ಬಳ್ಳಾರಿ

ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಅಗತ್ಯ: ನಾಗರಾಜರೆಡ್ಡಿ

ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಅಗತ್ಯ: ನಾಗರಾಜರೆಡ್ಡಿ

ಲೋಕದರ್ಶನ ವರದಿ 

ಬಳ್ಳಾರಿ 10: ನಾಡಹಬ್ಬ ದಸರಾ ಪ್ರಯುಕ್ತ ಇಂತಹ ವಿಶೇಷ ಧಾರ್ಮಿಕ ಕಾರ್ಯಕ್ರಮ ಗಳನ್ನು ಸಾರ್ವಜನಿಕವಾಗಿ ಹಮ್ಮಿಕೊಳ್ಳುವುದರಿಂದ ಸಮಾಜದಲ್ಲಿ ಧಾರ್ಮಿಕ ಭಾವನೆಗಳನ್ನು ಮೂಡಿಸಲು ಸಹಕಾರಿಯಾಗಲಿದೆ ಮತ್ತು ಇಂದಿನ ಆಧುನಿಕ ಯುಗದಲ್ಲಿ ಮೋಬೈಲ್‌ಗೆ ಸೀಮಿತವಾಗಿರುವ ಯುವ ಜನಾಂಗಕ್ಕೆ ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಅಗತ್ಯವಿದೆ ಎಂದು ವಿ ನಾಗರಾಜರೆಡ್ಡಿಯವರು ಅಭಿಪ್ರಾಯಪಟ್ಟರು.  

 ನಗರದ ಬಂಡಿಹಟ್ಟಿಯ ಪ್ರದೇಶದ ಶ್ರೀ ಬನ್ನಿ ಮಹಾಂಕಾಳಮ್ಮ ದೇವಸ್ಥಾನದಲ್ಲಿ ಪ್ರಥಮ ವರ್ಷದ ಶರನ್ನವರಾತ್ರಿ ಉತ್ಸವಗಳ ಮೂರನೇ ದಿನದ ಕಾರ್ಯಕ್ರಮವನ್ನು ಉದ್ಘಾಟನೆ ಮತನಾಡಿದರು.   

ಬಿ.ಜೆ.ಪಿ ಪಕ್ಷದ ಕೌಲ್‌ಬಜಾರ್ ಘಟಕದ ಅಧ್ಯಕ್ಷರಾದ ಶಂಕ್ರ​‍್ಪ ಪದಾಧಿಕಾರಿಗಳಾದ ಹೊನ್ನೂರಸ್ವಾಮಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾ ಕೋಶಾಧ್ಯಕ್ಷರಾದ ಟಿ ಎಂ. ಪಂಪಾಪತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  

ಝಿ ಟಿ ವಿ ಯ ಸರಿಗಮಪ ಸ್ಪರ್ದಿ ಕುಮಾರಿ ಭೂಮಿಕಾ ಗಡಾದ್, ಮತ್ತು ತಂಡ ಹೊಸಪೇಟೆ ಇವರು ಸುಗಮ ಸಂಗೀತ ಮತ್ತು ಚಲನಚಿತ್ರ ಗೀತೆಗಳ ಗಾಯನ ನಡಿಸಿಕೊಟ್ಟರು.   

ಇದಕ್ಕು ಮುಂಚೆ ತೊಲಮಾಮಿಡಿ ಚಿಕ್ಕಣ್ಣ, ಅಮಾತಿ ಬಸವರಾಜ್, ಪೀರಾಸಾಬ್ ಮತ್ತು ಸಿದ್ದಮ್ಮನಹಳ್ಳಿ ವೀರೇಶ್ ಶ್ರೀದೇವಿ ಪುರಾಣ ಪ್ರವಚನ ಮಾಡಿದರು.  

ಉತ್ಸವ ಸಮಿತಿಯ ಅಧ್ಯಕ್ಷರಾದ ವಿ ಮಹೇಶ್ ಮತ್ತು ಕಾರ್ಯನಿರ್ವಾಹಕರಾದ ವಿ ರಾಮಾಂಜಿನೇಯಲು ವಿ ಜಗನ್ನಾಥ ಅಂದ್ರಾಳು, ಕೆ.ಇ.ಬಿ ಗಂಗಣ್ಣ, ಕಟ್ಲೇರು ವೀರೇಶ್, ವಿ ಶ್ರೀನಿವಾಸುಲು, ಕೆ ರಾಜಶೇಖರ್, ದೇವರಹಳ್ಳಿ ವಸಂತ, ಪೆನ್ನಮ್ಮನಹಳ್ಳಿ ವೆಂಕಟೇಶ್ ಈ ಗೋವರ್ಧನ್‌ರೆಡ್ಡಿ, ಮಹಾತ್ಮಗಾಂಧಿ ಶಾಲೆಯ ಮುಖ್ಯ ಶಿಕ್ಷಕರಾದ ಎಸ್ ನಾಗರಾಜ್, ಕೆ ಶೇಖರ್‌ಗೌಡ, ಜಿ ರವಿ ಮತ್ತು ಬಂಡಿಹಟ್ಟಿ ಗ್ರಾಮದ ನೂರಾರು ಭಕ್ತರು ಇದ್ದರು. 


ಸುದ್ದಿ ಓದಿ