ಯೋಜನೆಗಳನ್ನು ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಿ: ಶಾಸಕ ಲಮಾಣಿ
ಮುಂಡರಗಿ 26: ಸರ್ಕಾರಗಳು ಜನಸಾಮಾನ್ಯರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ದರಿಂದ ಅಧಿಕಾರಿಗಳು ಈ ಯೋಜನೆಗಳನ್ನು ಸಮರ್ಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಕೆಲಸವನ್ನು ಮಾಡುವರೊಂದಿಗೆ ಸಾರ್ವಜನಿಕರ ಸಮಸ್ಸೆಗಳಿಗೆ ಸ್ಪಂದಿಸಬೇಕು ಎಂದು ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ ಸಭಾ ಭವನದಲ್ಲಿ ಗದಗ ಜಿಲ್ಲಾಡಳಿತ ಹಾಗೂ ಮುಂಡರಗಿ ತಾಲೂಕು ಆಡಳಿತ ಸಹಯೋಗದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕ ಕುಂದು ಕೊರೆಗಳ ಅರ್ಜಿ ಸ್ವೀಕರಿ ಅವರು ಮಾತನಾಡಿದರು.
ಅಧಿಕಾರಿಗಳು ಸರ್ಕಾರದ ಕಾನೂನು ಅಡಿಯಲ್ಲಿ ಕಾರ್ಯ ನಿರ್ವಹಿಸುವದರೊಂದಿಗೆ ಸಮಾಜೀಕ ನ್ಯಾಯಕ್ಕೂ ಮಹತ್ವ ನೀಡಬೇಕು, ಹಾಗೂ ಗ್ರಾಮೀಣ ಪ್ರದೇಶದಿಂದ ಸಣ್ಣ ಪುಟ್ಟ ಕೆಲಸ ಕಾರ್ಯಗಳ ನಿಮಿಥ್ಯವಾಗಿ ಜನಸಮಾನ್ಯರು ಇಲಾಖೆಗೆ ಬಂಗಾದ ಅವರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ಸ್ಪಂಧಿಸಿ ತ್ವರಿತವಾಗಿ ಕೆಲಸ ಮಾಡಿಕೊಡಬೇಕು ಎಂದು ಶಾಸಕರಾದ ಡಾ. ಚಂದ್ರು ಲಮಾಣಿ ಹೇಳಿದರು.
ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮುಖ್ಯವಾಗಿ, ತಾಲೂಕಿನ ಎಲ್ಲಾ ರೈತರಿಗೂ ಬೆಳೆ ಪರಿಹಾರ ಕಲ್ಪಿಸಬೇಕು, ಶಿಂಗಟಾಲೂರು ಹುಲಿಗುಡ್ಡ ಏತನೀರಾವರಿ ಯೋಜನೆ ಡ್ರೀಫ್ ( ಹನಿ ನೀರಾವರಿ) ಬದಲು ಕಾಲುವೆ ಮೂಲಕ ನೀರು ಹರಿಸಬೇಕು, ಸರ್ಕಾರವು ಕಳೆದ ವರ್ಷ ಬರಗಾಲ ಪ್ರದೇಶವೆಂದು ಘೋಷಣೆ ಮಾಡಿದ್ದು ಆದ್ದರಿಂದ ಬೆಳೆ ವಿಮಾ ತುಂಬಿದ ರೈತರಿಗೆ ವಿಮಾ ಪರಿಹಾರ ಹಣ ನೀಡಬೇಕು, ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಪ್ರತಿಭಾವಂತಹ ವಿದ್ಯಾರ್ಥಿಗಳಿಗೆ ಕೊಡಮಾಡುವ ಲ್ಯಾಫ್ ಟಾಫ್ ವಿತರಣೆ ಮಾಡಬೇಕು, ಕಳೆದ ಸೂಮಾರು 13 ವರ್ಷಗಳಿಂದ ಸ್ಥಗೀತಗೊಂಡಿರುವ ಮುಂಡರಗಿ ಪುರಸಭೆ ವ್ಯಾಪ್ತಿಯ ನಿರಾಶ್ರೀತ ಬಡವರಿಗೆ ನೀಡುವಂತಹ ಆಶ್ರಯ ನಿವೇಶ ಹಂಚಿಕೆ ಮಾಡಬೇಕು, ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮತ್ತು ಗರ್ಭಣಿಯ ಮಹಿಳೆರಿಗೆ ಕೊಡಮಾಡುವಂತಹ ಪೌಷ್ಠಿಕ ಆಹಾರ ಸರಭರಾಜು ಮಾಡುವಂತಹ (ಎಮ್.ಎಸ್.ಪಿ.ಸಿ.) ಮಹಿಳಾ ಮತ್ತು ಮಕ್ಕಳ ಪುರಕ ಪೌಷ್ಠಿಕಆಹಾರ, ತರಬೇತಿ ಮತ್ತು ತಯಾರಿಕೆ ಕೇಂದ್ರವು ಮಕ್ಕಳಿಗೆ ಹಾಗೂ ಗರ್ಭೀಣಿ ಮಹಿಳೆಯರಿಗೆ ವಿತರಣೆ ಮಾಡಬೇಕಿದ್ದ ಪೌಷ್ಠಿಕ ಆಹಾರ 2021-22ನೇ ಸಾಲಿ ಲೇಬಲ್ ಇರುವಂತಹ 76200 ಕಿಲೋ ಅಕ್ಕಿ, ಹಾಗೂ 5720 ಕಿಲೋ ಗೋದಿಯನ್ನು ವಿತರಣೆ ಮಾಡದೆ ಅನಧಿಕೃತವಾಗಿ ಸಂಗ್ರಹಿಸಿಟ್ಟು ಹಾನಿ ಮಾಡಿ ಸರ್ಕಾರಕ್ಕೂ ಹಾಗೂ ಫಲಾನುಭವಿಗಳಿಗೂ ವಂಚನೆ ಮಾಡಿ ಕೊಳೆಯುವಂತಹ ಮಾಡಿ ನಂತರ ಅವುಗಳನ್ನು ಪುರಸಭೆಯ ಘನತ್ಯಾಜ ವಸ್ತು ವಿಲೆವಾರಿ ಸಂಗ್ರಾಹಣೆ ಜಾಗದಲ್ಲಿ ಮುಚ್ಚಿ ಹಾಕಿದ್ದಾರೆ ಆದ್ದರಿಂದ ಇದಕ್ಕೆ ಸಂಭಂಧ ಪಟ್ಟ ಅಧಿಕಾರಿಗಳ ಹಾಗೂ ಖಾಸಗಿ ಸಂಸ್ಥೆಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಹಿಗೇ ವಿವಿಧ ಇಲಾಖೆಗಳಿಗೆ ಸಂಭಂಧಿಸಿದಂತೆ ಸಾರ್ವಜನಿಕರು ಮನವಿ ಸಲ್ಲಿಸಿದರು.
ಜನಸ್ಪಂದನಾ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ 20 ಅರ್ಜಿ, ಪುರಸಭೆಗೆ 23 ಅರ್ಜಿ, ತಾಲೂಕು ಪಂಚಾಯತಿಗೆ 9 ಅರ್ಜಿ, ಅರಣ್ಯ ಇಲಾಖೆ 1 ಅರ್ಜಿ, ಶಿಂಗಟಾಲೂರು ಏತ ನೀವಾರಿ ಇಲಾಖೆಗೆ 2 ಅರ್ಜಿ, ಹೇಸ್ಕಾಂ ಇಲಾಖೆಗೆ 2 ಅರ್ಜಿ, ಜಿಲ್ಲಾ ಪಂಚಾಯತಿ ಇಲಾಖೆಗೆ 6 ಅರ್ಜಿ, ಸಿ.ಡಿ.ಪಿ.ಓ ಇಲಾಖೆಗೆ 3 ಅರ್ಜಿ, ಕೆ.ಎಸ್.ಆರ್.ಟಿ.ಸಿ. ಇಲಾಖೆಗೆ 1 ಅರ್ಜಿ, ಕೃಷಿ ಇಲಾಖೆಗೆ 2 ಅರ್ಜಿ, ಸಣ್ಣ ನೀರಾವರಿ ಇಲಾಖೆಗೆ 4 ಅರ್ಜಿ, ಕಾರ್ಮಿಕ ಇಲಾಖೆಗೆ 3 ಅರ್ಜಿ, ಶಿಕ್ಷಣ ಇಲಾಖೆ 6 ಅರ್ಜಿ, ಇತರೆ 4 ಅರ್ಜಿ ಒಟ್ಟು 89 ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು.
ಜನಸ್ಪಂದನಾ ಸಭೆಯಲ್ಲಿ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಸ್. ಸಾರ್ವಜನಿಕರ ಅರ್ಜಿ ಸ್ವೀಕರಿಸಿ ಮಾತನಾಡುತ್ತಾ, ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ಇಲಾಖೆಯವಾರು ಕಂದಾಯ ಇಲಾಖೆಯ ಮೂಲಕ ರವಾನಿಸಲಾಗುವದು ಇಲಾಖೆಗೆ ಅರ್ಜಿ ಬಂದ ತಕ್ಷಣ ಆ ಅರ್ಜಿಧಾರರ ಸಮಸ್ಸೆಗೆಳಿಗೆ ಆಯಾ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿ ಕೈಕೊಂಡ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯ ವರದಿಯನ್ನು ನೀಡಬೇಕು ಎಂದು ಆದೇಶ ನೀಡಿದರು.
ಸಭೆಯಲ್ಲಿ ಗದಗ ಜಿಲ್ಲಾ ಉಪವಿಭಾಗಧಿಕಾರಿ ಡಾ. ವೆಂಕಟೇಶ ನಾಯ್ಕ್, ಜಿ.ಎಸ್. ನೇಮಗೌಡ, ಸಿ.ಆರ್. ಮುಂಡರಗಿ, ತಹಶೀಲ್ದಾರ ಧನಂಜಯ ಮಾಲಗಿತ್ತಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ, ಉದಯಕುಮಾರ ಎಲಿವಾಳ, ಒಳಗೊಂಡತ್ತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.