ಅಹಿಂದ ಐಕ್ಯತಾ ವೇದಿಕೆಯಿಂದ ಫುಡ್ ಕಿಟ್ ವಿತರಣೆ
ಹಗರಿಬೊಮ್ಮನಹಳ್ಳಿ 10: ಬಡ ಕುರಿಗಾಹಿ, ಪೂಜಾರಿ, ಚಮ್ಮಾರ, ಕಟ್ಟಡ ಕಾಮರ್ಿಕ, ಮೆಕಾನಿಕ್ ವರ್ಗಗಳ ಬಡ ಕುಟುಂಬಗಳು ಕರೋನಾ ಎರಡನೇ ಅಲೆಯ ಅಬ್ಬರಕ್ಕೆ ದುಡಿಮೆ ಇಲ್ಲದೆ ಜೀವನ ದುಸ್ತರವಾಗಿದ್ದು ತಾಲೂಕಿನ ಅಹಿಂದ ಐಕ್ಯತಾ ವೇದಿಕೆ ವತಿಯಿಂದ ಫುಡ್ ಕಿಟ್ ವಿತರಿಸಲಾಯಿತು. ಅಹಿಂದ ಐಕ್ಯತಾ ವೇದಿಕೆ ತಾಲೂಕು ಸಂಚಾಲಕ ಬುಡ್ಡಿ ಬಸವರಾಜ ಮಾತನಾಡಿ ಅಲ್ಪ ಸಂಖ್ಯಾತರು, ದಲಿತರು, ಹಿಂದುಳಿದವರು, ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಇವರಿಗೆ ಸಕರ್ಾರ ವಿಶೇಷ ಯೋಜನೆಗಳನ್ನು ರೂಪಿಸದೇ ಇರುವುದು ದುರಂತವಾಗಿದೆ. ಕೊರೋನಾ ಸೋಂಕಿನ ಸಂದರ್ಭದಲ್ಲಿ ಈ ವರ್ಗದ ಜನರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದಿಲ್ಲ. ಆದರೆ ಕೆಲವು ದಿನಗಳಿಗೆ ಆಗುವಷ್ಟು ದವಸ, ಧಾನ್ಯಗಳ ಕಿಟ್ ಸಕರ್ಾರ ವಿತರಣೆ ಮಾಡಿದರೆ ಅಹಿಂದ ವರ್ಗಕ್ಕೆ ನೆರವು ನೀಡಿದಂತಾಗುತ್ತದೆ. ಅಲ್ಲದೆ ಇಂದು ಸಾರ್ವಜನಿಕರು ಖರೀದಿ ಮಾಡುವ ಪ್ರತಿಯೊಂದು ದವಸ ಧಾನ್ಯಗಳ ಬೆಲೆ ಗಗನಕ್ಕೇರಿದೆ. ಅಹಿಂದ ವರ್ಗ ಬೆಳೆಯುವ ಬೆಳೆಗೆ ಬೆಲೆಯಿಲ್ಲದಂತಾಗಿದೆ. ಸಕರ್ಾರ ಅಹಿಂದ ವರ್ಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿ ಎಂದರು.
ತಾಲೂಕು ಪಂಚಾಯತಿ ಕಾರ್ಯನಿವರ್ಾಹಕ ಅಧಿಕಾರಿ ಹಾಲಸಿದ್ದಪ್ಪ ಪೂಜಾರಿ ಹಾಗೂ ತೋಟಗಾರಿಕೆ ಇಲಾಖೆಯ ಸಹಾಯಕ ನಿದರ್ೇಶಕ ಪರಮೇಶ್ವರಪ್ಪ ಫುಡ್ ಕಿಟ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಾಲೂಕಿನಲ್ಲಿ ಬಹುತೇಕ ನಿರ್ಗತಿಕ ಕುಟುಂಬಗಳು ಇವೆ. ಈ ಕುಟುಂಬಗಳಿಗೆ ಸಕರ್ಾರದ ಸೌಲಭ್ಯಗಳ ಅವಶ್ಯಕತೆ ಇದೆ. ಲಾಕ್ಡೌನ್ ಸಂದರ್ಭದಲ್ಲಿ ಯಾರು ದೃತಿಗೆಡುವ ಅವಶ್ಯಕತೆ ಇಲ್ಲ. ಸಂಘ ಸಂಸ್ಥೆಗಳ ನೆರವು ಪಡೆದುಕೊಂಡು ಕೊರೋನಾ ಮಾರ್ಗಸೂಚಿಗಳನ್ನು ಪಾಲನೆ ಮಾಡಿ ನೆಮ್ಮದಿಯ ಜೀವನ ಸಾಗಿಸಿ ಎಂದರು.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ದೊಡ್ಡಬಸಪ್ಪ, ಕುರುಬ ಸಮಾಜದ ಮುಖಂಡ ಮುಟುಗನಹಳ್ಳಿ ಕೊಟ್ರೇಶ್, ಅಲ್ಪಸಂಖ್ಯಾತರ ಮುಖಂಡ ಬಾಬುವಲಿ, ಮಹಿಳಾ ಮುಖಂಡರಾದ ಹುಲಿಗೆಮ್ಮ ಮಾತನಾಡಿದರು. ಕುರುಬರ ಸಂಘದ ರಾಜ್ಯ ನಿದರ್ೇಶಕ ಮರಿರಾಮಪ್ಪ, ಕೋಡಿಹಳ್ಳಿ ಮಂಜುನಾಥ, ಚಿಂತ್ರಪಳ್ಳಿ ನಾಗರಾಜ, ಕೆ.ಹನುಮಂತ, ಜೆ.ಸಿ.ಬಿ.ಮಾಬು, ಬಿ.ನಾಗರಾಜ, ದೊಡ್ಡಬಸಪ್ಪ, ಹುಲುಗಪ್ಪ, ಹುಲ್ಮನಿ ಮಂಜುನಾಥ, ಎಸ್.ಎನ್.ಭಜಂತ್ರಿ, ನಾಯಕರ ಬಸವರಾಜ, ಹೊಸಮನಿ ದೊಡ್ಡಬಸಪ್ಪ, ಪರಶುರಾಮ ಇತರರು ಇದ್ದರು