ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳ ಕಲಿಕೆಯಲ್ಲಿ ಇಳಿಮುಖವಾಗಿದೆ: ಕನ್ನೊಳ್ಳಿ
ಇಂಡಿ: ಕಳೆದ ಎರಡು ವರ್ಷದಿಂದ ಕರೋನಾ ಮಹಾ ಮಾರಿಯಿಂದ ಶಾಲಾ ಕಾಲೇಜುಗಳು ಬಂದ ಆಗಿದ್ದು, ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳ ಕಲಿಕೆಯಲ್ಲಿ ಇಳಿಮುಖವಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ ಹೇಳಿದರು.
ಅವರು ಮಂಗಳವಾರ ತಾಲೂಕಿನ ಚವಡಿಹಾಳ ಗ್ರಾಮದ ಭಾಗ್ಯವಂತಿ ಪ್ರೌಡಶಾಲೆಯಲ್ಲಿ 2021-22 ನೇ ಸಾಲಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ದಿನನಿತ್ಯ ಬಳಸುವ ಸಲಕರಣೆಗಳು ವಿತರಿಸಿ ಮಾತನಾಡಿದರು.
ಕರೋನಾ ಮಹಾಮಾರಿಯಿಂದ ಶೈಕ್ಷಣಿಕ ಕ್ಷೇತ್ರ ಕುಂಠಿತವಾಗಿದೆ. ಮಕ್ಕಳ ಆರೋಗ್ಯದ ಹಿತದೃಷ್ಠಿ ಮತ್ತು ಸರಕಾರದ ಆದೇಶದ ಪ್ರಕಾರ ಒಂದು ವರ್ಷ ಶಾಲಾ-ಕಾಲೇಜುಗಳು ಬಂದ್ ಮಾಡಿ, ಆನ್ಲೈನ್ ತರಗತಿ ನೀಡಲಾಗಿದೆ. ಆದರೂ ಶಿಕ್ಷಕರು ಮುಂದೆ ನಿಂತು ಪಾಠ ಮಾಡಿದಂತೆ ಆನ್ಲೈನ್ ತರಗತಿಗಳು ಮನಮುಟ್ಟುವಂತೆ ಮಾಡಲು ಆಗಲ್ಲ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಸಿ.ಎಸ್. ದಶವಂತ, ಅಸ್ಪಾಕ್ ಬೋರಾಮಣಿ, ಶಾಂತಪ್ಪ ದಶವಂತ, ಅಪ್ಪಾರಾಯ ದಶವಂತ, ಶಿವಾನಂದ ದಶವಂತ, ಸಂತೋಶ ಹಿರೇಮಠ, ಹಚ್.ಎಸ್. ಹಳೇಮನಿ ಸೇರಿದಂತೆ ಮತ್ತಿತರರು ಇದ್ದರು.