ಬಳ್ಳಾರಿ

ಆರ್ಟಿಪಿಸಿಆರ್ ಟೆಸ್ಟ್ ನಿಂದ ಕೋವಿಡ್ ಸೋಂಕಿತರ ಸಂಖ್ಯೆ ಇಳಿಕೆ: ಡಿಸಿ ನಕುಲ್

ಆರ್ಟಿಪಿಸಿಆರ್ ಟೆಸ್ಟ್ ನಿಂದ ಕೋವಿಡ್ ಸೋಂಕಿತರ ಸಂಖ್ಯೆ ಇಳಿಕೆ: ಡಿಸಿ ನಕುಲ್

ಬಳ್ಳಾರಿ 07: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದಕ್ಕೆ ಆರ್ಟಿಪಿಸಿಆರ್ ಟೆಸ್ಟ್ ಮುಖ್ಯ ಕಾರಣವೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. 

ನಗರದ ಡಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಆ್ಯಂಟಿಜೆನ್ ಕಿಟ್ಗಳಿಂದ ಕೊರೊನಾ ಟೆಸ್ಟ್ ಮಾಡಲಾಗುತ್ತಿತ್ತು. ಆದರೆ ಈಗ ಆರ್ಟಿಪಿಸಿಆರ್ ಟೆಸ್ಟ್ ಬೆಸ್ಟ್ ಅನ್ನಿಸುತ್ತಿದ್ದು, ಹೆಚ್ಚೆಚ್ಚು ಟೆಸ್ಟ್ ಮಾಡಲಾಗುತ್ತಿದೆ. ಇದರಿಂದ ಸೋಂಕಿತರನ್ನು ಬಹುಬೇಗನೆ ಪತ್ತೆ ಹಚ್ಚಬಹುದು. ಪ್ರತಿದಿನ ಅಂದಾಜು 2800ರಿಂದ 3000 ಮಂದಿಯನ್ನ ಈ ಕೋವಿಡ್ ಟೆಸ್ಟ್ಗೆ ಒಳಪಡಿಸಲಾಗುತ್ತಿದೆ ಎಂದರು. ಆರ್ಟಿಪಿಸಿಆರ್ ಟೆಸ್ಟ್ನಿಂದ ಕೋವಿಡ್ ಸೋಂಕಿತರ ಸಂಖ್ಯೆ 

ಇಳಿಮುಖ: ಡಿಸಿ ನಕುಲ್ ಸೋಂಕಿತರ ಪ್ರಮಾಣ ಕಡಿಮೆಯಾಗಿದೆ ಅಂದ ಮಾತ್ರಕ್ಕೆ ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಅಂತಲ್ಲ. ಸೋಂಕು ಹರಡುವಿಕೆ ಪ್ರಮಾಣ ತಗ್ಗಿದೆಯಷ್ಟೇ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜತೆಗೆ ಸ್ಯಾನಿಟೈಸರ್ ಬಳಸಬೇಕು ಎಂದು ಹೇಳಿದರು. ಈಗಾಗಲೇ ಜಿಲ್ಲೆಯ ಆಯಾ ತಹಶೀಲ್ದಾರ್ಗಳಿಗೆ ಸಭೆ, ಸಮಾರಂಭಗಳನ್ನು ಬಹಳ ಎಚ್ಚರಿಕೆಯಿಂದ ನಡೆಸುವಂತೆ ಸೂಚಿಸಲಾಗಿದೆ. ಅಲ್ಲಿ ಏನಾದರೂ ಅನಾಹುತಗಳು ಸಂಭವಿಸಿದರೆ ಆಯೋಜಕರೇ ಹೊಣೆಗಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದರು

ಸುದ್ದಿ ಓದಿ