ಬಸಪ್ಪ ಅರಳಿ ನಿಧನ
ಕಾರಟಗಿ 24: ಪಟ್ಟಣದ ವೀರಶೈವ ಸಮಾಜದ ಮುಖಂಡ ಬಸಪ್ಪ ಅರಳಿಯವರು(79 ವರ್ಷ) ದಿ. 24ರಂದು ಬೆಳಗಿನ ಜಾವದಲ್ಲಿ 3.30 ಕ್ಕೆ ನಿಧನರಾಗಿದ್ದು, ದಿವಂಗತರು ಗಂಗಾವತಿ ಪಿ.ಎಲ್.ಡಿ.ಬ್ಯಾಂಕ್, ಕಾರಟಗಿಯ ವಿಶೇಷ ಎ.ಪಿ.ಎಮ್.ಸಿ.ಮತ್ತು ಕಾರಟಗಿ ಮಂಡಲ ಪಂಚಾಯತ್ ಅದ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಜೆ.ಡಿ.ಎಸ್. ಪಕ್ಷದಿಂದ ಕನಕಗಿರಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಗಂಗಾವತಿಯಲ್ಲಿ ಓಷಧೀಯ ಭವನ ಮತ್ತು ಓಷಧೀಯ ಸಂಕೀರ್ಣ ನಿರ್ಮಿಸಿದ್ದು ಈ ಬಸಪ್ಪ ಅರಳಿ ಸಾ. ಕಾರಟಗಿ ಇವರಿಂದ ಖರೀಧಿಸಿದ ನಿವೇಶನದಲ್ಲಿ ಸಹೃದಯಿ,ಸಂಪನ್ನ ಬಸಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗಂಗಾವತಿ ತಾಲೂಕು ವೀರಶೈವ ಮಹಾ ಸಭಾದ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಮತ್ತು ಓಷಧ ವ್ಯಾಪಾರಿಗಳು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.