ಸಂಭ್ರಮದಿಂದ ದಾನಮ್ಮ ದೇವಿಯ ಪಾಲಕಿ ಉತ್ಸವ
ಬೈಲಹೊಂಗಲ 26: ಪಟ್ಟಣದ ಚನ್ನಮ್ಮ ಉಪನಗರದ ದಾನಮ್ಮದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಮಹಾಪೂಜೆ, ದೇವಿಯ ಪಾಲಕಿ ಉತ್ಸವ ಗುರುವಾರ ನೂರಾರು ಸದ್ಭಕ್ತರ ಜಯಘೋಷಗಳ ಮದ್ಯೆ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆ ಪ್ರಾಥಃಕಾಲ ದಾನಮ್ಮದೇವಿಯನ್ನು ವಿವಿಧ ಪುಷ್ಪಗಳಿಂದ ಅಲಕೃಂತಗೊಳಿಸಲಾಗಿತ್ತು. ಕುಂಕುಮಾರ್ಚನೆ, ಅಭಿಷೇಕ, ವಿಶೇಷ ಮಹಾಪೂಜೆ ಜರುಗಿತು. ದಾನಮ್ಮದೇವಿಯ ಪಾಲಕಿ ಉತ್ಸವ ಶಿಕ್ಷಕರ ಚಾಳ, ಚೆನ್ನಮ್ಮ ಉಪನಗರ, ಶಿವಬಸವ ನಗರಗಳಲ್ಲಿ ಸಂಚರಿಸುವಾಗ ಸುಮಂಗಲೆಯರು ನೀರು ಹಾಕಿ ನೈವೇದ್ಯ ಅರ್ಿಸಿದರು. ಮರಳಿ ದೇವಸ್ಥಾನಕ್ಕೆ ತಲುಪಿತು. ಮದ್ಯಾಹ್ನ ಸಹಸ್ರಾರು ಜನತೆ ಮಹಾಪ್ರಸಾದ ಸವಿದರು. ಸಾವಿರಾರು ಸದ್ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.
ಶಾಸಕ ಮಹಾಂತೇಶ ಕೌಜಲಗಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಪಿಎಲ್ಡಿ ಬ್ಯಾಂಕ ಅಧ್ಯಕ್ಷ ಶ್ರೀಶೈಲ ಯಡಳ್ಳಿ ಅವರನ್ನು ಸತ್ಕರಿಸಲಾಯಿತು.
ಟ್ರಸ್ಟ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಕಮೀಟಿಯ ಸರ್ವ ಸದಸ್ಯರು ಸಕಲ ಸದ್ಭಕ್ತರು ಇದ್ದರು.