ಕಳಕಮ್ಮ ಕೊರ್ಲಹಳ್ಳಿ ನಿಧನ

ಮುಂಡರಗಿ 28: ತಾಲೂಕಿನ ಡಂಬಳ ಗ್ರಾಮದ ಗೋಣಿಬಸಪ್ಪ ಕೊರ್ಲಹಳ್ಳಿಯವರ ತಾಯಿ ಕಳಕಮ್ಮ ಸಂಗನಬಸಪ್ಪ ಕೊರ್ಲಹಳ್ಳಿ(85)  ಇವರು ಸೋಮವಾರ ರಾತ್ರಿ 11ಕ್ಕೆ ನಿಧನರಾದರು ಎಂದು ತಿಳಿಸಲು ವಿಷಾದ ಎನಿಸುತ್ತದೆ.  

ಮೃತರು ಮೂರು ಜನ ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಸಾಯಂಕಾಲ ಡಂಬಳ ಗ್ರಾಮದಲ್ಲಿ ಜರುಗಿತು.