ಉತ್ತರಪ್ರದೇಶ ರೇಪ್ ಆರೋಪಿಗಳಿಗೆ ಗಲ್ಲು ಶಿಕ್ಷೆ ಒದಗಿಸುವಂತೆ ಒತ್ತಾಯಿಸಿ ಮನವಿ
ಚಿಕ್ಕೋಡಿ ಅಕ್ಟೋಬರ್ 05: ಉತ್ತರ ಪ್ರದೇಶದ ಮನಿಷಾ ವಾಲ್ಮೀಕಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿಗಳನ್ನು ಗಲ್ಲಿಗೆರಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾ ಸಮಿತಿ ಕಾರ್ಯಕರ್ತರು ಚಿಕ್ಕೋಡಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಆರ್ಪಿಐ ಕರ್ನಾಟಕ ಮತ್ತು ದಲಿತ ಸಂಘರ್ಷ ಸಮಿತಿ ಭೀಮವಾದ ಘಟನೆಯನ್ನು ತೀವ್ರವಾಗಿ ಖಂಡಿಸಿತು. ಇತ್ತಿಚ್ಚೆಗೆ ಉತ್ತರ ಪ್ರದೇಶದ ಆಗ್ರಾ ಮತ್ತು ಅಲೀಪುರ ನಡುವೆ ಇರುವ ಹತ್ರಾಸ ಗ್ರಾಮದಲ್ಲಿ 19 ವರ್ಷದ ಪ್ರತಿಭಾವಂತ ಯುವತಿ ಮೇಲೆ ನಡೆಸಿದ ಸಾಮೂಹಿಕ ಅತ್ಯಾಚಾರ ಖಂಡಿಸಿ ಇಡೀ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೂ ಅಲ್ಲಿಯ ಆಡಳಿತ ಅತ್ಯಾಚಾರ ಮಾಡಿರುವ ಆರೋಪಿಗಳನ್ನು ಬಂಧಿಸದೇ ಅಮಾನವೀಯ ರೀತಿಯಾಗಿ ಅವಳ ಶವವನ್ನು ಮಧ್ಯರಾತ್ರಿ ಅಂತ್ಯ ಸಂಸ್ಕಾರ ಮಾಡಿ ಅವಳ ಕುಟುಂಬ ನರಕಯಾತನೆ ಅನುಭವಿಸುವಂತೆ ಮಾಡಿದೆ.
ಸೂಕ್ತ ತನಿಖೆ ಭರವಸೆ ಮೂಡುತ್ತಿಲ್ಲ, ಇಲ್ಲಿಯವರಿಗೆ ನಡೆದ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೇ ಈ ಅಮಾನವೀಯ ಕೃತ್ಯವನ್ನು ಮರೆಮಾಚಲು ಎಲ್ಲ ಪ್ರಯತ್ನಗಳು ನಡೆದಿವೆ. ಅಲ್ಲಿಯ ಸಕರ್ಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮಕೈಗೊಳ್ಳಬೇಕು. ಇಲ್ಲದೇ ಹೋದರೆ ಇಡೀ ದೇಶಾಧ್ಯಂತ ದಲಿತ ಸಂಘರ್ಷ ಸಮಿತಿ ಭೀಮವಾದ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ರಾಜು ತಳವಾರ, ದುರೀಣ ಶೇಖರ ಪ್ರಬಾತ, ಮಹಾದೇವ ಮುನ್ನೋಳ್ಳಿಕರ, ರಾಘವೇಂದ್ರ ಸನದಿ, ತಾಲೂಕಾ ಸಂಚಾಲಕ ತುಕಾರಾಮ ರಾಯಮಾನೆ, ರಾಯಬಾಗ ಸಂಚಾಲಕ ಸಿದ್ದು ಕಾಂಬಳೆ, ಜಿಲ್ಲಾ ಸಂಚಾಲಕ ನಾಮದೇವ ಕಾಂಬಳೆ, ಬಸು ರಾಯಮಾನೆ, ಅಜರ್ುನ ಮಾನೆ, ರಾಜೇಂದ್ರ ಗಸ್ತಿ, ಮಾರುತಿ ಕಾಂಬಳೆ, ಪ್ರೇಮಾ ಹಳೆಪ್ಪಗೋಳ, ದಿನಕರ ಮಾಳ್ಕರಿ, ನವೀನ ಕಾಂಬಳೆ, ವಿಜಯ ಮಾಳಗೆ ಮುಂತಾದವರು ಇದ್ದರು.