ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ: ಸಂತೋಷಗೌಡ
ತಾಳಿಕೋಟಿ 14: ಕ್ರೀಡೆಯಲ್ಲಿ ಕೇವಲ ಸೋಲು-ಗೆಲವು ಮುಖ್ಯವಾಗಬಾರದು ಒಳ್ಳೆಯ ಕ್ರೀಡಾ ಮನೋಭಾವ ಹಾಗೂ ಸ್ಪೂರ್ತಿಯೊಂದಿಗೆ ಭಾಗವಹಿಸುವುದು ಮುಖ್ಯವಾಗಬೇಕು ಸೋತಾಗ ನಿರಾಶರಾಗದೆ, ಮುಂದಿನ ಗೆಲುವುಗಾಗಿ ಪ್ರಯತ್ನಿಸಬೇಕು ಎಂದು ಎಬಿಡಿ ಫೌಂಡೇಶನ್ ಉಪಾಧ್ಯಕ್ಷ ಸಂತೋಷಗೌಡ ದೊಡ್ಡಮನಿ ಹೇಳಿದರು.
ದೇ. ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಫತ್ತೇಪೂರ ಗ್ರಾಮದಲ್ಲಿ ಹಜರತ್ ಟಿಪ್ಪು ಸುಲ್ತಾನರ ಜಯಂತಿ ಅಂಗವಾಗಿ ಹಮ್ಮಿಕೊಂಡ ಕ್ರೀಕೆಟ್ ಪಂದ್ಯಾವಳಿಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿ ನನ್ನ ಸಹೋದರರಾದ ಕಾಂಗ್ರೆಸ್ ಮುಖಂಡ ಆನಂದಗೌಡ ದೊಡ್ಡಮನಿಯವರು ಕ್ಷೇತ್ರದಲ್ಲಿರುವ ಯುವಕರಲ್ಲಿ ಕ್ರೀಡಾ ಆಸಕ್ತಿಯನ್ನು ಬೆಳೆಸಲು ಸಾಕಷ್ಟು ಸಹಾಯ ಸಹಕಾರ ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ಯುವಕರಲ್ಲಿವ ಕ್ರೀಡಾ ಪ್ರತಿಭೆಯನ್ನು ಬೆಳೆಸುವದು ಅವರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಬೊಮ್ಮನಹಳ್ಳಿಯ ಭಜರಂಗದಳ ಕ್ರಿಕೆಟ್ ತಂಡಕ್ಕೆ ಎಬಿಡಿ ಫೌಂಡೇಶನ್ದಿಂದ ಕೊಡಮಾಡಿದ ನಗದು ರೂ. 10.000 ಹಾಗೂ ಪಾರಿತೋಷಕ ಮತ್ತು ದ್ವೀತಿಯ ಸ್ಥಾನ ಪಡೆದ ಫತ್ತೇಪೂರ ಟಿಪ್ಪು ಸುಲ್ತಾನ ಕ್ರಿಕೆಟ್ ತಂಡಕ್ಕೆ ರೂ. 5000 ನಗದು ಹಾಗೂ ಪಾರಿತೋಷಕವನ್ನು ಸಹೋದರ ಆನಂದಗೌಡ ದೊಡ್ಡಮನಿ ವಿತರಿಸಿದರು.
ಶಂಕರಗೌಡ ಸಿಂಗನಳ್ಳಿ, ಇಮಾಮಸಾಬ ಮಕಾನದಾರ, ಶಿವನಗೌಡ ಬಿರಾದಾರ, ಮಕ್ಕಾಸಾಬ ಮಕಾನದಾರ, ಪರಶುರಾಮ ಮರಡಿಮನಿ, ಬಸವರಾಜ ಏವೂರ, ಗೌತಮ ಗಿರದಳ್ಳಿ, ಅಯ್ಯಾಜ್ ಮಕಾನದಾರ, ನಿಂಗಪ್ಪ ಹೊನ್ನಳ್ಳಿ, ಸಿದ್ಧಪ್ಪ ಹೊಸಮನಿ ಇದ್ದರು.