ಮುಂಡರಗಿ

ಹಡಪದ ಅಪ್ಪಣ್ಣ ಸಮಾಜದವರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ

ಹಡಪದ ಅಪ್ಪಣ್ಣ ಸಮಾಜದವರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ

ಮುಂಡರಗಿ 13: ಪಟ್ಟಣದಲ್ಲಿ ತಾಲೂಕಿನ ಶಿವಶರಣ ಹಡಪದ ಅಪ್ಪಣ್ಣ ಸಮಾಜದವರು ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು  ಪುರಸಭೆಯ  ಮುಖ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಮಯದಲ್ಲಿ ಮಾತನಾಡಿದ ಸಮಾಜದ ಮುಖಂಡ ಹಾಗೂ ಜಿಲ್ಲಾ ಸಂಘದ ಉಪಾಧ್ಯಕ್ಷ ದೇವು ಹಡಪದ   ಮುಂಡರಗಿ ನಗರದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ  ಸಮುದಾಯ ಭವನ ನಿರ್ಮಾಣ ಮಾಡುವುದಕ್ಕೆ ಪುರಸಭೆಯಿಂದ ನಿವೇಶನವನ್ನು ನೀಡಿ ಸಮುದಾಯ ಭವನ ನಿರ್ಮಾಣ ಮಾಡುವುದಕ್ಕೆ  ಅನುದಾನವನ್ನು ಒದಗಿಸಿಕೊಡಬೇಕು ಹಾಗೂ ಪಟ್ಟಣದ ಪ್ರಮುಖ ಸರ್ಕಲ್ ಒಂದಕ್ಕೆ ಹಡಪದ ಅಪ್ಪಣ್ಣ ವೃತ್ತ ಎಂದು  ನಾಮಕರಣ ಮಾಡಬೇಕು ಹಾಗೂ ಪುರಸಭೆಯಿಂದ ಕ್ಷೌರಿಕ ವೃತ್ತಿ ಮಾಡುವ ನಮ್ಮ ವೃತ್ತಿದಾರರಿಗೆ ವೃತ್ತಿಗೆ ಬೇಕಾಗಿರುವ ಕುರ್ಚಿ ಗ್ಲಾಸು ಹಾಗೂ ಇನ್ನಿತರ ಸಲಕರಣೆಗಳ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಈ ಹಿಂದೆ ನಾವು ಪುರಸಭೆಯವರಿಗೆ ಹಲವು ಬಾರಿ ಮನವಿ ಪತ್ರಗಳನ್ನು ಕೊಟ್ಟರೂ ಸಹ ನಮ್ಮ ಬೇಡಿಕೆಗಳು ಬೇಡಿಕೆಯಾಗೆ ಉಳಿದಿವೆ ಅವುಗಳನ್ನು ಪೂರೈಸಿ ಕೊಡುವಲ್ಲಿ ಪುರಸಭೆಯವರು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ.ಅತಿ ಹಿಂದುಳಿದ ಹಡಪದ ಸಮಾಜಕ್ಕೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.    ಈ ಸಮಯದಲ್ಲಿ ತಾಲೂಕ ಅಧ್ಯಕ್ಷ ವೀರಣ್ಣ ಹಡಪದ್, ಶೇಖಣ್ಣ ಹಡಪದ್, ಹನುಮಂತಪ್ಪ ಹಡಪದ್, ಮಂಜು ಹಡಪದ್, ಅಶೋಕ್ ಹಡಪದ್, ನಾಗರಾಜ್ ಹಡಪದ್, ಆನಂದ್ ಹಡಪದ್, ಮಹೇಶ್ ಹಡಪದ್, ಮುತ್ತು ಹಡಪದ್ ಸೇರಿದಂತೆ ಅನೇಕ ಸಮಾಜದ ಬಾಂಧವರು ಭಾಗಿಯಾಗಿ ಮನವಿ ಸಲ್ಲಿಸಿದರು. 


ಸುದ್ದಿ ಓದಿ