ನಡೆದಾಡುವ ದೇವರು ಗುರು ಪುಟ್ಟರಾಜರು: ಡಾ. ಗೋವಿಂದ
ಬಳ್ಳಾರಿ 04: ಗಾನಯೋಗಿ ನಾಡೋಜ ಕವಿ ಗವಾಯಿ ಪುಟ್ಟರಾಜರು ವೃತ್ತಿ ರಂಗಭೂಮಿ ಕಲೆಯ ಶ್ರೇಯೋಭಿವೃದ್ಧಿಗೆ ಕಾರಣಕರ್ತರಾದರೆಂದು ಲಲಿತಕಲಾ ನಿಕಾಯದ ಡೀನ ಡಾ. ಕೆ ರವೀಂದ್ರನಾಥ ಅಭಿಪ್ರಾಯಪಟ್ಟರು. ಅವರು ಮಾ. 3ರಂದು ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಪುಟ್ಟರಾಜ ಗವಾಯಿಗಳವರ 107ನೇ ಜಯಂತ್ಯೋತ್ಸವ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಗುರು ಪುಟ್ಟರಾಜರು ವೀರೇಶ್ವರ ಪುಣ್ಯಾಶ್ರಮದಲ್ಲಿ ಅಂದ ಅನಾಥ ಮಕ್ಕಳ ಬಾಳಿಗೆ ಬೆಳಕಾದರು.ಅಲ್ಲದೇ ವೀರೇಶ್ವರ ಪುಣ್ಯಾಶ್ರಮದಲ್ಲಿ ಹಿಂದುಸ್ಥಾನಿ ಸಂಗೀತ ಕಲಿಯಲು ಅನುವು ಮಾಡಿಕೊಟ್ಟರಲ್ಲದೆ,ಸ್ವತಃ ಸಾಹಿತಿಗಳಾಗಿ ಉತ್ತಮ ವಾಜ್ಮಿಗಳಾಗಿದ್ದರೆಂದರು. ಅಧ್ಯಕ್ಷತೆ ವಹಿಸಿದ್ದ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾದ ಡಾ.ಗೋವಿಂದ ಅವರು ಮಾತನಾಡಿ ನಡೆದಾಡುವ ದೇವರೆಂದು ಖ್ಯಾತಿಹೊಂದಿದ ಪುಟ್ಟರಾಜರು ಗಾನಗಾರುಡಿಗರಾಗಿ ವಿಶ್ವಮಾನ್ಯರಾದರೆಂದರೆ ತಪ್ಪಾಗಲಿಕ್ಕಿಲ್ಲ. ಇಂದಿಗೂ ಅಪಾರ ಜನ ಮಾನಸದಲ್ಲಿ ಅಚ್ಚಳಿಯದೆ ಇದ್ದಾರೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಗೀತ ವಿಭಾಗದ ವಿದ್ಯಾರ್ಥಿಗಳು ಪುಟ್ಟರಾಜ ಗವಾಯಿಗಳು ರಚಿಸಿದ ಸ್ತುತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.