ಸಂಕೇಶ್ವರದಲ್ಲಿ ಡಿ. 8ರಿಂದ ಪ್ಲೋರಬಾಲ್ ಪಂದ್ಯಾವಳಿ
ರಾಜ್ಯದ 33 ಜಿಲ್ಲೆಯಿಂದ ಸುಮಾರು 1050 ಕ್ರೀಡಾಪಟುಗಳು ಹಾಗೂ 60 ತಂಡಗಳು ಭಾಗವಹಿಸಲಿವೆ
ಸಂಕೇಶ್ವರ 03: ಶೈಕ್ಷಣಿಕ ಜಿಲ್ಲೆ 2023-24 ನೇಯ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವಿಭಾಗದ 19 ವರ್ಷದೊಳಗಿನ ಬಾಲಕ, ಬಾಲಕೀಯರ ರಾಜ್ಯಮಟ್ಟದ “ಪ್ಲೋರ ಬಾಲ್” ಪಂದ್ಯಾವಳಿಗಳನ್ನು ಎಸ್.ಡಿ.ವ್ಹಿ.ಎಸ್. ಸಂಘದ ಮೈದಾನದಲ್ಲಿ ದಿ. 8ಹಾಗೂ 9ರಂದು ಹಮ್ಮಿಕೊಳ್ಳಲಾಗಿದ್ದು, ಹಗಲು ರಾತ್ರಿ 9ಗಂಟೆವರೆಗೆ ಮಾತ್ರ ಈ ಕ್ರಿಡೆಗಳು ಜರುಗಲಿವೆ ಎಂದು ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ, (ಪದವಿಪೂರ್ವ) ಉಪನಿರ್ದೇಶಕ ಪಿ.ಆಯ್. ಭಂಡಾರೆ ಹೇಳಿದರು.
ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರುಈ ಪ್ಲೋರ್ ಬಾಲ್ ಪಂದ್ಯಾವಳಿಯಲ್ಲಿ ರಾಜ್ಯದ 33 ಜಿಲ್ಲೆಯಿಂದ ಸುಮಾರು 1050 ಕ್ರೀಡಾಪಟುಗಳು ಹಾಗೂ 60 ತಂಡಗಳು ಭಾಗವಹಿಸಲಿದ್ದು, ಸಂಕೇಶ್ವರದಲ್ಲಿ ಇದೆ ಮೊದಲನೆಯ ಬಾರಿಗೆ ಇಂತಹ ಪಂದ್ಯಾವಳಿ ಜರುಗುವುದು ವಿಶೇಷವೆಂದು ಹೆಮ್ಮೆಯಿಂದ ಹೇಳಿದರು.
ಈ ಪಂದ್ಯಾವಳಿಯು ನಮ್ಮ ಗಡಿಭಾಗದಲ್ಲಿ ಅತಿ ವಿಶೇಷವಾಗಿದೆ, ಈ ಪಂದ್ಯಾವಳಿಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಗೆಲವು ಪಡೆದುಕೊಂಡು ಮುಂದೆ ಭವಿಷ್ಯದಲ್ಲಿ ಓಲಿಂಪಿಕ ಹಾಗೂ ಇನ್ನಿತರ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಕೂಡ ಭಾಗವಹಿಸುವ ಅವಕಾಶವಿರುತ್ತದೆ ಎಂದು ಚಿಕ್ಕೋಡಿ ದೈ.ಶಿ. ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಮ್. ಹುದ್ದಾರ ಮತ್ತು ಸಂಕೇಶ್ವರ ಎಸ್.ಡಿ.ವ್ಹಿ.ಎಸ್. ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಎಸ್.ಯು. ಯರಗಟ್ಟಿ ಹೇಳಿದರು. ಎಸ್.ಡಿ.ವ್ಹಿ.ಎಸ್. ಸಂಘದ ಸಂಚಾಲಕ ವಿನಯಗೌಡಾ ಪಾಟೀಲ ಆಡಳಿತ ಅಧಿಕಾರಿ ಬಿ.ಎ. ಪೂಜಾರಿ, ಕಾರ್ಯದರ್ಶಿ, ಜಿ.ಸಿ. ಕೋಟಗಿ, ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಕ್ರಿಡಾಪಟುಗಳಿಗೆ ಹಾಗೂ ತಂಡದ ವ್ಯವಸ್ಥಾಪಕರಿಗೆ ಸೂಚನೆಗಳು
ತಂಡದ ವ್ಯವಸ್ಥಾಪಕರು ತಮ್ಮ ನಿಯೋಜನೆ ಆದೇಶವನ್ನು ದ್ವಿಪ್ರತಿಯಲ್ಲಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ, ಕ್ರೀಡಾಪಟುಗಳಿಗೆ ಸಂಬಂಧಿಸಿದಂತೆ ಈ ಕೆಳಗೆ ನಮೂದಿಸಲಾದ ಕಾಗದಪತ್ರಗಳು ಕಡ್ಡಾಯವಾಗಿ ಒದಗಿಸುವುದು, ಕ್ರಿಡಾಪುಗಳ ಎಸ್.ಜಿ.ಎಫ್.ಆಯ್. ಅರ್ಹತಾ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ. ಮೂಲ ಅಂಕಪಟ್ಟಿ, ಹಾಗೂ ಜೆರಾಕ್ಸ ಪ್ರತಿ, ಇಂಡೆಮ್ನಿಟಿ ಬಾಂಡ್, ಕಾಲೇಜಿನ ಗುರುತಿನ ಚೀಟಿ, ಆಧಾರ ಕಾರ್ಡ ಪ್ರತಿ, ಜನನ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ. ಮೂಲ ಅಂಕಪಟ್ಟಿಯನ್ನು ಹೊರತುಪಡಿಸಿ ಉಳಿದ ಕಾಗದಪತ್ರಳಿಗೆ ಸಂಬಂಧಿಸಿದ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನಿರ್ದೇಶಕರು ಧೃಢಿಕರಿಸಿರಬೇಕು, ಭಾಗವಹಿಸುವ ಕ್ರಿಡಾಪಟುಗಳು ದಿ: 01/01/2005 ರ ನಂತರ ಜನಿಸಿರಬೇಕು, ಕ್ರಿಡಾಪಟುಗಳು ತಮ್ಮ ದೈನಂದಿನ ಬಳಕೆಯ ಅಗತ್ಯ ವಸ್ತುಗಳು ತಮ್ಮ ಮೆಡಿಸಿನಗಳು, ಲಘು ಹಾಸಿಗೆ ಹಾಗೂ ಹೊದಿಗೆ, ಮತ್ತು ಬೀಗ ಇತ್ಯಾದಿಗಳನ್ನು ತಾವೇ ವ್ಯವಸ್ಥೆ ಮಾಡಿಕೊಳ್ಳತಕ್ಕದ್ದು, ಪಂದ್ಯಗಳು ನಡೆಯುವಾಗ ಕ್ರಿಡಾಪಟುಗಳು ಕ್ರಿಡಾ ಮನೋಭಾವನೆಯನ್ನು ಮೆರೆಯಬೇಕು, ತಿರ್ುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ, ಅವರ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರಬೇಕು, ತಮಗೆ ಗೊತ್ತುಪಡಿಸಿದ ವಸತಿ ಸ್ಥಳದಲ್ಲಿಯೇ ಮಾತ್ರ ಕ್ರಿಡಾಪುಟಗಳು ಇರತಕ್ಕದ್ದು, ತಂಡದ ವ್ಯವಸ್ಥಾಪಕರ ಸಭೆಯನನ್ನು ದಿನಾಂಕ 07/12/2023 ರಂದು ಸಾಯಂಕಾಲ 8.00 ಗಂಟೆಗೆ ಎಸ್.ಡಿ.ವ್ಹಿ.ಎಸ್. ಪದವಿಪೂರ್ವ ಕಾಲೇಜು ಸಂಕೇಶ್ವರ, ತಾ: ಹುಕ್ಕೇರಿಯ ಸಭಾಂಗಣದಲ್ಲಿ ನಡೆಸಲಾಗುವುದು, ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ಕ್ರಿಡಾಪಟುಗಳು ಸಮವಸ್ತ್ರವನ್ನು ಹೊಂದಿರಲೇಬೇಕು, ದಿ. 08ರಂದು ಬೆಳಿಗ್ಗೆ 7 ಗಂಟೆಗೆ ಪಂದ್ಯಾವಳಿಗಳ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ತಂಡದ ವ್ಯವಸ್ಥಾಪಕರು ಎಲ್ಲಾ ಸಮಯದಲ್ಲಿ ತಮ್ಮ ತಂಡದೊಂದಿಗೆ ಇದ್ದು, ತಮ್ಮ ಕ್ರಿಡಾಪಟುಗಳು ಶಿಸ್ತಿನಿಂದ ವರ್ತಿಸುವಂತೆ ನೋಡಿಕೊಳ್ಳಬೇಕು ಎಂದು ಪಿ.ಆಯ್. ಭಂಡಾರೆ, ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, (ಪದವಿಪೂರ್ವ) ಚಿಕ್ಕೋಡಿ, ಇವರು ಹೇಳಿದರು.