ತಾಳಿಕೋಟಿ

ಸಚಿವ ಸೋಮಣ್ಣ ರಾಜೀನಾಮೆಗೆ ಒತ್ತಾಯ

ಸಚಿವ ಸೋಮಣ್ಣ ರಾಜೀನಾಮೆಗೆ ಒತ್ತಾಯ

ತಾಳಿಕೋಟಿ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ನಿವೇಶನಕ್ಕಾಗಿ ಮನವಿ ಸಲ್ಲಿಸಲು ಬಂದ ಬಡ ಮಹಿಳೆಗೆ ಕಪಾಳಮೋಕ್ಷ ಮಾಡಿರುವ ಸಚಿವ ವಿ. ಸೋಮಣ್ಣ ಅವರ ದುರ್ವರ್ತನೆ ಖಂಡನೀಯವಾಗಿದ್ದು ಕೇವಲ ವಿಷಾಧ ವ್ಯಕ್ತಪಡಿಸಿದರೆ ಸಾಲದು ಅವರ ರಾಜೀನಾಮೆಯನ್ನು ಪಡೆದುಕೊಳ್ಳಬೇಕೆಂದು ಜೆಡಿಎಸ್ ಪಕ್ಷದ ತಾಲೂಕಾ ಸಂಘಟನಾ ಕಾರ್ಯದರ್ಶಿ  ಜಾಕೀರಹುಸೇನ ಲಾಹೋರಿ ಆಗ್ರಹಿಸಿದ್ದಾರೆ.

ಹಿರಿಯ ರಾಜಕಾರಣಿಗಳಾದ ಸೋಮಣ್ಣ ಅವರು ಕಿರಿಯರಿಗೆ ಮಾದರಿಯಾಗಬೇಕು ಆದರೆ ಅವರ ಈ ವರ್ತನೆ ನೋಡಿದರೆ ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಮಹಿಳೆಯರ ಗೌರವದ ಕುರಿತು ದೊಡ್ಡ ದೊಡ್ಡ ಮಾತನಾಡುವ ಬಿಜೆಪಿಯವರು ಮಹಿಳೆಯರೊಂದಿಗೆ ವರ್ತಿಸುವ ರೀತಿನೋಡಿದರೆ ಅವರು ಕೇವಲ ನಾಟಕದ ಮಾತುಗಳನ್ನಾಡಿತ್ತಿದ್ದಾರೆಂಬುದು ಸ್ಪಷ್ಟವಾಗುತ್ತದೆ.

ಬಡವರ ಕುರಿತು ಕಾಳಜಿಹೊಂದಿದ ಯಾವಬ್ಬ ಜನಪ್ರತಿನಿಧಿಯೂ ಈ ರೀತಿ ವರ್ತಿಸುವದಿಲ್ಲ ಕ್ಷೇತ್ರದ ಜನರು ತಮ್ಮ ಸಮಸ್ಯೆಗಳನ್ನು ತಾವು ಆಯ್ಕೆಮಾಡಿದ ಜನಪ್ರತಿನಿಧಿಯನ್ನು ಬಿಟ್ಟು ಯಾರ ಮುಂದೆ ಹೇಳಬೇಕು ಹಿರಿಯರಾದ ಅವರು ಈ ರೀತಿ ತಾಳ್ಮೆ ಕಳೆದುಕೊಳ್ಳುವುದು ಅವರಿಗೆ ಭೂಷಣತರುವ ವಿಷಯ ಅಲ್ಲ.

ಈಗಾಗಲೇ ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿರುವ ಈ ಕೆಟ್ಟ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಕಿತ್ತು ಹಾಕುವ ಮುನ್ಸೂಚನೆ ಈ ಕೆಟ್ಟ ಘಟನೆಯಲ್ಲಿದೆ. ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಕಠಿಣ ಕ್ರಮ ವಹಿಸುವ ಅಗತ್ಯ ಇದೆ, ಎಂದು ಜಾಕೀರಹುಸೇನ ಹೇಳಿದ್ದಾರೆ. 

ಸುದ್ದಿ ಓದಿ