ದರ್ಶನ್ ಸಿನಿ ಜೀವನಕ್ಕೆ 24 ವರ್ಷ : ಆಗಸ್ಟ್ 11 ರಂದು ಅಭಿಮಾನಿಗಳಿಗೆ ಹಬ್ಬ
ಬೆಂಗಳೂರು, ಆಗಸ್ಟ್ 09 : ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ರಂಗಕ್ಕೆ ಬಂದು ಇದೇ ಆಗಸ್ಟ್ 11 ಕ್ಕೆ 24 ವರ್ಷ ತುಂಬುತ್ತಿದೆ. ಈ ವಿಶೇಷ ದಿನವನ್ನು ಉತ್ಸವದ ರೀತಿಯಲ್ಲಿ ಆಚರಿಸಲು ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ.
ಇದಕ್ಕಾಗಿ ನಾಳೆ ಸಂಜೆ ವಿಶೇಷ ಸಿಡಿಪಿಯೊಂದು ಬಿಡುಗಡೆಯಾಗಲಿದೆ. ಇದನ್ನು ಟ್ವಿಟರ್ ನಲ್ಲಿ ಟ್ರೆಂಡ್ ಮಾಡಲು ದಾಸನ ‘ಗಜ’ಪಡೆ ಸಿದ್ಧವಾಗಿದೆ.
ಚಿತ್ರರಂಗದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ದರ್ಶನ್ ಗೆ ಅಭಿಮಾನಿ ಬಳಗದವರು ಜಾಸ್ತಿ.
ಅಭಿಮಾನಿಗಳೇ ದೇವರು ಎನ್ನತ್ತ, ತಮ್ಮ ಅಭಿಮಾನಿಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ದರ್ಶನ್ ಸಿನಿ ಜೀವನಕ್ಕೆ 24 ವರ್ಷ ತುಂಬಿದ ಅವರ ವಿಶೇಷ ದಿನದಂದು ಅಭಿಮಾನಿಗಳೇ ಹಬ್ಬ ಆಚರಿಸಲು ನಿರ್ಧರಿಸಿದ್ದಾರೆ.