ಪುಟ್ಟಸಿದ್ದ ಶೆಟ್ಟಿಯ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲು ಆಗ್ರಹ
ಬೈಲಹೊಂಗಲ 18: ಪಂಚಮಸಾಲಿಗಳು ಶಾಂತಿಪ್ರಿಯರು ಎಲ್ಲರ ಜೊತೆ ಸ್ನೇಹಮಯ ಮತ್ತು ಸಹಕಾರದಿಂದ ಹೋಗುವ ಅನ್ನದಾತರ ಸಮಾಜ ಆದರೆ ಪಂಚಮಸಾಲಿಗಳ ಸ್ವಾಭಿಮಾನಕ್ಕೆ ಧಕ್ಕೆ ತಂದರೆ ಕ್ರಾಂತಿಗೂ ನಾವು ಸಿದ್ದ ಎಂದು ತಾಲೂಕಾ ಪಂಚಮಸಾಲಿ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ ಗುಡುಗಿದರು.
ಈಚೆಗೆ ಪಂಚಮಸಾಲಿ ಸಮಾಜದ ಬಗ್ಗೆ ಕೀಳುರೀತಿಯಾಗಿ ಮಾತನಾಡಿದ ಪುಟ್ಟಸಿದ್ದ ಶೆಟ್ಟಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿ ಮಾತನಾಡಿ, ವೀರ ಪಂಚಮಸಾಲಿಗಳ ಸ್ವಾಭಿಮಾನಕ್ಕೆ ಧಕ್ಕೆ ತಂದರೆ ಅಂತವರ ವಿರುದ್ದ ಸಮಾಜ ಗಟ್ಟಿತನ ಪ್ರದರ್ಶನ ಮಾಡಲಿದೆ ಎಂದರು.
ಸಮಾಜದ ಮುಖಂಡರಾದ ಎಫ್.ಎಸ್.ಸಿದ್ದನಗೌಡರ, ಮಹೇಶ್ ಹರಕುಣಿ ಮಾತನಾಡಿ, ಲಿಂಗಾಯತ ಪಂಚಮಸಾಲಿ ಸಮಾಜ ರಾಜ್ಯದಲ್ಲಿ ಅನೇಕ ವರ್ಷಗಳಿಂದ 2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದು ಇದೀಗ ಅಂತಿಮ ಹೋರಾಟದ ಘಟ್ಟಕ್ಕೆ ಬಂದು ತಲುಪಿದೆ. ಅನ್ಯ ಸಮಾಜದ ಪುಟ್ಟಸಿದ್ದ ಶೆಟ್ಟಿಯಂತವರು ಪಂಚಮಸಾಲಿ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆಗಳ ಮೂಲಕ ಪಂಚಮಸಾಲಿ ಸಮಾಜವನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ಇವರು ತಲೆ ಕೆಳಗೆ ಮಾಡಿ ಕಾಲು ಮೇಲು ಮಾಡಿದ್ರು ಸಹ ಪಂಚಮಸಾಲಿ ಸಮಾಜ 2ಎ ಮೀಸಲಾತಿ ಹೋರಾಟವನ್ನು ಸರ್ಕಾರದ ಆದೇಶ ಪತ್ರ ಸಿಗುವವರೆಗೂ ನಮ್ಮ ಹೋರಾಟ ಅಚಲವಾಗಿದೆ ಎಂದರು.
ಹೋರಾಟಗಾರ ಶಂಕರ ಮಾಡಲಗಿ, ವೀರೆಶ್ ಹಲಕಿ ಮಾತನಾಡಿ, ಇಂತಹ ಕುಹಕಿಗಳ ಮಾತನ್ನು ಕೇಳಿಯು ಸಹ ಇದುವರೆಗೂ ಸಮಾಜದವರು ಶಾಂತಿಯಿಂದ ತಾಳ್ಮೆಯಿಂದ ಇದ್ದಾರೆ. ಪುಟ್ಟಸಿದ್ದ ಶೆಟ್ಟಿಯ ವಿರುದ್ದ ಸಕರ್ಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಸಕರ್ಾರ ಎಚ್ಚೆತ್ತುಕೊಳ್ಳದೆ ಹೊದರೆ ಸಮಾಜದ ಲಕ್ಷಾಂತರ ಜನ ಬೀದಿಗಿಳಿದು ಹೋರಾಟ ವಾಡಬೇಕಾದಿತು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುರಘೇಶ ಗುಂಡ್ಲೂರ, ಮಹಾಂತೇಶ ಮತ್ತಿಕೊಪ್ಪ, ಸುನೀಲ್ ಪಾಟೀಲ, ರುದ್ರಪ್ಪ ಹೊಸಮನಿ, ಮಹಾಂತೇಶ ಅಕ್ಕಿ, ಶ್ರೀಶೈಲ ಶರಣಪ್ಪನವರ, ಮಹೇಶ ಕೋಟಗಿ, ಉಮೇಶ್ ಬೋಳೆತ್ತೆನ, ಬಸವರಾಜ ನೇಸರಗಿ, ಜಗದೀಶ ಬೂದಿಹಾಳ, ಗಂಗಪ್ಪ ಗುಗ್ಗರಿ, ವಿಠಲ ಕಡಕೋಳ, ಮಂಜುನಾಥ ಹರಕುಣಿ, ವಿಠಲ ಅಂದಾನಿ, ಸೋಮಶೇಖರ್ ಪಟ್ಟೆದ ಮುಂತಾದವರು ಇದ್ದರು.