264ನೇ ಮಹಾಮನೆ ಲಿಂ. ರಾವ್ ಬಹದ್ದೂರ್ ಮಹಾಬಲೇಶ್ವರಪ್ಪ ದತ್ತಿ ಕಾರ್ಯಕ್ರಮ
ಬಳ್ಳಾರಿ 18: ಬದುಕಿನಲ್ಲಿ ಬರುವ ಬವಣೆಗಳು, ಕರ್ಮಫಲಗಳೆಂದು ಶರಣರು ಭಾವಿಸಲಿಲ್ಲ. ಬವಣೆಗಳು ಬದುಕಿನ ಸಾರ್ಥಕತೆಗೆ ಬೇಕಾದ ಶಕ್ತಿಯನ್ನು ನೀಡುವ ಸಂದರ್ಭಗಳೆಂದು ಶರಣರು ಭಾವಿಸಿದ್ದರು. ಶರಣರ ಲೋಕಾನುಭವಗಳು, ಅಲೌಕಿಕ ಅನುಭೂತಿಗೆ ನಿಲುಕುವ ಅನುಭಾವಗಳಾಗಿ ನೆಲೆಗೊಂಡವೆಂದು ವೀ.ವಿ. ಸಂಘದ ಸ್ವತಂತ್ರ ಪ.ಪೂ.ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಏಳುಬೆಂಚಿ ರಾಜಶೇಖರ ನುಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ದಂಡುಪ್ರದೇಶದಲ್ಲಿಯವೀ.ವಿ.ಸಂಘದ ಸ್ವತಂತ್ರ ಪ.ಪೂ.ಕಾಲೇಜಿನಲ್ಲಿ (ಮ್ಯಾನೇಜಮೆಂಟ್ ಕಾಲೇಜಿನ ಸಭಾಂಗಣ) ಏರಿ್ಡಸಿದ್ದ 264ನೇ ಮಹಾಮನೆ ಲಿಂ. ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ದತ್ತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ವಿದ್ಯಾರ್ಥಿಗಳು ತಮ್ಮ ತರಗತಿಯ ಕಲಿಕಾ ಅನುಭವಗಳನ್ನು ಅನುಭಾವದ ನೆಲೆಯಲ್ಲಿ ಸ್ಥಿರಗೊಳಿಸಿಕೊಳ್ಳಬೇಕು. ಅನುಭವ ಅನುಭಾವವಾದಾಗ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸನ್ನು ಕಾಣಬಹುದು. ಹನ್ನೆರಡನೇ ಶತಮಾನದ ಬಹು ಸಂಖ್ಯೆಯ ಶರಣರು, ಅನಕ್ಷರಸ್ಥರಾಗಿದ್ದರೂ, ಅನುಭವ ಮಂಟಪದ ಚಿಂತನೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡು ನುಡಿದ ನುಡಿಗಳೆಲ್ಲ ಇಂದಿಗೂ ವಚನ ರೂಪದಲ್ಲಿ ನಮಗೆ ಲಭ್ಯವಾಗಿವೆ.ಎಂದರು.
"ಶರಣರ ಅನುಭಾವದ ನೆಲೆಗಳು."ಎಂಬ ವಿಷಯದ ಚಿಂತನ ಗೋಷ್ಠಿಯಲ್ಲಿ"ಬಸವಣ್ಣನ ಭಕ್ತಿ"ವಿಷಯ ಕುರಿತು ಚಿಂತನೆ ಮಂಡಿಸಿದ ಬಾಲಕಿಯರ ಸರ್ಕಾರಿ ಪಂ.ಪೂ.ಕಾಲೇಜಿನ ಕನ್ನಡ ಉಪನ್ಯಾಸಕರಾದ ಚಾಂದ್ ಬಾಷಾ ರವರು,ಬಸವಣ್ಣ ಎಂದರೆ ಭಕ್ತಿ.ಮುಗಿದ ಕೈಯ,ಬಾಗಿದ ತಲೆಯ ರೂಪ.ಸದುವಿನಯದ ಕಿಂಕರ ಭಾವದ ಶಂಕರ ಸ್ವರೂಪ.ಭಕ್ತಿಯ ಭಾಂಡಾರಿ ಎಂದು ವಿವರಿಸಿದರು.
" ಅಕ್ಕನ ವಿರಕ್ತಿ"ಚಿಂತನೆ ಮಂಡಿಸಿದ ವೀರಶೈವ ಪ.ಪೂ.ಕಾಲೇಜಿನ ಕನ್ನಡ ಉಪನ್ಯಾಸಕಿ ಶ್ರೀಮತಿ ಹೇಮಹಿರೇಮಠ ರವರು,ವಿರಕ್ತಿ ಎಂಬ ಪದದ ಪರ್ಯಾಯ ಅರ್ಥವೇ ಅಕ್ಕ ಮಹಾದೇವಿ. ಅನುಪಮ ಸುಂದರಿ ಯಾಗಿದ್ದರೂ ಸೌಂದರ್ಯದ ವ್ಯಾಮೋಹವಿಲ್ಲ. ಕೌಶಿಕ ಮಹಾರಾಜ ನ ಪಟ್ಟದರಸಿಯಾಗುವ ಭಾಗ್ಯ ಒದಗಿ ಬಂದರೂ ವೈಭವ,ಸಂಪತ್ತಿನ ಆಸೆಯಿಲ್ಲ. ಹಸಿವು, ತೃಷೆಗಳಾದರೂ, ಅಪಮಾನ, ನಿಂದಗಳು ಬಂದರೂ ಲೆಕ್ಕಿಸದೇ ವಿರಕ್ತಳಾಗಿ ಕೇಶಾಂಬರಿಯಾಗಿ ಸಂಚರಿಸಿದಳೆಂದರು.
"ಅಲ್ಲಮನ ಅನುಭಾವ"ದ ಬಗೆಗೆ ಮಾತನಾಡಿದ ಗುಗ್ಗರಿಹಟ್ಟಿಯ ಎಸ್.ಯು.ಜೆ.ಎಸ್.ಪ.ಪೂ.ಕಾಲೇಜಿ ನ ಕನ್ನಡ ಉಪನ್ಯಾಸಕರಾದ ಎಸ್.ಪಿ ಹೊಂಬಾಳೆ ರವರು,ಅಲ್ಲಮನು ಅಕಾಯನಾಗಿ ಚರಿಸಿದ ಜಂಗಮ ಮೂರ್ತಿ.ಜೀವಿತದ ಪ್ರತಿ ಕ್ಷಣವನ್ನು ಅನುಭಾವದ ನೆಲೆಯಲ್ಲಿಯೇ ಕಂಡ ಸಂತ.ಮಾರ್ಗದಲ್ಲಿ ಸಿಕ್ಕ ಸಿದ್ಧರಾಮ, ಮುಕ್ತಾಯಕ್ಕ,ಬಸವಣ್ಣಮುಂತಾದ ಶರಣರಿಗೆ ಅಂತರಂಗದ ಅರಿವಿನ ಜ್ಯೋತಿ ದರ್ಶನ ಮಾಡಿಸಿದ ದಾರ್ಶನಿಕ ನೆಂದು ಬಣ್ಣಿಸಿದರು.
ಸಮಾರೋಪ ನುಡಿಗಳನ್ನಾಡಿದ ನಿವೃತ್ತ ಕಲಾ ಶಿಕ್ಷಕ ಕೆ.ಬಿ.ಸಿದ್ಧಲಿಂಗಪ್ಪ ಜೀವ, ದೇವಾ, ಜಗತ್ತು ಈ ಮೂರರ ಮಹತ್ತು,ಮಹಿಮೆ ಮತ್ತು ಮೂಲವ ನ್ನು ಅರಸುತ್ತ ಹೊರಟ ಮಾನವರಲ್ಲಿ ಕೆಲವರು,ಹೊರಗನ್ನು ಹೊರಗಿನಿಂದ ಕಂಡು ಲೋಕದಿಂದ ದೂರಾದರು. ಕೆಲವರು ಹೊರಗನ್ನು ಒಳಗೆ ಕಂಡುಹೊರ ಒಳಗೆನ್ನದೇ ಏಕವಾದ ಸತ್ಯದ ಸಾಕ್ಷಾತ್ಕಾರ ಹೊಂದಿ ಸಂತರಾಗಿ, ಶರಣರಾಗಿ,ಯೋಗಿಗಳಾಗಿ,ಮಹಾತ್ಮ ರಾಗಿ,ಮಹಿಮೆ ರಾಗಿ ಜನಮಾನಸ ದಲ್ಲಿ ಇಂದಿಗೂ ಉಳಿದು ಬಂದಿದ್ದಾರೆ ಎಂದರು.
ಲಕ್ಷ್ಮಿಯನ್ನು ಕುಮಾರ್ ವಚನ ಪ್ರಾರ್ಥನೆ ಮಾಡಿದರು.ರಾವ್ ಬಹದ್ದೂರ್ ವೈ.ಮಹಾಬಲೇಶ್ವರ್ಪ ನವರ ಮರಿಮೊಮ್ಮಗ,ವಿಧಾನ ಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ರವರ ಮಗ ಕಾರ್ತೀಕ್ ಏಚರೆಡ್ಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಮಂಜುನಾಥ್, ಸ್ವಾಗತ ಕೋರಿದರು. ಪರಿಷತ್ತಿನ ಅದ್ಯಕ್ಷರಾದ ಕೆ.ಬಿ.ಸಿದ್ಧಲಿಂಗಪ್ಪ ದತ್ತಿ ಧತೃಗಳನ್ನು ಪರಿಚಯಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕನ್ನಡ ಉಪನ್ಯಾಸಕರಾದ ಎ.ಎಂ.ಪಿ.ವೀರೇಶಸ್ವಾಮಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ನಮ್ಮನ್ನಗಲಿದ ನಾಡಿನ ಖ್ಯಾತ ಕವಿ ಚೆನ್ನವೀರ ಕಣವಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೌನ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.