ಮುಂದಗೋಡ

ಡಿಎಸ್‌ಎಸ್ ಉತ್ತಮ ಸಂಘಟನೆಯಾಗಿ ಹೊರಹೊಮ್ಮಿದೆ: ಶ್ರೀಧರ್

ಡಿಎಸ್‌ಎಸ್ ಉತ್ತಮ ಸಂಘಟನೆಯಾಗಿ ಹೊರಹೊಮ್ಮಿದೆ: ಶ್ರೀಧರ್

ಲೋಕದರ್ಶನ ವರದಿ 

ಮುಂಡಗೋಡ: ಡಿ.ಎಸ್‌.ಎಸ್‌. ಉತ್ತಮ ಸಂಘಟನೆಯಾಗಿ ಹೊರಹೊಮ್ಮಿದೆ ತರಬೇತಿ ಅತ್ಯಂತ ಅವಶ್ಯಕತೆ ಇತ್ತು ಎಂದು ಹಾಸನದ ಡಿ.ಎಸ್‌.ಎಸ್‌. ಹಿರಿಯ ಮುಖಂಡ ಶ್ರೀಧರ್ ಕಲವೀರ ಹೇಳಿದರು.   

ತಾಲೂಕಿನ ಟಿಬೆಟಿಯನ್ ಕಾಲನಿಯ ಕ್ಯಾಂಪ್ ನಂ.1ರ ಶಾರ್ಟ್ಸೆ ಯುನಿವರ್ಸಿಟಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಬೆಂಗಳೂರು ಘಟಕದ  ರಾಜ್ಯ ಮಟ್ಟದ ಡಿ.ಎಸ್‌.ಎಸ್‌. ಪದಾಧಿಕಾರಿಗಳ ಎರಡು ದಿನಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾಡಿದರು. ಶಿಬಿರದ ಸದುಪಯೋಗ ಪಡೆದು ನಿಮ್ಮ ಜಿಲ್ಲೆಗಳಲ್ಲಿ ವಿಚಾರಗಳನ್ನು ಹಂಚಿಕೊಂಡು ಸಂಘಟನೆಯನ್ನು ಬಲಪಡಿಸಿ ಎಂದರು. ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಂಚಾಲಕ ಎಮ್‌.ಗುರುಮೂರ್ತಿ ಪ್ರಸ್ತುತ ವರ್ತಮಾನದಲ್ಲಿ ಚಳುವಳಿಯನ್ನು ಕಟ್ಟುವಲ್ಲಿ ಡಿ.ಎಸ್‌.ಎಸ್‌. ಕಾರ್ಯಕರ್ತರ ಜವಾಬ್ದಾರಿ, ಕರ್ತವ್ಯ, ಆಲೋಚನೆಗಳ ಬಗ್ಗೆ, ಕೃಷ್ಣಪ್ಪನವರ ಆದರ್ಶಗಳ ಬಗ್ಗೆ ತಿಳಿಸಿದರು. ತರಬೇತಿಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ ಎಸ್‌.ಫಕ್ಕೀರ​‍್ಪ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.   

ರಾಜ್ಯ ಸಂಘಟನಾ ಸಂಚಾಲಕ ಎಸ್‌.ಪಕ್ಕೀರ​‍್ಪ ಪ್ರಾಸ್ತಾವಿಕ ಮಾತನಾಡಿ ಬಹಳಷ್ಟು ಕಷ್ಟಪಟ್ಟು ಶಿಬಿರ ಆಯೋಜಿಸಲಾಗಿದ್ದು ಎಲ್ಲರೂ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಗೆಶೆ ಚಂಗ್‌ಚುಪ್ ಸಂಘೆ, ಗೆಶೆ ಲೋಬ್ಸಂಗ್ ಟೆಂಪಾ, ಹನುಮಂತಪ್ಪ ಕಾಕರಗಲ್ಲ, ಬಿ. ಎನ್‌. ಗಂಗಾಧರ​‍್ಪ, ನಾಗಮಂಗಲ ವೆಂಕಟೇಶ್, ರತ್ನಮ್ಮ, ಜೀವಿಕಾ, ಶಿವಬಸಪ್ಪ, ಡಾ.ಅವನಿಕಾ, ಬೆಂಗಳೂರು ಹಾಗೂ ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರು, ತಾಲೂಕಾಧ್ಯಕ್ಷರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಪಿ.ನಾಗೇಂದ್ರ ಸ್ವಾಗತಿಸಿದರು. ಎಸ್‌.ಡಿ.ಮುಡೆಣ್ಣವರ ಮತ್ತು ಶಿವಪ್ಪ ಜಾಲಹಳ್ಳಿ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ