ್ಟಣದ ಹಳೆ ಬಸನಿಲ್ದಾಣ ಎದುರುಗಡೆ ಇರುವ ತಾಪಂ ವ್ಯಾಪ್ತಿಯ ಜನತಾ ಬಜಾರ ಕಟ್ಟಡ ಬಳಿ ಕಲಾ ಸಂಸ್ಕೃತಿ ಭವನ ಮತ್ತು ಅಂಬೇಡ್ಕರವರ ಪುತ್ಥಳಿ ಪ್ರತಿಷ್ಠಾಪನೆ ಮಾಡಬೇಕೆಂಬುದು ನಮ್ಮ ಆಸೆಯಾಗಿದೆ. ತಾಲೂಕಿನ ಸಮಾಜದ ಎಲ್ಲ ಜನರಿಗೂ ಸರಕಾರದ ಸೌಲಭ್ಯಬೇಕು. ಆದರೆ ಅವರ ಮೂರ್ತಿ ಪ್ರತಿಷ್ಠಾಪನೆಗೆ ಯಾರು ಬೆಂಬಲ ವ್ಯಕ್ತಪಡಿಸದೇ ಇರುವುದು ಬೇಸರವಾಗಿದೆ ಎಂದರು.
ಈಗಾಗಲೇ 20 ದಿನದಿಂದ ಪ್ರತಿಭಟನೆ ಮಾಡುತ್ತಿದ್ದರೂ, ಇದೂವರೇಗೂ ಜಿಲ್ಲಾಧಿಕಾರಿಗಳು ನಮ್ಮ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿಯನ್ನೂ ಕೇಳಿಲ್ಲ. ನಮ್ಮ ಬೇಡಿಕೆ ಎನಿದ್ದರೂ, ಹಳೆ ಬಸ್ ನಿಲ್ದಾಣದ ಮುಂಭಾಗದ ಇಲಾಖೆಯ ಕಾಂಪೌಂಡಿನಲ್ಲಿಯೇ ಮೂರ್ತಿ ಸ್ಥಾಪನೆ ಮಾಡಬೇಕೆಂದು ಎಂಬುದು ನಮ್ಮ ಒತ್ತಾಯವಾಗಿದೆ ಅದು ಈಡೇರುವವವರೆಗೂ ನಾವು ನಮ್ಮ ಹೋರಾಟವನ್ನು ನಿರಂತರವಾಗಿ ನೆಡೆಸುತ್ತೇವೆ ಎಂದು ಸಂಘಟಕರು ಹೇಳಿದರು.