ರಾಷ್ಟ್ರೀಯ

ಹೆಸರಾಂತ ನೃತ್ಯಪಟು ಅಸ್ತಾದ್ ದೆಬೂ ನಿಧನ

ಹೆಸರಾಂತ ನೃತ್ಯಪಟು ಅಸ್ತಾದ್ ದೆಬೂ ನಿಧನ

ಮುಂಬೈ,ಡಿ.10 :ಭಾರತೀಯ ಮತ್ತು ಪಾಶ್ಚಾತ್ಯ ಶೈಲಿಯ ಅಪರೂಪದ  ನೃತ್ಯಪಟು ಅಸ್ತಾದ್ ದೆಬೂ ನಿಧನರಾಗಿದ್ದಾರೆ. ಅವರಿಗೆ  73 ವರ್ಷ ವಯಸ್ಸಾಗಿತ್ತು. ಕಥಕ್ ಮತ್ತು ಕಥಕಳಿ ನೃತ್ಯ ತರಬೇತಿ ನೀಡುತ್ತಿದ್ದ ದೆಬೂ ಇಂದು ಮುಂಜಾನೆ  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಇತ್ತಿಚೆಗೆ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ದೆಬೂ ಅವರು ನಿಧನರಾಗಿದ್ದು, ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಅಂತ್ಯ ಸಂಸ್ಕಾರವನ್ನು ಪ್ರತ್ಯೇಕವಾಗಿ ನಡೆಸಲಾಯಿತು ಎಂದು ದೆಬೂ ಅವರ ಸ್ನೇಹಿತೆ ಪದ್ಮಾ ಆಳ್ವಾ ತಿಳಿಸಿದ್ದಾರೆ. 1970 ಮತ್ತು 80 ರ ದಶಕದಲ್ಲಿ ಭಾರತೀಯ ನೃತ್ಯ ಪ್ರಾಕಾರಕ್ಕೆ ವಿನೂತನ ಶೈಲಿ ಅಳವಡಿಸಿದ್ದ ದೆಬೂ ಅವರ ಚಾಣಾಕ್ಷತನ ಹಲವರ ಹುಬ್ಬೇರಿಸುವಂತೆ ಮಾಡಿತ್ತು.70 ಹೆಚ್ಚು  ದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು.    ದೆಬೂ ಅವರ ನಿಧನಕ್ಕೆ ಖ್ಯಾತ ಚಿತ್ರ ನಟ ಅನುಪಮ್ ಖೇರ್ ಸೇರಿದಂತೆ ಹಲವು ಕಲಾವಿದರು ಕಂಬನಿ  ಮಿಡಿದ್ದಾರೆ.

ಸುದ್ದಿ ಓದಿ