ನಾಡಿಗೆ ಬಂದ ಜಿಂಕೆ ಸುರಕ್ಷಿತವಾಗಿ ಕಾಡಿಗೆ
ಲೋಕದರ್ಶನ ವರದಿ
ಮುಂಡಗೋಡ 23: ಕಾಡಿನಿಂದ ತಪ್ಪಿಸಿಕೊಂಡು ತಾಲೂಕಿನ ಸನವಳ್ಳಿ ಪ್ಲಾಟ್ನಲ್ಲಿ ಬಂದ ಜಿಂಕೆಯೊಂದನ್ನು ಗ್ರಾಮಸ್ಥರು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದ ಘಟನೆ ಬುಧವಾರ ನಡೆದಿದೆ.
ಸುಮಾರು 2-3 ವರ್ಷದ ಗಂಡು ಜಿಂಕೆಯೊಂದು ಕಾಡಿನಿಂದ ತಪ್ಪಿಸಿಕೊಂಡು ನೀರನ್ನು ಅರಸುತ್ತಾ ತಾಲೂಕಿನ ಸನವಳ್ಳಿ ಪ್ಲಾಟ್ನಲ್ಲಿ ಬಂದಾಗ ಬೀದಿಗಳ ಹಿಂಡು ಜಿಂಕೆಯನ್ನು ಬೆನ್ನಟ್ಟಿದೆ. ಗ್ರಾಮಸ್ಥರು ಜಿಂಕೆಯನ್ನು ನಾಯಿಗಳಿಂದ ರಕ್ಷಿಸಿ ಹಿಡಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಬೇಸಿಗೆಯಾಗಿದ್ದರಿಂದ ಜಿಂಕೆಯು ಬಾಯಾರಿ ನೀರನ್ನು ಕುಡಿಯಲು ಗುಂಪಿನಿಂದ ತಪ್ಪಿಸಿಕೊಂಡು ಸನವಳ್ಳಿ ಜಲಾಶಯಕ್ಕೆ ಬಂದಿದೆ ಎಂದು ಉಪವಲಯ ಅರಣ್ಯಾಧಿಕಾರಿಗಳಾದ ಗೀರೀಶ ಕೊಳೇಕರ ತಿಳಿಸಿದರು.
ಗಾಮಸ್ಥರಾದ ರಾಜು ಗುಬ್ಬಕ್ಕನವರ, ಸಂತೋಷ ತಂಬಿ, ರವಿ, ಮಾಲತೇಶ ಸುಣಗಾರ, ಸಚಿನ ಹೊಸಮನಿ ಮುಂತಾದವರಿದ್ದರು.