ಕರೆಂಟ್ ಶಾರ್ಟ್ ಸಕ್ರ್ವಿಟ್-ಪರಿಹಾರ ವಿತರಣೆ
ಬಳ್ಳಾರಿ 26: ವೈ. ಕಗ್ಗಲ್ ಗ್ರಾಮದಲ್ಲಿ ವೆಂಕಟೇಶ ಎಂಬುವರ ಮನೆಯಲ್ಲಿ ಕರೆಂಟ್ ಶಾರ್ಟ್ ಸಕ್ರ್ವಿಟ್ ನಿಂದ ಬಟ್ಟೆ ಮತ್ತು ಕೆಲವು ವಸ್ತುಗಳು ಸುಟ್ಟು ಹೋಗಿದ್ದು,ಬಳ್ಳಾರಿ ಗ್ರಾಮಾಂತರ ಶಾಸಕರು ಬಿ ನಾಗೇಂದ್ರನವರ ಆದೇಶದಮೇರೆಗೆ ಶಾಸಕ ನಾಗೇಂದ್ರನವರ ಆಪ್ತ ಸಹಾಯಕ ಅನಂತ್ ರಾಜ್ ಅವರು ಸಂತ್ರಸ್ಥರ ಮನೆಗೆ ತೆರಳಿ ಅವರ ಕುಟುಂಬಕ್ಕೆ 15000 ರೂ ಸಹಾಯದ ಹಣವನ್ನು ಪರಿಹಾರ ನೀಡಲಾಯಿತು. ಗ್ರಾಮದ ಹಿರಿಯರು,ಪಕ್ಷದ ಮುಖಂಡರು ಉಪಸ್ಥಿತರಿದ್ದರು.