ಬಳ್ಳಾರಿ

ಶಿವಕುಮಾರ ಶ್ರೀಗಳ ದ್ವಿತೀಯ ಪುಣ್ಯಸ್ಮರಣೆ

ಶಿವಕುಮಾರ ಶ್ರೀಗಳ ದ್ವಿತೀಯ ಪುಣ್ಯಸ್ಮರಣೆ

ಬಳ್ಳಾರಿ 21: ಪದ್ಮಭೂಷಣ, ನಿರಂಜನ ಪ್ರಣವಸ್ವರೂಪಿ ಶಿವಕುಮಾರ ಮಹಾಸ್ವಾಮಿಜಿ ಅವರ ದ್ವೀತಿಯ ಪುಣ್ಯ ಸ್ಮರಣೆಯನ್ನು ದಿ. 21ರಂದು ಬೆಳಿಗ್ಗೆ 7.30ಗಂಟೆಗೆ ಚಾನಾಳ್ ಗ್ರಾಮದಲ್ಲಿ ಆದ್ದೂರಿಯಾಗಿ ಆಚರಿಸಲಾಯಿತು.

ಮೊದಲಿಗೆ ಗಂಗಾಮಾತೆಯ ಪೂಜೆ, ಕಳಸ, ಡೊಳ್ಳು, ವಾದ್ಯಗಳ ಮುಖಾಂತರ ಡಾ. ಶಿವಕುಮಾರ ಮಹಾಸ್ವಾಮಿಜಿಗಳ ಭಾವಚಿತ್ರಕ್ಕೆ ಪುಷ್ಪಗಳನ್ನು ಸಲ್ಲಿಸಿ, ಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತು. 

ಈ ಸಂದರ್ಭದಲ್ಲಿ ಚಾನಾಳ್ ಮಲ್ಲಿಕಾರ್ಜುನ, ಸೂಗೂರಿ, ಬಸವರಾಜಸ್ವಾಮಿ, ಎ.ತಿಪ್ಪಾರೆಡ್ಡಿ, ಎಂ.ಹನುಮಂತರೆಡ್ಡಿ, ನಾಗರಾಜ, ನೀಲಕಂಠಸ್ವಾಮಿ, ವಿನಯ್‍ಕುಮಾರ್, ಆಚಾರಿ, ಷಡಕ್ಷರಿಸ್ವಾಮಿ, ಕುರುಬರ ಮಲ್ಲಪ್ಪ, ಕೆ.ವೆಂಕಟೇಶಪ್ಪ, ಅಂಬಣ್ಣ, ಕುರುಗೋಡು ಹುಲುಗಪ್ಪ, ಎಂ.ರಾಮಣ್ಣ,  ಪೂಜಾರಿ ಬಸವರಾಜ ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ