ಮನರಂಜನೆ

ಶಾಸಕ ಜಮೀರ್ ಅಹ್ಮದ್ ನಿವಾಸಕ್ಕೆ ಡಿ ಬಾಸ್ ಭೇಟಿ

ಶಾಸಕ ಜಮೀರ್ ಅಹ್ಮದ್ ನಿವಾಸಕ್ಕೆ ಡಿ ಬಾಸ್ ಭೇಟಿ

ಬೆಂಗಳೂರು, ಫೆ 25: ಸ್ಯಾಂಡಲ್ ವುಡ್ ನಲ್ಲಿ ದಿನಕ್ಕೊಂದು ಬಗೆಯ ವಿದ್ಯಮಾನಗಳಿಗೇನೂ ಕೊರತೆಯಿಲ್ಲ. ಎರಡು ದಿನಗಳಿಂದ ಚರ್ಚೆಯಲ್ಲಿದ್ದ ‘ಪೊಗರು’ ಚಿತ್ರದ ವಿವಾದ ಅಂತ್ಯಗೊಂಡಿದೆ.  ಜಗ್ಗೇಶ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ‘ಖಾರಾ’ ಬಾತ್ ದರ್ಶನ್ ಅವರ ವಿನಯಪೂರ್ಣ ಹೇಳಿಕೆಯೊಂದಿಗೆ ತಾರ್ಕಿಕ ಅಂತ್ಯ ಕಂಡಿದೆ. ಏತನ್ಮಧ್ಯೆ ದರ್ಶನ್ ಅವರು ಶಾಸಕ ಜಮೀರ್ ಅಹ್ಮದ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ದರ್ಶನ್ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡ ಜಮೀರ್ ಅಹ್ಮದ್ ಮತ್ತು ಪುತ್ರ ಹಾಗೂ ನಟ ಝೈದ್ ಖಾನ್ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ.  ಈ ಬಗ್ಗೆ ಆಲ್ ಇಂಡಿಯಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಟ್ವಿಟರ್ ನಲ್ಲಿ ಹಂಚಿಕೊಂಡಿದೆ.

ಝೈದ್ ಖಾನ್ ಮೊದಲ ಸಿನಿಮಾ ‘ಬನಾರಸ್’ ಬಿಡುಗಡೆಯನ್ನು ಎದುರು ನೋಡುತ್ತಿರುವ ಸಂದರ್ಭದಲ್ಲಿ ಡಿ ಬಾಸ್ ಭೇಟಿಯು ಜಮೀರ್ ಕುಟುಂಬಕ್ಕೆ ಸಂತಸ ತಂದಿದೆ. ಇತ್ತೀಚಿಗಷ್ಟೆ ಜಮೀರ್ ಅಹ್ಮದ್ ಮಗಳ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ್ದಾರೆ. ಸ್ಯಾಂಡಲ್ ವುಡ್ ನಿಂದ ಕೆಲವರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ಇದೀಗ ದರ್ಶನ್ ಮನೆಗೆ ಭೇಟಿ ನೀಡಿ ಜಮೀರ್ ಕುಟುಂಬದ ಜೊತೆ ಕೆಲ ಸಮಯ ಕಾಲಕಳೆದಿದ್ದಾರೆ. ಅಂದಹಾಗೆ ದರ್ಶನ್ ಸದ್ಯ ರಾಬರ್ಟ್ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಮಾರ್ಚ್ 11ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ತೆಲುಗು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ.

  


ಸುದ್ದಿ ಓದಿ