ರಾಜ್ಯಾಧ್ಯಕ್ಷರಾಗಿ ಡಿ.ರಾಮಾಂಜಿನೇಯ ಆಯ್ಕೆ
ಬಳ್ಳಾರಿ 01: ಕರ್ನಾಟಕ ಪ್ರದೇಶ ಕುರುಬರ ಸಂಘ, ಬೆಂಗಳೂರು ಕಟ್ಟಡ ಸಮಿತಿಯ ರಾಜ್ಯಾಧ್ಯಕ್ಷರಾಗಿ ಬಳ್ಳಾರಿ ಜಿಲ್ಲೆಯ ಕುಡತಿನಿ ಪಟ್ಟಣದ ನಿವಾಸಿಯಾದ ಡಿ. ರಾಮಾಂಜಿನೇಯ ರವರು ಆಯ್ಕೆಯಾಗಿದ್ದಾರೆ.
ಕರ್ನಾಟಕ ಪ್ರದೇಶ ಕುರುಬರ ಸಂಘದ ಕಟ್ಟಡ ಸಮಿತಿಯ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಕುಡತಿನಿ ಪಟ್ಟಣದ ಹಿರಿಯ ಧುರೀಣರಾದ ಡಿ. ರಾಮಾಂಜಿನೇಯ, ಅವರು ಬಿ.ಸುಬ್ರಮಣ್ಯರವರಿಗೆ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಿ.ವೆಂಕಟೇಶ್ಮೂರ್ತಿರವರಿಗೆ, ಹಾಗೂ ಸಮುದಾಯದ ಹಿರಿಯ ಧುರೀಣರುಗಳಾದ ಕೆ.ಎಂ.ರಾಮಚಂದ್ರಪ್ಪ, ಶಾಂತಪ್ಪ, ಸೋಮಣ್ಣ, ಸಂಘದ ರಾಜ್ಯದ ನಿರ್ದೇಶಕರಿಗೆ ಧನ್ಯವಾದ ಹೇಳಿದ್ದು, ವಹಿಸಿರುವ ಜವಾಬ್ದಾರಿಯನ್ನು ಮನಸಾಕ್ಷಿಗೆ ಅನುಗುಣವಾಗಿ ಪ್ರಮಾಣೀಕವಾಗಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದ್ದಾರೆ.