ಬಂಜಾರ ಸಮಾಜ ವತಿಯಿಂದ ದೀಪಾವಳಿ ಮೇರಾ ಆಚರಣೆ
ಲೋಕದರ್ಶನ ವರದಿ
ಕಲಬುರ್ಗಿ 07: ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಬಂಜಾರ ಸಮುದಾಯದ ವಿಶೇಷ ಆಚರಣೆ ಮೇರಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪೂಜ್ಯರು, ಗಣ್ಯರು ಹಾಗೂ ಪುಟಾಣಿ ಮಕ್ಕಳು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಕಲಬುರ್ಗಿ ನಗರದ ವೀರೇಂದ್ರ ಪಾಟೀಲ್ ಬಡಾವಣೆಯ ಚವ್ಹಾಣ ವಿದ್ಯಾ ಸಂಸ್ಥೆಯಲ್ಲಿ ಅಖಿಲ ಭಾರತ ಬಂಜಾರ ಸೇವಾ ಸಂಘ ಮತ್ತು ಯುವ ಅಖಿಲ ಭಾರತ ಬಂಜಾರ ಸೇವಾ ಸಂಘ ವತಿಯಿಂದ ಬಂಜಾರ ಸಮಾಜದ ದೀಪಾವಳಿ ಮೇರಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು,
ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು, ಯುವತಿಯರು ದೀಪವನ್ನು ಬೆಳಗಿಸಿದರು, ಬಂಜಾರ ಸಮುದಾಯದ ಹಾಡುಗಳಿಗೆ ನೃತ್ಯ ಮಾಡಿ ದೀಪಾವಳಿಯನ್ನು ಸಂಭ್ರಮಿಸಿದ್ದರು.
ಈ ಸಂದರ್ಭದಲ್ಲಿ ಪರವತಲಿಂಗ ಪರಮೇಶ್ವರ್ ಮಹಾರಾಜ, ಬಳಿರಾಮ ಮಾರಾಜ್, ಮುರಾರಿ ಮಹಾರಾಜ್, ಅನಿಲ್ ಮಹಾರಾಜ್, ಶ್ರೀಗಣಪತಿ ಮಹಾರಾಜ್, ಲೋಕೇಶ್ ಮರಾಜ್, ಲತಾದೇವಿ, ಕಲಬುರಗಿ ಮಹಾನಗರ ಪಾಲಿಕೆಯ ಸದಸ್ಯರಾದ ಲತಾ ರವಿ ರಾಠೋಡ್, ಕೃಷ್ಣಾ ನಾಯಕ, ಪುಣೆ ವಿಶ್ವವಿದ್ಯಾಲಯ ಉಪನ್ಯಾಸಕ ರಾಜಶೇಖರ್ ರಾಠೋಡ್, ವಿಶ್ರಾಂತ ಕುಲಸಚಿವರಾದ ಪಿ.ಎಸ್ ನಾಯಕ್, ಬಾಬು ಹೊನ್ನನಾಯಕ, ಪ್ರೇಮಕುಮಾರ್ ರಾಠೋಡ, ಬಿ.ಬಿ.ನಾಯಕ, ಅಖಿಲ ಭಾರತ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ರಾಠೋಡ, ಪೋಮಾ ಕೆ ರಾಠೋಡ, ದತ್ತು ರಾಠೋಡ, ಶ್ರೀಕಾಂತ ಚವ್ಹಾಣ, ವಿಶಾಲ ನಾಯಕ, ಸಂದೀಪ ಚವ್ಹಾಣ, ಜಗದೀಶ್ ಚವ್ಹಾಣ, ಪ್ರಭು ಜಾಧವ, ಕಾಂತು ಪವಾರ, ಶ್ರೀನಿವಾಸ ಚವ್ಹಾಣ, ತುಳಸಿರಾಮ ಪವಾರ, ಭಿಕ್ಕುಸಿಂಗ ರಾಠೋಡ, ಉಮೇಶ್ ಚವ್ಹಾಣ, ಲಖನ ರಾಠೋಡ ಹಾಗೂ ಲಕ್ಷ್ಮಣ ರಾಠೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.