ಧಾರವಾಡ - ಹುಬ್ಬಳ್ಳಿ

ಪ್ರಾಧ್ಯಾಪಕರ ನಿವೃತ್ತಿ ವೇತನ ಹೆಚ್ಚಳ ಒತ್ತಾಯ

ಪ್ರಾಧ್ಯಾಪಕರ ನಿವೃತ್ತಿ ವೇತನ  ಹೆಚ್ಚಳ ಒತ್ತಾಯ

ಧಾರವಾಡ  22: ಇಂದು ಜಂಟಿ ನಿರ್ದೇಶಕರು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಛೇರಿ ಧಾರವಾಡ ಇವರಿಗೆ ಬೇಟಿ ಆಗಿ 1-7-2022 ರ ನಂತರ ನಿವೃತ್ತಿ ಹೊಂದಿದ ಪ್ರಾಧ್ಯಾಪಕರ ನಿವೃತ್ತಿ ವೇತನ ಎತ್ತರಿಸುವ ಕುರಿತು ಚರ್ಚೆ ಮಾಡಲಾಯಿತು. 367 ಪ್ರಾಧ್ಯಾಪಕರರು ಧಾರವಾಡ ವಿಭಾಗದಿಂದ ನಿವೃತ್ತಿ ವೇತನ ಎತ್ತರಿಸುವ ಕುರಿತು ತಮ್ಮ ಪ್ರಸ್ತಾವನೆ ಸಲ್ಲಿಸಬೇಕು. ಆದರೆ ಕೇವಲ 112 ಪ್ರಾಧ್ಯಾಪಕರು ಮಾತ್ರ ಪ್ರಸ್ತಾವನೆ ಸಲ್ಲಿಸಿರುತ್ತಾರೆ ಎಂದು ಜಂಟಿ ನಿರ್ದೇಶಕರು ತಿಳಿಸಿದರು. ಈಗಾಗಲೇ  ಸಲ್ಲಿಸಿದ ಪ್ರಸ್ತಾವನೆಯನ್ನು ಬೇಗನೆ ಕೇಂದ್ರ ಕಛೇರಿಗೆ ಕಳುಹಿಸಿ ಕೊಡುವುದಾಗಿ ತಿಳಿಸಿದರು. ಬಾಕಿ ಉಳಿದಿರುವ ಪ್ರಸ್ತಾವನೆಗಳನ್ನು ಬೇಗನೆ ತರಿಸಿಕೊಳ್ಳಲು ಒತ್ತಾಯಿಸಲಾಯಿತು.  ಡಾ. ಲಿಂಗರಾಜ ಅಂಗಡಿ  ಹಾಗೂ ಡಾ. ನಾರಾಯಣ ಉಪಾಧ್ಯೆ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ