ಲೇಖನಗಳು

ಅಪ್ಪ ಐ ಲವ್ ಯು....

ಅಪ್ಪ ಐ ಲವ್ ಯು....

ಚಿಕ್ಕವರಿದ್ದಾಗ ತಾಯಿ ಮಕ್ಕಳಿಗೆ ಹೇಳುತ್ತಾಳೆ ಅಲ್ಲಿ ಹೋಗಬೇಡ ಅಪ್ಪ ಹೋಡಿತ್ತಾನೆ, ಇಲ್ಲಿ ಹೋಗಬೇಡ ಅಪ್ಪ ಹೋಡಿತ್ತಾನೆ, ಕೆರೆಗೆ ಈಜಲು ಹೋಗಬೇಡ ಅಪ್ಪ ಹೋಡಿತ್ತಾನೆ, ಮರ ಹತ್ತ ಬೇಡ ಅಪ್ಪ ಹೋಡಿತ್ತಾನೆ, ಶಾಲೆಗೆ ಹೋಗು ಇಲ್ಲಾಂದ್ರೆ ಅಪ್ಪ ಹೋಡೆಯುತ್ತಾನೆ, ಅಪ್ಪನ ಹೇದರಿಕೆಗೆ ಶಾಲೆ ಹೋಗುತ್ತವೆ, ಅಪ್ಪ ಹೊಡೆಯಬಾರದಂತಾ ಅಭ್ಯಾಸ ಮಾಡತ್ತೇವೆ, ಬರ್ತಾ ಬರ್ತಾ ಅಪ್ಪನನ್ನು ನಿರ್ಲಲಕ್ಷಿಸಿ ತಾಯಿಗೆ ಪ್ರೀತಿ ಮಾಡುತ್ತಾ ಹೋಗುತ್ತೇವೆ. ಅಪ್ಪನನ್ನು ಮನಸ್ಸಿನಿಂದ ತೆಗೆದು ಹಾಕಿ ಅಮ್ಮನ ಚರಣಗಳಲ್ಲಿ ಸರ್ವಸ್ವವನ್ನು ಕಾಣುತ್ತೇವೆ. ಅಪ್ಪ ಅಂದರೆ ನಾಲ್ಕು ಮೈಲು ದೂರಾನೇ ಇರ್ತಿವಿ. 

ಅಮ್ಮ ಒಂಬತ್ತು ತಿಂಗಳು ಹೊರುತ್ತಾಳೆ, ಅಪ್ಪ ಇಪ್ಪತ್ತೈದು ವರ್ಷ ಸಾಕುತ್ತಾನೆ.ಅಪ್ಪ ಇರ್ತಾನೆ ಕೇವಲ ಮಕ್ಕಳ ಹೆಸರು ಮತ್ತು ಅಡ್ಡ ಹೆಸರಿನ ನಡುವೆ ಮಾತ್ರ, ಮಕ್ಕಳು ದುರ್ಗೆಗೆ ದೇವಿ ಅಂತಾರೆ, ಭೂಮಿಗೆ ತಾಯಿ ಅಂತಾರೆ, ಭಾರತೀಗೆ ಮಾತೇ ಅಂತಾರೆ ಆದರೆ ಅಪ್ಪ ಮಾತ್ರ ಈ ಭೂಮಿಯಿಂದ ಈ ದೇಶದಿಂದ ಮಕ್ಕಳ ಮನಸ್ಸಿನಿಂದ ಯಾವಾಗಲೂ ದೂರಾನೆ ಇರ್ತಾನೆ. ಮಕ್ಕಳಿಗೆ ಅಪ್ಪನೂ ಹಣ ನೀಡುವ, ಬೇಡಿದ್ದನ್ನು ಕೋಡಿಸುವ ವ್ಯಕ್ತಿಯಾಗಿರುತ್ತಾನೆ. 

ಮಕ್ಕಳು ತಾಯಿಯ ಬಗ್ಗೆ ಹಾಡು ಹಾಡುತ್ತಾರೆ, ಕವನ ಬರೆಯುತ್ತಾರೆ ಆದರೆ ಯಾವ ಮಕ್ಕಳು ತನ್ನ ಅಪ್ಪನ್ನು ಹಾಲಿನ ಕೆನೆ ಅನ್ನಲ್ಲ, ಗುಡಿ ಮೇಲಿನ ಗೋಪುರ ಅನ್ನಲ್ಲ, ಅಪ್ಪನ ಬಗ್ಗೆ ಮಾತನಾಡುವುದಕ್ಕೆ ಮಕ್ಕಳ ಹತ್ತಿರ ಶಬ್ಬನೇ ಇರಲ್ಲ, ಮಕ್ಕಳು ಆಟ ಆಡಬೇಕಾದರೆ ಕಾಲಿಗೆ ನೋವುವಾದರೆ ಮಕ್ಕಳು ಅಪ್ಪ ಅನ್ನಲ್ಲ ಅಮ್ಮಾ ಅಂತಾರೆ, ಅಮ್ಮ ಮನೆಯಲ್ಲಿದ್ದರೆ ಮನೆ ತುಂಬಿದಂತೆ ಇರುತ್ತದೆ. ಅಪ್ಪ ಮನೆಯಲ್ಲಿದ್ದರೆ ಸ್ಮಶಾನ ಮೌನವಾಗಿರುತ್ತದೆ. ಮಕ್ಕಳು ಆಣೆ ಹಾಕಿದರು ತಾಯಿ ಮೇಲೆ ಆಣೆ ಹಾಕುತ್ತಾರೆ. ಅಪ್ಪ ಆಣೆ ಹಾಕಿಸಿಕೊಳ್ಳುವುದಕ್ಕೂ ಲಾಯಕ್ ಇರಲ್ಲಾರೀ.. 

ಅಪ್ಪ ಅಮ್ಮ ಇಲ್ಲದಿರುವವರು ಅನಾಥರಲ್ಲ, ಅಪ್ಪ ಅಮ್ಮನ ಬೆಲೆ ಗೊತ್ತಿಲ್ಲದವರು ನಿಜವಾದ ಅನಾಥರು, ಅಪ್ಪನ ಕೈಗಳು ಶ್ರಮ ಪಟ್ಟಾಗಲೆ, ಮಕ್ಕಳ ಕೈಗಳು ಸುಂದರವಾಗಿ ಕಾಣುವುದು. ಪದಗಳಲ್ಲಿ ವಿವರಿಸಲಾಗದ ಬೆಲೆ ಕಟ್ಟಲಾಗದ ನಮ್ಮ ಕುಟುಂಬಕ್ಕೆ ಆದಾರ ಸ್ತಂಭವೇ ನಮ್ಮ ಅಪ್ಪ, ತನಗೆ ಎಷ್ಟೇ ನೋವು ಬಂದರೂ ತನ್ನ ಮಕ್ಕಳು ಸಂತೋಷದಿಂದ ಖುಷಿಯಾಗಿರಲೆಂದು ಬಯಸುವ ಏಕೈಕ ಜೀವ ನಮ್ಮ ಅಪ್ಪ. ತಾನು ಕಾಣದ ಜಗತ್ತನ್ನು ನನ್ನ ಮಕ್ಕಳು ಕಾಣಲೆಂದು ತನ್ನ ಭುಜದ ಮೇಲೆ ಹೊತ್ತು ಸುತ್ತಾಡಿಸುವವನೆ ನಮ್ಮ ಅಪ್ಪ. 

ಬಿದ್ದಾಗ ಅಮ್ಮ, ಅಳುವಾಗ ಅಮ್ಮ, ನಮಗೆ ನೋವು ಆದಾಗಲೆಲ್ಲಾ ಅಮ್ಮ ನನ್ನನೆ ಕೂಗುತ್ತೇವೆ, ಆದರೆ ಅಪ್ಪನ ಕಣ್ಣೀರಿಲ್ಲದ ದುಃಖದ ನೋವು ಯಾರಿಗೂ ಕಾಣಿಸುವುದಿಲ್ಲ, ಅಪ್ಪನ ದುಡಿಮೆಯ ಒಂದು ಒಂದು ಬೆವರಿನ ಹನಿಗಳು ಮಕ್ಕಳ ಯಶಸ್ವಿಗೆ ದಾರಿ ದೀಪವಾಗಿರುತ್ತವೆ, ಅನ್ನದ ಪ್ರತಿ ಅಗುಳಿನಲ್ಲಿರುವಳು ಅಮ್ಮ, ಅದೇ ಅನ್ನದ ಹಿಂದಿರುವ ಪರಿಶ್ರಮದ ಬೆವರಿನ ಹನಿಯೇ ಅಪ್ಪ.  

ಇಂದಿನ ಒತ್ತಡಯುತ ಜಗತ್ತಿನಲ್ಲಿ ಮಕ್ಕಳು ವಯಸ್ಸಾದ ತಂದೆ, ತಾಯಿಯನ್ನು ನೋಡಿಕೋಳ್ಳಲಾಗದೇ ವೃದ್ಧಾಶ್ರಮಕ್ಕೆ ಸೇರಿಸುವುದು ವಿಪರ್ಯಾಸದ ಸಂಗತಿಯಾಗಿದೆ. ಅದೇ ತಂದೆ, ತಾಯಿ ತಮ್ಮ ಎಲ್ಲ ಮಕ್ಕಳ ಉಜ್ವಲ ಭವಿಸ್ಯವನ್ನು ರೂಪಿಸಲು ತಮ್ಮ ರಕ್ತವನ್ನು ಬೆವರಿನ ಹನಿಯಂತೆ ಸೂರಿಸಿರುವುದು ಮಕ್ಕಳಿಗೆ ಕಾಣಿಸುವುದಿಲ್ಲ. ಇದ್ದಾಗ ಕಡೆಗಣಿಸಿ, ಸತ್ತಾಗ ಅತ್ತರೆ ಮತ್ತೆ ಹುಟ್ಟಿ ಬರುವರೆ ಹೆತ್ತವರು....  

ಪ್ರತಿ ವರ್ಷಕ್ಕೊಮ್ಮೆ ಅಮ್ಮಂದಿರ ದಿನಾಚರಣೆ, ಅಪ್ಪಂದಿರ ದಿನಾಚರಣೆ ದಿನಕ್ಕೆ ಸಿಮಿತವಾಗದೆ, ಹೆತ್ತವರನ್ನು ಪ್ರತಿ ದಿನ ಸುಖ ಸಂತೋಷದಿಂದ ನೋಡಿಕೊಳ್ಳುವುದು ಪ್ರತಿ ಮಕ್ಕಳ ಜವಾಬ್ದಾರಿಯಾಗಿರುತ್ತದೆ. 

ಕಣ್ಣು ಮುಚ್ಚಿ ಪ್ರೀತಿ ಮಾಡುವವರನ್ನು ಪ್ರೇಯಸಿ ಅಂತಾರೆ.. 

ಕಣ್ಣು ತೆರೆದು ಪ್ರೀತಿ ಮಾಡುವವರನ್ನು ಗೆಳಯ ಅಂತಾರೆ.. 

ಕಣ್ಣು ಪಿಕ್ಕಳಿಸುತ್ತಾ ಪ್ರೀತಿ ಮಾಡುವವರನ್ನು ಪತ್ನಿ ಅಂತಾರೆ.. 

ಮತ್ತೆ  ಅದೇ 

ತನ್ನ ಸ್ವತಂ ಕಣ್ಣುಗಳು ಇರುವವರೆಗೆ ಪ್ರೀತಿ ಮಾಡುವವರನ್ನು ತಾಯಿ ಅಂತಾರೆ... 

ಆದರೆ ಕಣ್ಣಿನಲ್ಲಿ ಪ್ರೀತಿ ತೋರಿಸದೆ ಪ್ರೀತಿ ಮಾಡುವವರನ್ನು ತಂದೆ ಅಂತಾರೆ...... 

- ಗಣೇಶ ಬಡೆಪ್ಪನವರ 


ಸುದ್ದಿ ಓದಿ