ದದೂರು ಶಾಂತನಗೌಡ್ರು ವೀರಶೈವ ಮಹಾವಿದ್ಯಾಲಯದ ಅಧ್ಯಕ್ಷರಾಗಿ ಪದಗ್ರಹಣ
ಬಳ್ಳಾರಿ 12: ಶಿಕ್ಷಣ ಸಂಸ್ಥೆಗಳ ಸಂಖ್ಯೆ ದೇಶದಲ್ಲಿ ವೃದ್ಧಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎನಿಸಿದರು ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದು ಖೇಧದ ಸಂಗತಿ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಿ.ವಿ.ಬಸವರಾಜ ಅಭಿಮತಪಟ್ಟರು.
ವೀರಶೈವ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡ ದರೂರು ಶಾಂತನಗೌಡ್ರ ಪದಗ್ರಹಣ ಮತ್ತು ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಉನ್ನತ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ನೀಡುತ್ತಿರುವ ಮಾನವ ಸಂಪನ್ಮೂಲದ ಮೇಲೆ ದೇಶದ ಅಭಿವೃದ್ಧಿ ಆಧರಿಸಿದೆ. ಆದ್ದರಿಂದ, ಇಂದಿನ ಬದಲಾವಣೆಗಳು ಮತ್ತು ನೀರೀಕ್ಷೆಗಳಿಗೆ ಪೂರಕವಾದ ಪಠ್ಯಕ್ರಮದ ರಚನೆ ಯಾಗಬೇಕು. ಅದು ಜೀವನ ಮತ್ತು ಸ್ವಯಂ ಉದ್ಯೋಗ ಕೌಶಲ್ಯಗಳ ಬೆಳವಣಿಗೆ ಒಳಗೊಂಡಾಗ ಮಾತ್ರ ಇಂದಿನ ನಮ್ಮ ರಾಷ್ಟೊದ ಧ್ಯೇಯವಾದ ಆತ್ಮ ನಿರ್ಭರ ಸಾಧಿಸಲು ಸಾಧ್ಯವಾಗುತ್ತದೆ ಎಂದರು. ವಿದ್ಯಾರ್ಥಿಗಳಲ್ಲಿ ಸಕರಾತ್ಮಕ ಮನೋಭಾವ ಬೆಳಸಿ, ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ರೂಢಿಸಿಕೊಳ್ಳಲ್ಲು ಶಿಕ್ಷಕರು ಪ್ರಯತ್ನಿಸಬೇಕೆಂದು ತಿಳಿಸಿದರು. ವೀ.ವಿ.ಸಂಘದ ಕೋಶಾಧಿಕಾರಿ ಗೋನಾಳರಾಜಶೇಖರ ಗೌಡ ಮಹಾವಿದ್ಯಾಲಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವುದು ತೃಪ್ತಿ ತಂದಿದೆ ಎಂದರು. ತಮ್ಮ ಅವಧಿಯಲ್ಲಿ ಕಲಿಕೆ, ಬೋಧನೆ, ಸಂಶೋಧನೆ, ಪಠ್ಯೇತರ ಚಟುವಟಿಕೆಗಳ ಅನುಷ್ಠಾನ ಹಾಗೂ ಬೆಂಬಲಿತ ಸೇವೆಗಳ ಲಭ್ಯತೆ ಬಗ್ಗೆ ವಿಶೇಷ ಕಾಳಜಿ ವಹಿಸಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಸಿಕ್ಕ ಅವಕಾಶವನ್ನು ಸಾರ್ಥಕವಾಗಿ ಬಳಸಿಕೊಂಡಿರುವುದರನ್ನು ನೆನಪಿಸಿಕೊಂಡರು.
ಪದಗ್ರಹಣ ಮಾಡಿ ಮಾತನಾಡಿದ ನೂತನ ಅಧ್ಯಕ್ಷರು ಹಾಗೂ ವೀ.ವಿ.ಸಂಘದ ಸಹ ಕಾರ್ಯದರ್ಶಿಗಳಾದ ದರೂರು ಶಾಂತನಗೌಡ್ರು ಶಿಕ್ಷಣ ಮಾತ್ರ ದೇಶದ ಮುಂದಿರುವ ಸವಾಲುಗಳು ಮತ್ತು ಸಮಸ್ಯೆಗಳಿಗೆ ಸೂಕ್ತ ಪರಿಹಾರವಾಗಿದೆ ಎಂದರು. ನಮ್ಮ ಹಿರಿಯರು ಈ ನಾಡಿನಲ್ಲಿ ಕಟ್ಟಿದ ಶೈಕ್ಷಣಿಕ ಸಂಸ್ಥೆಗಳನ್ನು ಅವರ ಆಶಯದಂತೆ ಕಾಪಾಡಿ ಎಲ್ಲ ಜನ ವರ್ಗಗಳಿಗೆ ಉತ್ತಮ ಶಿಕ್ಷಣ ನೀಡಿ ಸುಭದ್ರ ರಾಷ್ಟೊ ನಿರ್ಮಿಸಲು ಒಟ್ಟಾಗಿ ಶ್ರಮಿಸೋಣ ಎಂದು ಹೇಳಿದರು.
ವೀ.ವಿ.ಸಂಘದ ಉಪಾಧ್ಯಕ್ಷ ಅಲ್ಲಂ ಚನ್ನಪ್ಪ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. ವೀ.ವಿ.ಸಂಘದ ವಿವಿಧ ಸಂಸ್ಥೆಗಳ ಅಧ್ಯಕ್ಷ ಬೈಲಹೊದ್ದಿಗೇರಿ ರ್ರಿಸ್ವಾಮಿ, ಅಸುಂಡಿ ನಾಗರಾಜ, ಕುಪ್ಪಗಲ್ ಗಿರಿಜಮ್ಮ, ಹೆಚ್.ಎಂ.ಕಿರಣ್ ಕುಮಾರ್, ಹಾಗೂ ಮಾಜಿ ಸಹ ಕಾರ್ಯದರ್ಶಿ ಕೆ.ವೀರೇಶ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.