ರಾಜ್ಯದಲ್ಲಿ ಎಲ್ಲಾ ಸಮುದಾಯದವರಿಗೆ ಶಿಕ್ಷಣ ಮತ್ತು ಆರೋಗ್ಯ ಉಚಿತವಾಗಿ ನೀಡಲು ಆಗ್ರಹ
ಲೋಕದರ್ಶನ ವರದಿ
ವಿಜಯಪುರ 23 : ರಾಜ್ಯದಲ್ಲಿ ಸಾರ್ವಜನಿಕ ಸೇವೆಯಾದ ಶಿಕ್ಷಣ ಮತ್ತು ಆರೋಗ್ಯ ಉಚಿತವಾಗಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನಾ ಸಮಿತಿ ರಾಜ್ಯ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಗದೇವ ಎಸ್. ಸೂರ್ಯವಂಶಿ ಮಾತನಾಡಿ, ಕರ್ನಾಟಕದಲ್ಲಿ ಈಗಾಗಲೇ ತಮ್ಮ ಮುಂದಾಳತ್ವದಲ್ಲಿ ಆಡಳಿತ ಯಂತ್ರ ಅತ್ಯಂತ ವೇಗಗತಿಯಲ್ಲಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಪ್ರಥಮ ಹಂತದ ಜನಪರ ಯೋಜನೆಗಳು ಘೋಷಣೆ ಮಾಡಿರುವುದು ಸಂತೋಷವಾಗಿದೆ. ಈಗಾಗಲೇ ಐದು ಗ್ಯಾರಂಟಿಗಳು ಸಾರ್ವಜನಿಕರಿಗೆ ಸದುಪಯೋಗವಾಗಿರುತ್ತವೆ.
ಮಹಿಳೆಯರಿಗೆ ಕೊಡಮಾಡಿರುವ ಸಾರಿಗೆ ಸೌಲಭ್ಯಗಳು, ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಕೊಡಮಾಡಿರುವ ಎಲ್ಲಾ ಕುಟುಂಬದ ಮುಖ್ಯಸ್ಥರಿಗೆ ಆರ್ಥಿಕ ಸಹಾಯ ಧನ. ಕುಟುಂಬದ ಸ್ವಂತ ಮನೆ ಹೊಂದಿರುವ ಎಲ್ಲಾ ಕುಟುಂಬದ ಮುಖ್ಯಸ್ತರಿಗೆ ವಿದ್ಯುತ್ ಸೌಲಭ್ಯ ಹಾಗೂ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಹೀಗೆ ಹಲವಾರು ಯೋಜನೆಗಳು ಎಲ್ಲ ರೀತಿಯ ಜನರು ಪಡೆಯುತ್ತಿದ್ದಾರೆ. ಸುಮಾರು ಮೂರೂ ವರ್ಷಗಳ ಕಾಲ ಯಾವುದೇ ಅಡೆತಡೆ ಇಲ್ಲದೆ ಪ್ರಜೆಗಳ ಹಿತವನ್ನು ಕಾಪಾಡುವ ಜೊತೆಯಲ್ಲಿ ಬಡವರಿಗೆ ಹಸಿವಿನಿಂದ ತೊಂದರೆ ಆಗಬಾರದೆಂದು ಅಕ್ಕಿಭಾಗ್ಯ ಮಿತಿಯನ್ನು ಹೆಚ್ಚಿಸಿ ಕೊಟ್ಟ ಮಾತಿನಂತೆ ತಮ್ಮ ಸರಕಾರ ಬದ್ಧತೆ ಹೊಂದಿದೆ. ಮುಂದುವರೆದು ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ಸಂವಿಧಾನದ ಆಸೆಗಳಂತೆ ಉಚಿತವಾಗಿ ಹಾಗೂ ಖಾಸಗಿಕರಣ ತಡೆಗಟ್ಟಲು ಅವಶ್ಯಕತೆ ಇದೆ.